ನಿಜ್ಜರ್ ಇವನ ಹತ್ಯೆಯ ಸಾಕ್ಷಿಗಳು ಕೆಲವು ವಾರಗಳ ಹಿಂದೆಯೇ ಭಾರತಕ್ಕೆ ನೀಡಲಾಗಿತ್ತು !

ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರ ದಾವೆ !

ಓಟಾವಾ (ಕೆನಡಾ) – ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರು ಖಲಿಸ್ತಾನಿ ಭಯೋತ್ಪಾದಕ ನಿಜ್ಜರ್ ಇವನ ಹತ್ಯೆಯ ಪ್ರಕರಣದ ಕುರಿತಾದ ಸಾಕ್ಷಿಗಳು ಭಾರತ ಸರಕಾರಕ್ಕೆ ಕೆಲವು ವಾರಗಳ ಹಿಂದೆಯೇ ನೀಡಿದ್ದೇವೆ, ಅವುಗಳು ವಿಶ್ವಾಸಾರ್ಹ್ಯವಾಗಿವೆ, ಎಂದು ದಾವೆ ಮಾಡಿದ್ದಾರೆ; ಆದರೆ ‘ಸಾಕ್ಷಿ ಎಂದು ಭಾರತಕ್ಕೆ ಏನು ನೀಡಿದ್ದಾರೆ ?’, ಇದು ಅವರು ಹೇಳಲಿಲ್ಲ. ಟ್ರುಡೋ ಇವರು, ಅದು (ಭಾರತ) ನಮ್ಮ ಜೊತೆಗೆ ಸಹಭಾಗಿ ಆಗುತ್ತಾರೆ ಎಂಬುದು ನಮಗೆ ವಿಶ್ವಾಸ ಇದೆ ಇದರಿಂದ ಈ ಗಂಭೀರ ಪ್ರಕರಣದ ಮೂಲದ ವರೆಗೆ ತಲುಪಬಹುದು ಎಂದು ಹೇಳಿದರು.

೧. ಕೆನಡಾದಲ್ಲಿನ ‘ಸಿಬಿಸಿ’ ವಾರ್ತಾ ವಾಹಿನಿಯವರ ಪ್ರಕಾರ ಯಾವಾಗ ಭಾರತೀಯ ಅಧಿಕಾರಿಗಳ ಮೇಲೆ ದೇಶ ತೊರೆಯುವ ಒತ್ತಡ ಹೇರಲಾತೋ, ಆಗ ಅವರು ನಿಜ್ಜರ ಹತ್ಯೆಯಲ್ಲಿ ಭಾರತ ಸರಕಾರದ ಹಸ್ತಕ್ಷೇಪದ ಸಾಕ್ಷಿ ಇರುವುದು ನಿರಾಕರಿಸಿರಲಿಲ್ಲ ಎಂದು ದಾವೆ ಮಾಡಿದೆ.

೨. ಈ ವಾರ್ತೆಯಲ್ಲಿ, ನಿಜ್ಜರ ಹತ್ಯೆಯ ತನಿಖೆಗೆ ಸಹಾಯ ಪಡೆಯುವುದಕ್ಕಾಗಿ ಕೆನಡಾದ ಅಧಿಕಾರಿಗಳು ಅನೇಕ ಸಾರಿ ಭಾರತಕ್ಕೆ ಭೇಟಿ ನೀಡಿದ್ದರು. ಕೆನಡಾದ ರಾಷ್ಟ್ರೀಯ ಸುರಕ್ಷಾ ಸಲಹೆಗಾರ್ತಿ ಜೋಡಿ ಥಾಮಸ್ ಆಗಸ್ಟ್ ನಲ್ಲಿ ೪ ದಿನ ಭಾರತದಲ್ಲಿ ಇದ್ದರು. ಈಗೂ ಕೂಡ ಜಿ 20 ಶೃಂಗಸಭೆಯ ಸಮಯದಲ್ಲಿ ಅವರು ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರ ಜೊತೆಗೆ ೫ ದಿನ ಭಾರತದಲ್ಲಿದ್ದರೂ ಎಂದು ಹೇಳಿದೆ.

ಸಂಪಾದಕೀಯ ನಿಲುವು

ಯಾವ ಸಾಕ್ಷಿಗಳು ನೀಡಿದ್ದಾರೆ, ಇದನ್ನು ಟ್ರುಡೋ ಏಕೆ ಬಹಿರಂಗಪಡಿಸುವುದಿಲ್ಲ ?