ಪಾಕಿಸ್ತಾನವು ಅನಧೀಕೃತವಾಗಿ ವಶಪಡಿಸಿಕೊಂಡಿರುವ ಭಾರತದ ಭೂಮಿಯನ್ನು ತೆರವುಗೊಳಿಸಬೇಕು ! – ಭಾರತ

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಹಂಗಾಮಿ ಪ್ರಧಾನಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡ ಭಾರತ !

ನ್ಯೂಯಾರ್ಕ್ (ಅಮೇರಿಕಾ) – ಪಾಕಿಸ್ತಾನವು ಭಯೋತ್ಪಾದನೆಯ ವಿರುದ್ಧ ಕ್ರಮಕೈಗೊಳ್ಳಬೇಕು ಹಾಗೂ ಗಡಿಯಲ್ಲಿ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವುದನ್ನು ನಿಲ್ಲಿಸಬೇಕು. ಪಾಕಿಸ್ತಾನದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಯಬೇಕು. ಮೊಟ್ಟಮೊದಲು ಪಾಕಿಸ್ತಾನವು ಅನಧೀಕೃತವಾಗಿ ವಶಪಡಿಸಿಕೊಂಡಿರುವ ಕ್ಷೇತ್ರ (ಪಾಕಿಸ್ತಾನ ಆಕ್ರಮಿತ ಕಾಶ್ಮೀರ)ವನ್ನು ತೊರೆಯಬೇಕು. ಹಾಗೆಯೆ ೨೬/೧೧ ನ ಮುಂಬಯಿ ಮೇಲಿನ ದಾಳಿಯ ಅಪರಾಧಿಗಳ ಮೇಲೆ ಕ್ರಮಕೈಗೊಳ್ಳಬೇಕು, ಎಂಬ ಶಬ್ದಗಳಿಂದ ಭಾರತವು ಪಾಕಿಸ್ತಾನದ ಹಂಗಾಮಿ ಪ್ರಧಾನಮಂತ್ರಿ ಅನ್ವರ-ಅಲ್-ಹಕ್ ಕಕ್ಕರರವರಿಗೆ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ತರಾಟೆಗೆ ತೆಗೆದುಕೊಂಡಿದೆ. ಪ್ರಧಾನಿ ಕಕ್ಕರ ಇವರು ಮಹಾಸಭೆಯಲ್ಲಿ ಕಾಶ್ಮೀರದ ಪ್ರಶ್ನೆಯನ್ನು ಮಂಡಿಸಿದಾಗ ಭಾರತವು ತರಾಟೆಗೆ ತೆಗೆದುಕೊಂಡಿತು.

ಕಕ್ಕರರವರಿಗೆ ಪ್ರತ್ಯುತ್ತರ ನೀಡುವಾಗ ವಿಶ್ವ ಸಂಸ್ಥೆಯಲ್ಲಿನ ಭಾರತೀಯ ಪ್ರತಿನಿಧಿ ಪೇತಲ ಗೇಹಲೋತ ರವರು ಮಾತನಾಡುತ್ತ, ಪಾಕಿಸ್ತಾನಕ್ಕೆ ವಿಶ್ವ ಸಂಸ್ಥೆಯ ಮಹಾಸಭೆಯ ವ್ಯಾಸಪೀಠವನ್ನು ದುರುಪಯೋಗ ಪಡಿಸಿಕೊಳ್ಳುವ ಅಭ್ಯಾಸವಾಗಿದೆ. ಅದು ಈ ವ್ಯಾಸಪೀಠವನ್ನು ಭಾರತದ ಬಗ್ಗೆ ಮೂರ್ಖತೆಯ ಹಾಗೂ ಸುಳ್ಳು ಪ್ರಚಾರ ಮಾಡಲೆಂದೇ ಸತತವಾಗಿ ಬಳಸುತ್ತಿದೆ. ಭಾರತವು ಪಾಕಿಸ್ತಾನಕ್ಕೆ ತಮ್ಮ ದೇಶದಲ್ಲಿನ ಭಯೋತ್ಪಾದನೆಯನ್ನು ನಾಶಗೊಳಿಸಬೇಕು ಎಂದು ಆಗಾಗ ಹೇಳಿದೆ, ಎಂದು ಹೇಳಿದರು.

ಪಾಕಿಸ್ತಾನದ ಹಂಗಾಮಿ ಪ್ರಧಾನಮಂತ್ರಿಗಳು ಏನು ಹೇಳಿದ್ದರು ?

ಪಾಕಿಸ್ತಾನದ ಹಂಗಾಮಿ ಪ್ರಧಾನಮಂತ್ರಿ ಅನ್ವರ-ಅಲ್-ಹಕ್ ಕಕ್ಕರರವರು ವಿಶ್ವ ಸಂಸ್ಥೆಯ ಮಹಾಸಭೆಯನ್ನು ಸಂಬೋಧಿಸುವಾಗ, ನಮಗೆ ನಮ್ಮ ಎಲ್ಲ ನೆರೆಯ ದೇಶಗಳೊಂದಿಗೆ ಶಾಂತಿಯುತ ಸಂಬಂಧ ಬೇಕಿದೆ. ಭಾರತದೊಂದಿಗಿನ ಉತ್ತಮ ಸಂಬಂಧದ ಪ್ರಮುಖ ಅಂಶವು ಕಾಶ್ಮೀರವಾಗಿದೆ ಹಾಗೂ ವಿಕಾಸಕ್ಕಾಗಿ ಶಾಂತಿಯು ಅವಶ್ಯಕವಾಗಿದೆ. ಭಾರತವು ವಿಶ್ವ ಸಂಸ್ಥೆಯ ಮೇಲ್ವಿಚಾರಣೆಯಲ್ಲಿ ಜಮ್ಮೂ-ಕಾಶ್ಮೀರದಲ್ಲಿ ಸರ್ವಾನುಮತ ಪಡೆದು ಅಂತಿಮ ನಿರ್ಣಯ ತೆಗೆದುಕೊಳ್ಳುವ ಮಹಾಸಭೆಯ ಠರಾವನ್ನೂ ಪಾಲಿಸಿಲ್ಲ. ಆಗಸ್ಟ್ ೨೦೧೯ ರಿಂದ ಭಾರತವು ಅನಧೀಕೃತವಾಗಿ ವಶಪಡಿಸಿಕೊಂಡ ಜಮ್ಮೂ-ಕಾಶ್ಮೀರದಲ್ಲಿ ಸುಮಾರು ೯ ಲಕ್ಷ ಸೈನಿಕರನ್ನು ನೇಮಿಸಿದೆ, ಒಟ್ಟಿನಲ್ಲಿ ಇದರಿಂದ ಅವರು ಕಾಶ್ಮೀರದ ಮೇಲೆ ತಮ್ಮ ನಿರ್ಣಯಗಳನ್ನು ಹೇರಬಹುದು, ಎಂದು ಹೇಳಿದ್ದರು.