ಓಂಕಾರೇಶ್ವರ (ಮಧ್ಯಪ್ರದೇಶ) ಇಲ್ಲಿ ಆದ್ಯ ಶಂಕರಾಚಾರ್ಯರ ‘ಸ್ಟ್ಯಾಚು ಆಫ್ ವನ್ ನೆಸ್’ ಪುತ್ತಳಿಯ ಅನಾವರಣ !

೫ ಸಾವಿರ ಸಾಧು ಸಂತರ ವಂದನಿಯ ಉಪಸ್ಥಿತಿ !

ಖಂಡವಾ (ಮಧ್ಯಪ್ರದೇಶ) – ಇಲ್ಲಿಯ ಓಂಕಾರೇಶ್ವರದ ಓಂಕಾರ ಪರ್ವತದ ಮೇಲೆ ಆದ್ಯ ಶಂಕರಚಾರ್ಯರ ೧೦೮ ಅಡಿಯ ಎತ್ತರದ ಪುತ್ತಳಿಯನ್ನು ಅನಾವರಣ ಗೊಳಿಸಿದರು. ೫ ಸಾವಿರ ಸಾಧು ಸಂತರು ವಂದನಿಯ ಉಪಸ್ಥಿತಿಯಲ್ಲಿ ರಾಜ್ಯದ ಮುಖ್ಯಮಂತ್ರಿ ಶಿವರಾಜ ಸಿಂಹ ಚೌಹಾನ ಇವರಿಂದ ಅನಾವರಣಗೊಳಿಸಲಾಯಿತು. ಆದ್ಯ ಶಂಕರಾಚಾರ್ಯರರು ‘ಐಕ್ಯತೆಯ ಪ್ರತೀಕ’ ಎಂದು ಹೇಳಿ ಈ ಪುತ್ತಳಿಗೆ ‘ಸ್ಟ್ಯಾಚು ಆಫ್ ವನ್ ನೆಸ್’ ಎಂದು ಹೆಸರು ನೀಡಲಾಯಿತು. ಈ ಪುತ್ತಳಿಯಲ್ಲಿ ಅಧ್ಯ ಶಂಕರಾಚಾರ್ಯರ ೧೨ ನೇ ವಯಸ್ಸಿನ ಬಾಲ ರೂಪ ತೋರಿಸಲಾಗಿದೆ. ಅನಾವರಣದ ನಂತರ ಸಂತರ ಜೊತೆಗೆ ಚೌಹಾನ್ ಇವರು ಪುತ್ತಳಿಗೆ ಪ್ರದಕ್ಷಣೆ ಹಾಕಿದರು.

೧. ಓಂಕಾರೇಶ್ವರ ಇದು ಆದ್ಯ ಶಂಕರಾಚಾರ್ಯರರ ಜ್ಞಾನ ಮತ್ತು ಗುರುಭೂಮಿ ಆಗಿದೆ. ಇಲ್ಲೇ ಅವರಿಗೆ ಅವರ ಗುರು ಗೋವಿಂದ ಭಗವತ್ಪಾದ ಭೇಟಿಯಾಗಿದ್ದರು. ಇಲ್ಲಿ ಅವರು ೪ ವರ್ಷಗಳ ಕಾಲ ವಾಸಿಸಿ ವಿದ್ಯಾರ್ಜನೆ ಮಾಡಿದರು.

೨. ೧೨ ನೆ ವಯಸ್ಸಿನಲ್ಲಿ ಓಂಕಾರೇಶ್ವರದಿಂದ ಅವರು ಅಖಂಡ ಭಾರತದಲ್ಲಿ ವೇದಗಳ ಪ್ರಚಾರಕ್ಕಾಗಿ ಪ್ರಸ್ತಾನ ಮಾಡಿದರು.

೩. ಇಲ್ಲಿ ಸ್ಥಾಪಿಸಲಾದ ಪುತ್ತಳಿ ಮಹಾರಾಷ್ಟ್ರದ ಸೋಲಾಪುರದ ಪ್ರಸಿದ್ಧ ಶಿಲ್ಪಿ ಭಗವಾನ ರಾಮಪುರ ಇವರು ಕೆತ್ತಿದ್ದಿದ್ದಾರೆ. ಪುತ್ತಳಿ ನಿರ್ಮಿಸುವುದಕ್ಕಾಗಿ ಆವಶ್ಯಕವಾಗಿರುವ ಬಾಲ ಶಂಕರರ ಚಿತ್ರ ಮುಂಬಯಿಯ ಪ್ರಸಿದ್ಧ ಚಿತ್ರ ಕಲಾವಿದ ವಾಸುದೇವ ಕಾಮತ ಇವರು ೨೦೧೮ ರಲ್ಲಿ ಬಿಡಿಸಿದ್ದರು.