ಇಸ್ಲಾಮಿ ದೇಶ ಇಂಡೋನೇಷ್ಯಾದಲ್ಲಿ ಹಂದಿಮಾಂಸ ತಿಂದ ಹಿಂದೂ ಮಹಿಳೆಗೆ ೨ ವರ್ಷ ಜೈಲುಶಿಕ್ಷೆ !

ಬಾಲಿ (ಇಂಡೋನೇಷಿಯಾ) – ಇಲ್ಲಿನ ಲೀನಾ ಮುಖರ್ಜಿ ಎಂಬ ೩೩ ವರ್ಷದ ಮಹಿಳೆ ಹಂದಿಮಾಂಸದ ಪದಾರ್ಥವನ್ನು ತಿಂದು ಅದರ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದಕ್ಕಾಗಿ ಅವರಿಗೆ ೨ ವರ್ಷದ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಪದಾರ್ಥವನ್ನು ತಿನ್ನುವ ಮೊದಲು ಅವಳು ಇಸ್ಲಾಮಿಕ್ ಪ್ರಾರ್ಥನೆ ಮಾಡಿದ್ದಳು. ಸುಮಾತ್ರ ದ್ವೀಪದಲ್ಲಿರುವ ಪಾಲೆಮಾಬಾಗ ಜಿಲ್ಲಾ ನ್ಯಾಯಾಲಯದಲ್ಲಿ ಅವಳ ಮೇಲೆ ಮೊಕದ್ದಮೆ ನಡೆಸಲಾಯಿತು. ಕೆಲವು ಧರ್ಮಗಳು ಮತ್ತು ಗುಂಪುಗಳ ವಿರುದ್ಧ ದ್ವೇಷವನ್ನು ಪ್ರಚೋದಿಸುವ ಉದ್ದೇಶದಿಂದ ಮಾಹಿತಿಯನ್ನು ಪ್ರಸಾರಮಾಡಿದ್ದರಿಂದ ಶಿಕ್ಷೆ ಕೊಡಲಾಗಿದೆ. ಆಕೆಗೆ ಜೈಲು ಶಿಕ್ಷೆಯೊಂದಿಗೆ ದಂಡವನ್ನೂ ವಿಧಿಸಲಾಗಿದೆ. ದಂಡ ಪಾವತಿಸದಿದ್ದರೆ ಇನ್ನೂ ೩ ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಈ ಶಿಕ್ಷೆಯ ಬಗ್ಗೆ ಲೀನಾ ಮುಖರ್ಜಿಯವರು ನಾನು ತಪ್ಪು ಮಾಡಿದ್ದೇನೆ ಎಂದು ನನಗೆ ತಿಳಿದಿದೆ ಆದರೆ ಇಂತಹ ಕಠಿಣ ಶಿಕ್ಷೆಯನ್ನು ನಿರೀಕ್ಷಿಸಿರಲಿಲ್ಲ ಎಂದು ಹೇಳಿದರು.
ಇಂಡೋನೇಷಿಯಾದಲ್ಲಿ ಮುಸ್ಲೀಂರಲ್ಲಿ ಹಂದಿ ಮಾಂಸ ಸೇವನೆ ನಿಷೇಧಿಸಲಾಗಿದೆ. ಆದರೂ ಆ ದೇಶದಲ್ಲಿ ಚೀನಿ ವಂಶದ ಜನರು ಮತ್ತು ಹಿಂದೂ ಪ್ರಾಬಲ್ಯದ ಬಾಲಿದ್ವೀಪದಲ್ಲಿ ವಾಸಿಸುವ ಮುಸಲ್ಮಾನೇತರರು ಹಂದಿಮಾಂಸವನ್ನು ತಿನ್ನುತ್ತಾರೆ.

ಸಂಪಾದಕೀಯ ನಿಲುವು

ಬಹುಸಂಖ್ಯಾತ ಭಾರತದಲ್ಲಿ ಗೋಮಾಂಸ ತಿನ್ನುವವರಿಗೆ ಇಂತಹ ಶಿಕ್ಷೆ ಯಾವಾಗ ?