ನಿಪಾಹ ವೈರಸ್ ಇದುವರೆಗೆ 2 ಜನರ ಸಾವು !
ಕೋಝಿಕೋಡ (ಕೇರಳ) – ಇಲ್ಲಿ ನಿಪಾಹ್ ವೈರಸ್ ಸೋಂಕು ಹರಡುತ್ತಿರುವುದರಿಂದ ಸೆಪ್ಟೆಂಬರ್ 24 ರವರೆಗೆ ಶಾಲಾ ಕಾಲೇಜುಗಳು ಮತ್ತು ಟ್ಯೂಶನ್ ಗಳನ್ನು ಮುಚ್ಚುವಂತೆ ಆಡಳಿತದಿಂದ ಆದೇಶ ಹೊರಡಿಸಲಾಗಿದೆ. ಇಲ್ಲಿ ನಿಪಾಹ ವೈರಸ್ ನ 6 ರೋಗಿಗಳು ಪತ್ತೆಯಾಗಿದ್ದು, ಅವರ ಸಂಪರ್ಕಕ್ಕೆ ಬಂದವರ ಸಂಖ್ಯೆ 1 ಸಾವಿರ 8 ಕ್ಕೆ ತಲುಪಿದೆ. ಇದರಲ್ಲಿ 327 ಆರೋಗ್ಯ ಕಾರ್ಯಕರ್ತರು ಸೇರಿದ್ದಾರೆ. ಇಲ್ಲಿಯವರೆಗೆ ನಿಪಾಹದಿಂದ 2 ಜನರು ಸಾವನ್ನಪ್ಪಿದ್ದಾರೆ. ರೋಗಿಗಳಲ್ಲಿ ಒಬ್ಬ 9 ವರ್ಷದ ಬಾಲಕನೂ ಸೇರಿದ್ದಾನೆ.
#Nipah Virus in #Kerala : All educational institutions in Kozhikode to remain shut till Sept 24
Live Updates: https://t.co/PWQ8EONFUH pic.twitter.com/hrgjW0jT0m
— The Times Of India (@timesofindia) September 16, 2023
1. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಹಾನಿರ್ದೇಶಕ ರಾಜೀವ್ ಬಹಲ ಇವರು ಮಾತನಾಡಿ, ನಿಪಾಹದಿಂದ ಸಾವಿನ ಪ್ರಮಾಣ ಶೇ. 40 ರಿಂದ 70 ರಷ್ಟಿದ್ದು, ಕೊರೊನಾದಿಂದ ಉಂಟಾಗುವ ಸಾವಿನ ಸಂಖ್ಯೆಗಿಂತ ಈ ಸಂಖ್ಯೆ ಅತ್ಯಧಿಕವಿದೆ. ಕರೋನಾದಿಂದ ಸಾವಿನ ಪ್ರಮಾಣ ಕೇವಲ ಶೇ. 2 ರಿಂದ 3 ರಷ್ಟು ಇತ್ತು.
2. ನಿಪಾಹಗೆ ಸಂಬಂಧಿಸಿದಂತೆ, ಕೇರಳದ ಜನರು ಸಾಮಾಜಿಕ ಅಂತರವನ್ನು ಪಾಲಿಸಲು, ಮಾಸ್ಕ್ ಧರಿಸಲು ಮತ್ತು ಬಾವಲಿಗಳ ಸಂಪರ್ಕಕ್ಕೆ ಬಂದ ಹಸಿ ಆಹಾರಗಳಿಂದ ದೂರವಿರುವಂತೆ ಸಲಹೆ ನೀಡಲಾಗಿದೆ.