ಈಗೇನಾದರೂ ಕೆನಡಾದಲ್ಲಿ ಚುನಾವಣೆ ನಡೆದರೆ ಜಸ್ಟಿನ್ ಟ್ರುಡೊ ಸೋಲು !

ಒಟ್ಟಾವಾ (ಕೆನಡಾ) – ಕೆನಡಾದಲ್ಲಿ ವರ್ಷ 2025 ರಲ್ಲಿ ಚುನಾವಣೆಗಳು ನಡೆಯಲಿವೆ. ಆ ಹಿನ್ನೆಲೆಯಲ್ಲಿ ‘ಇಪ್ಸೋಸ್’ ಈ ಸಂಸ್ಥೆಯು ನಡೆಸಿದ ಒಂದು ಸಮೀಕ್ಷೆಯಲ್ಲಿ ಮುಂದಿನ ಪ್ರಧಾನಿ ಎಂದು ಜಸ್ಟಿನ್ ಟ್ರುಡೊ ಇವರಿಗೆ ಕೇವಲ ಶೇ.31 ಹಾಗೂ ವಿರೋಧ ಪಕ್ಷದ ನಾಯಕ ಪಿಯರೆ ಪೊಯಲಿವರೆ ಇವರಿಗೆ ಶೇ.40 ಜನರು ಆಯ್ಕೆ ಮಾಡಿದ್ದಾರೆ. ಇದರಿಂದ ಟ್ರುಡೊ ಇವರ ಮುಂದಿನ ಚುನಾವಣೆಯಲ್ಲಿ ಸೋಲುವ ಸಾಧ್ಯತೆ ಇದೆ.

1. ‘ಇಪ್ಸೋಸ್‌’ನ ಮುಖ್ಯ ಕಾರ್ಯಕಾರಿ ಅಧಿಕಾರಿ ಡೈರೆಲ್ ಬ್ರಿಕರ್ ಇವರು, ಕೆನಡಾದ ಕಂಜರ್ವೆಟಿವ್ ಪಕ್ಷದ ಸರಕಾರ ಸ್ಥಾಪನೆಯಾಗಬಹುದು. ದೇಶದ ದಿಶೆಯ ಬಗ್ಗೆ ಅಸಮಾಧಾನ ಇರುವುದು ಈ ಸಮೀಕ್ಷೆಯಿಂದ ಕಾಣುತ್ತದೆ.

2. ಸಮೀಕ್ಷೆಯ ಪ್ರಕಾರ, ದೇಶದಲ್ಲಿ ಶೇ. 60 ರಷ್ಟು ಜನರಿಗೆ ಟ್ರುಡೊ ಇವರು ಅವರ ಲಿಬರಲ್ ಪಕ್ಷದ ನಾಯಕತ್ವವನ್ನು ಬೇರೆಯವರಿಗೆ ಹಸ್ತಾಂತರಿಸಬೇಕೆಂದು ಅನಿಸುತ್ತದೆ.

3. ಕೆನಡಾದ ಶೇ. 53 ರಷ್ಟು ಜನರಿಗೆ, ಎನ್.ಡಿ.ಪಿ. ಪಕ್ಷವು ಟ್ರೂಡೊ ಸರಕಾರಕ್ಕೆ ಕೊಟ್ಟ ಬೆಂಬಲವನ್ನು ಹಿಂಪಡೆದು ಚುನಾವಣೆ ನಡೆಸಬೇಕೆಂದೆನಿಸುತ್ತದೆ.

4.ಎನ್.ಡಿ.ಪಿ. ಪಕ್ಷದಲ್ಲಿ 18 ಸಿಖ್ ಸಂಸದರಿದ್ದಾರೆ. ಇದರ ಮುಖ್ಯಸ್ಥ ಜಗಮಿತ್ ಸಿಂಗ್ ಆಗಿದ್ದೂ ಅವರು ಖಲಿಸ್ತಾನವಾದಿಯಾಗಿದ್ದಾರೆ. ಅವರ ಪಕ್ಷದ ಬೆಂಬಲದಿಂದಲೇ ಟ್ರುಡೊ ಸರಕಾರವು ಅಧಿಕಾರದಲ್ಲಿದೆ. ಇದರಿಂದಲೇ ಟ್ರುಡೊ ಖಲಿಸ್ಥಾನವಾದಿಗಳನ್ನು ಬೆಂಬಲಿಸುತ್ತಿದ್ದಾರೆ.