ಖಲಿಸ್ತಾನಿ ನಾಯಕನ ಹತ್ಯೆಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಂತೆ ! – ಜಸ್ಟಿನ್ ಟ್ರುಡೋ

ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರಿಂದ ಭಾರತಕ್ಕೆ ಕರೆ !

ನ್ಯೂಯಾರ್ಕ್ (ಅಮೇರಿಕಾ) – ಕೆನಡಾದ ಸಂಸತ್ತಿನಲ್ಲಿ ನಿಜ್ಜಾರನ ಹತ್ಯೆಯ ಪ್ರಕರಣದಲ್ಲಿ ಭಾರತದ ಮೇಲೆ ಹೊರಿಸಲಾದ ಆರೋಪದ ಬಗ್ಗೆ ಮಾಹಿತಿ ನೀಡುವ ನಿರ್ಣಯ ಸಹಜವಾಗಿಯೇ ತೆಗೆದುಕೊಂಡಿಲ್ಲ. ಹತ್ಯೆಯ ಪ್ರಕರಣದಲ್ಲಿನ ಆರೋಪ ವಿಶ್ವಾಸರ್ಹವಾಗಿದ್ದೂ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಆತನಿಗೆ ನ್ಯಾಯ ನೀಡುವುದಕ್ಕಾಗಿ ಭಾರತ ಕೂಡ ಕೆನಡಾ ಜೊತೆಗೆ ಕೈಜೋಡಿಸಬೇಕು ಎಂದು ಕೆನಡಾದ ಪ್ರಧಾನ ಮಂತ್ರಿ ಜಸ್ಟೀಸ್ ಟ್ರುಢೋ ಇವರು ಹುರುಳಿಲ್ಲದ ಕರೆ ನೀಡಿದ್ದಾರೆ. ‘ಈ ಪ್ರಕರಣ ಗಂಭೀರವಾಗಿ ಪರಿಗಣಿಸಬೇಕೆಂದು’, ನಾವು ಭಾರತ ಸರಕಾರಕ್ಕೆ ಕರೆ ನೀಡುತ್ತೇವೆ. ಈ ಪ್ರಕರಣದಲ್ಲಿ ಸಂಪೂರ್ಣ ಪಾರದರ್ಶಕತೆ ತರುವುದಕ್ಕಾಗಿ ಹಾಗೂ ಜವಾಬ್ದಾರಿ ಮತ್ತು ನ್ಯಾಯದ ದೃಷ್ಟಿಯಿಂದ ಭಾರತ ನಮ್ಮ ಜೊತೆಗೆ ಕೈಜೋಡಿಸಬೇಕೆಂದು ಟ್ರುಡೋ ಹೇಳಿದರು.

‘ಭಾರತವು ಕೆನಡಾದ ನಾಗರಿಕರಿಗಾಗಿ ತಾತ್ಕಾಲಿಕ ವೀಸಾ ಸೇವೆ ನಿಲ್ಲಿಸಲಾಗಿದೆ. ಕೆನಡಾ ಸರಕಾರ ಇದರ ಬಗ್ಗೆ ಉಪಾಯ ಯೋಜನೆ ಮಾಡುವುದೆ ?’, ಎಂದು ಅವರನ್ನು ಕೇಳಿದಾಗ ಟ್ರುಡೋ ಇವರು, ನಮ್ಮ ದೇಶ ಕಾನೂನಿನ ರಾಜ್ಯವಿದೆ. ನಾವು ನಮ್ಮ ನಾಗರಿಕರ ಸುರಕ್ಷತೆಗಾಗಿ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಮೌಲ್ಯ ಜೋಪಾನ ಮಾಡುವುದು ಅವಶ್ಯಕವಾಗಿರುವಂತಹ ಎಲ್ಲಾ ಕಾರ್ಯ ನಾವು ಮಾಡುತ್ತಿದ್ದೇವೆ. ಈಗಂತೂ ನಮ್ಮ ಗುರಿ ಅದೇ ಆಗಿದೆ ಎಂದು ಹೇಳಿದರು.

