ಚಲಿಸುತ್ತಿರುವ ರೈಲಿನಲ್ಲಿ ಮಹಿಳಾ ಪೊಲೀಸ್ ಪೇದೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣ
ಅಯೋಧ್ಯೆ (ಉತ್ತರ ಪ್ರದೇಶ) – ಆಗಸ್ಟ್ 30 ರಂದು ಚಲಿಸುತ್ತಿರುವ ರೈಲಿನಲ್ಲಿ ಮಹಿಳಾ ಪೊಲೀಸ್ ಪೇದೆಯ ಮೇಲೆ ಹಲ್ಲೆ ನಡೆಸಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಮೂವರು ಆರೋಪಿಗಳ ಪೈಕಿ ಒಬ್ಬನನ್ನು ಪೊಲೀಸರು ಚಕಮಕಿಯಲ್ಲಿ ಕೊಂದಿದ್ದು, ಇನ್ನಿಬ್ಬರನ್ನು ಬಂಧಿಸಲಾಗಿದೆ. ಈ ಚಕಮಕಿಯಲ್ಲಿ 1 ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಮತ್ತು 2 ಪೊಲೀಸ ಸಿಬ್ಬಂಧಿಗಳು ಗಾಯಗೊಂಡಿದ್ದಾರೆ. ಅಯೋಧ್ಯೆಯ ಪುರಾಕಲಂದರನ ಛತರಿವಾ ಪಾರಾ ಕಾಲ್ ರಸ್ತೆ ಮತ್ತು ಇನಾಯತನಗರದಲ್ಲಿ ನಡೆದ 2 ಚಕಮಕಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ದಾಳಿಯಲ್ಲಿ ಗಾಯಗೊಂಡಿರುವ ಮಹಿಳಾ ಪೊಲೀಸ್ ಪೇದೆ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Saryu Express assault: Woman constable’s ‘attacker’ gunned down in encounter, 2 ‘associates’ arrestedhttps://t.co/dBvikapRyq
— The Indian Express (@IndianExpress) September 22, 2023
ಪುರಾಕಲಂದರ್ ಪ್ರದೇಶದಲ್ಲಿ ಪೊಲೀಸರು ಆರೋಪಿಗಳನ್ನು ಸುತ್ತುವರಿದಿದ್ದರು. ಆರೋಪಿಗಳನ್ನು ಶರಣಾಗುವಂತೆ ಹೇಳಲಾಯಿತು; ಆದರೆ ಅವರು ಗುಂಡು ಹಾರಾಟ ಪ್ರಾರಂಭಿಸಿದಾಗ ಇಬ್ಬರು ಆರೋಪಿಗಳು ಗಾಯಗೊಂಡಿದ್ದು, ಮತ್ತೊಬ್ಬನು ಪರಾರಿಯಾಗಿದ್ದಾನೆ. ಪರಾರಿಯಾಗಿದ್ದ ಅನೀಶ್ ಇನಾಯತ ನಗರದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂಬ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ತೆರಳಿ ಆತನನ್ನು ಹಿಡಿಯಲು ಯತ್ನಿಸಿದಾಗ ಆತ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಪೊಲೀಸರು ಮಾಡಿದ ಪ್ರತೀಕಾರದ ಗುಂಡಿನ ದಾಳಿಯಲ್ಲಿ ಅವನು ಸಾವನ್ನಪ್ಪಿದನು.