ಜಸ್ಟಿನ್ ಟ್ರುಡೋ ಇವರು ಬಹಳ ದೊಡ್ಡ ತಪ್ಪು ಮಾಡುತ್ತಿದ್ದು ಅವರು ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ ! – ಅಮೇರಿಕಾದ ಮಾಜಿ ಉನ್ನತ ಅಧಿಕಾರಿ

ಅಮೇರಿಕಾದ ಮಾಜಿ ಉನ್ನತ ಅಧಿಕಾರಿಯಿಂದ ತಪರಾಕಿ !

ವಾಷಿಂಗ್ಟನ (ಅಮೇರಿಕಾ) – ನನಗೆ ಅನಿಸುತ್ತದೆ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರು ಬಹಳ ದೊಡ್ಡ ತಪ್ಪು ಮಾಡಿದ್ದಾರೆ. ಇಲ್ಲಿಯವರೆಗೆ ಅವರು ಸಾಕ್ಷಿಗಳನ್ನು ನೀಡದೆ ಭಾರತದ ಮೇಲೆ ಆರೋಪ ಮಾಡುತ್ತಿದ್ದಾರೆ. ಇದರ ಹಿಂದಿನ ಎರಡು ಸಾಧ್ಯತೆ ಇರಬಹುದು. ಒಂದು ಅವರು ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ ಮತ್ತು ಅವರ ಬಳಿ ಭಾರತ ಸರಕಾರದ ವಿರುದ್ಧ ಅವರು ಮಾಡುತ್ತಿರುವ ಆರೋಪಕ್ಕೆ ಬೆಂಬಲ ನೀಡುವ ಯಾವುದೇ ಸಾಕ್ಷಿ ಇಲ್ಲ. ಅಥವಾ ಇನ್ನೊಂದು ಸಾಧ್ಯತೆ ಎಂದರೆ ಈ ಪ್ರಕರಣದಲ್ಲಿ ನಿಜವಾದ ಸತ್ಯ ಇರಬಹುದು; ಆದರೆ ಯಾವುದೇ ಸಾಧ್ಯತೆಯಲ್ಲಿ ಜಸ್ಟಿನ್ ಟ್ರುಡೋ ಇವರು ಅದನ್ನು ಹೇಳಲೇ ಬೇಕಾಗುವುದು ಏನೆಂದರೆ, ಅವರು ರಕ್ತಪಾತ ಮಾಡಿರುವ ಓರ್ವ ಭಯೋತ್ಪಾದಕನಿಗೆ ಕೆನಡಾದಲ್ಲಿ ಆಶ್ರಯ ಏಕೆ ನೀಡಿದರು ?, ಈ ಪದಗಳಲ್ಲಿ ಅಮೆರಿಕಾದ ಮಾಜಿ ಅಧಿಕಾರಿ ಮಾಯಕೆಲ್ ರುಬಿನ್ ಇವರು ಕೆನಡಾಗೆ ತಪರಾಕಿ ನೀಡಿದರು. ಅವರು ಎ.ಎನ್.ಐ. ಈ ವಾರ್ತಾ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡುತ್ತಿದ್ದರು. ರುಬಿನ್ ಅಮೇರಿಕಾದಲ್ಲಿನ ಅಂತರಾಷ್ಟ್ರೀಯ ಸಂಬಂಧದ ಅಧ್ಯಯನಕಾರರು ಮತ್ತು ಅಮೆರಿಕಾದ ಸರಕಾರದಲ್ಲಿನ ಮಾಜಿ ಉನ್ನತಸ್ಥಾನದ ಅಧಿಕಾರಿ ಆಗಿದ್ದಾರೆ.

ಕೆನಡಾದ ಶತ್ರುತ್ವ ಎಂದರೆ ಇರುವೆಯ ವಿರುದ್ಧ ಆನೆ ಇರುವ ಹಾಗೆ !

ಮಾಯಕೆಲ್ ರುಬಿನ್ ಮಾತು ಮುಂದುವರೆಸುತ್ತಾ, ಈ ಎಲ್ಲಾ ವಿವಾದದಲ್ಲಿ ಭಾರತದ ಕ್ಕಿಂತಲೂ ಕೆನಡಾಗೆ ಅಪಾಯ ಹೆಚ್ಚು ಇದೆ. ಕೆನಡಾ ಏನಾದರೂ ಭಾರತದ ಜೊತೆಗೆ ವಿವಾದ ಎಳೆದುಕೊಂಡರೆ ಆಗ ಈ ಕ್ಷಣಕ್ಕೆ ಅದು ಒಂದು ಇರುವೆಯು ಆನೆಯ ಜೊತೆಗೆ ವೈರತ್ವ ಸಾಧಿಸದ ಹಾಗೆ ಆಗುವುದು. ಕಾರಣ ಭಾರತ ಇದು ಜಗತ್ತಿನಲ್ಲಿ ಎಲ್ಲಕ್ಕಿಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ಕಾರ್ಯತಂತ್ರದ ದೃಷ್ಟಿಯಿಂದ ಕೆನಡಾಗಿಂತಲೂ ಹೆಚ್ಚು ಮಹತ್ವದ್ದಾಗಿದೆ. ವಿಶೇಷವಾಗಿ ಚೀನಾಗೆ ಸವಾಲು ಮತ್ತು ದಕ್ಷಿಣ ಏಷ್ಯಾದಲ್ಲಿನ ಇತರ ಸಮಸ್ಯೆಗಳ ಯೋಚನೆ ಮಾಡಿದರೆ ಭಾರತಾ ಮಹತ್ವದ್ದಾಗಿದೆ ಇದು ಸತ್ಯವಿದೆ ಎಂದು ಹೇಳಿದ್ದಾರೆ.

ಟ್ರುಢೋ ಇವರ ಬಗ್ಗೆ ಯಾರು ವಿಶ್ವಾಸವಿಡುವುದಿಲ್ಲ !

ಕೆನಡಾದಲ್ಲಿ ಶೀಘ್ರದಲ್ಲೇ ಚುನಾವಣೆ ನಡೆಯಲಿದ್ದು ಅದಕ್ಕಾಗಿ ಟ್ರುಡೋ ಇವರು ಈ ಆರೋಪ ಮಾಡಿರುವ ಸಾಧ್ಯತೆಯ ಬಗ್ಗೆ ತಜ್ಞರು ಹೇಳುತ್ತಿದ್ದಾರೆ. ಅದರ ಬಗ್ಗೆ ರುಬಿನ್ ಇವರು, ಟ್ರುಡೋ ಇವರು ಇಲ್ಲಿಯವರೆಗೆ ಯಾವುದೇ ಸಾಕ್ಷಿಗಳನ್ನು ಪ್ರಸ್ತುತಪಡಿಸಿಲ್ಲ. ಆದ್ದರಿಂದ ಯಾವಾಗ ಅವರು ಹೇಳುತ್ತಾರೆ ‘ನನ್ನ ಮೇಲೆ ವಿಶ್ವಾಸವಿಡಿ’, ಆಗ ಅವರ ಮೇಲೆ ಯಾರು ವಿಶ್ವಾಸ ಇಡುವುದಿಲ್ಲ. ಇದೆಲ್ಲಾ ಚುನಾವಣೆಯ ಹಿನ್ನೆಲೆಯಲ್ಲಿ ನಡೆಯುತ್ತಿದೆ. ಆದ್ದರಿಂದ ಈಗಂತೂ ಟ್ರುಡೋ ಸೋಲುತ್ತಿರುವುದು ಕಾಣುತ್ತಿದೆ ಎಂದು ಹೇಳಿದರು.