ನಾವು ಮುಂದೆ ಕೂಡ ಭಾರತದ ಜೊತೆಗೆ ಕೆಲಸ ಮಾಡಬೇಕಿದೆ !

ಟ್ರುಡೋ ಮಾತು ಮುಂದುವರಿಸುತ್ತಾ, ಭಾರತದ ಮಹತ್ವ ಹೆಚ್ಚುತ್ತಿದೆ ಇದರಲ್ಲಿ ಅನುಮಾನವೇ ಇಲ್ಲ. ಇನ್ನು ಮುಂದೆ ಕೂಡ ನಾವು ಭಾರತದ ಜೊತೆಗೆ ಕಾರ್ಯಾ ಮಾಡುವವರಿದ್ದೇವೆ. ಇದರಲ್ಲಿ ಕೂಡ ಅನುಮಾನವಿಲ್ಲ ಆದರೆ ನಾವು ಯಾವುದೇ ರೀತಿ ಭಾರತಕ್ಕೆ ಪ್ರಚೋದಿಸುವ ಅಥವಾ ಸಮಸ್ಯೆ ನಿರ್ಮಿಸುವ ಪ್ರಯತ್ನ ಮಾಡುತ್ತಿಲ್ಲ. ಕಾನೂನಿನ ಮಹತ್ವ ಮತ್ತು ಕೆನಡಾದ ನಾಗರಿಕರ ಸುರಕ್ಷೆ ಇದಕ್ಕೆ ನಾವು ಆದ್ಯತೆ ನೀಡುತ್ತೇವೆ. ಆದ್ದರಿಂದ ನಾವು ಭಾರತ ಸರಕಾರಕ್ಕೆ ಈ ಪ್ರಕರಣದಲ್ಲಿ ಸತ್ಯ ಸಂಶೋಧನೆಗಾಗಿ ನಮ್ಮ ಜೊತೆಗೆ ಕಾರ್ಯ ಮಾಡಲು ವಿನಂತಿಸುತ್ತೇವೆ. ನಾವು ಕಾನೂನಿಗೆ ಮಹತ್ವ ನೀಡುವ ರಾಷ್ಟ್ರದವರಾಗಿದ್ದೇವೆ. ಕೆನಡಾ ನಾಗರಿಕರನ್ನು ಸುರಕ್ಷತವಾಗಿಡಲು ಏನೆಲ್ಲಾ ಸಾಧ್ಯ ಇದೆ ಅದನ್ನು ನಾವು ಮಾಡುತ್ತಿರುತ್ತೇವೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಕೆನಡಾದಲ್ಲಿ ಹತ್ಯೆ ನಡೆದಿದೆ. ಇದಕ್ಕೆ ಮೂರು ತಿಂಗಳ ಕಳೆದಿದೆ, ಇನ್ನುವರೆಗೆ ಯಾರ ಮೇಲೆ ಕೂಡ ಕ್ರಮ ಕೈಗೊಳ್ಳಲಾಗಿಲ್ಲ. ಇದರ ಅರ್ಥ ಕೆನಡಾ ಇದರ ಬಗ್ಗೆ ಗಂಭೀರವಾಗಿಲ್ಲ ಅಥವಾ ಅಲ್ಲಿಯ ಪೊಲೀಸರಿಗೆ ಕ್ಷಮತೆ ಇಲ್ಲ, ಹೀಗೆ ಗಮನಕ್ಕೆ ಬರುತ್ತಿದೆ ! ಇಂತಹ ಸಮಯದಲ್ಲಿ ಕೆನಡಾ ತನ್ನತ್ತ ನೋಡಿಕೊಳ್ಳುವ ಬದಲು ಭಾರತಕ್ಕೆ ಕರೆ ನೀಡುವುದು ಹಾಸ್ಯಾಸ್ಪದವಾಗಿದೆ !