ಖೇಡಾದಲ್ಲಿ (ಗುಜರಾತ್) ಭಗವಾನ್ ಶಿವನ ಮೆರವಣಿಗೆಯ ಮೇಲೆ ಮಸೀದಿಯಿಂದ ಕಲ್ಲು ತೂರಾಟ

  • 5 ಪೊಲೀಸರು ಸೇರಿದಂತೆ 9 ಜನರಿಗೆ ಗಾಯ

  • 17 ಮುಸ್ಲಿಮರ ಬಂಧನ

ಖೇಡಾ (ಗುಜರಾತ್) – ಇಲ್ಲಿನ ಠಾಸರಾ ಪ್ರದೇಶದ ರಾಮ ಚೌಕನಲ್ಲಿ ಭಗವಾನ್ ಶಿವನ ಮೆರವಣಿಗೆಯಲ್ಲಿ ಮಸೀದಿಯಿಂದ ನಡೆಸಿರುವ ಕಲ್ಲು ತೂರಾಟದಲ್ಲಿ 5 ಪೊಲೀಸರು ಸೇರಿದಂತೆ 9 ಜನರು ಗಾಯಗೊಂಡಿದ್ದಾರೆ. ಈ ಪ್ರಕರಣದಲ್ಲಿ 17 ಮುಸಲ್ಮಾನರನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿ ಈಗ ಉದ್ವಿಗ್ನತೆಯಿಂದ ಕೂಡಿದ ಶಾಂತತೆಯಿದೆ. ಈ ಕಲ್ಲು ತೂರಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ. ಮೆರವಣಿಗೆಯು ಮಸೀದಿಯ ಹತ್ತಿರ ತಲುಪಿದ ನಂತರ, ಮಸೀದಿಯ ಮೇಲ್ಛಾವಣಿಯಿಂದ ಕಲ್ಲು ತೂರಾಟ ಪ್ರಾರಂಭವಾಯಿತು. ಇದು ಗೊಂದಲಕ್ಕೆ ಕಾರಣವಾಯಿತು. ಮೆರವಣಿಗೆಗೆ ಪೊಲೀಸರು ರಕ್ಷಣೆ ನೀಡಿದರೂ ಈ ಘಟನೆ ನಡೆದಿದೆ. ಪೊಲೀಸರು ಇದೀಗ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಯಾರಾದರೂ ಕಲ್ಲು ತೂರಾಟಕ್ಕೆ ಪ್ರಚೋದನೆ ನೀಡಿದ್ದಾರೆಯೇ ? ಯಾರು ಛಾವಣಿಯ ಮೇಲೆ ಕಲ್ಲುಗಳನ್ನು ತಂದರು ಮತ್ತು ಯಾವಾಗ? ಮುಂತಾದ ವಿಷಯಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಸಂಪಾದಕೀಯ ನಿಲುವು

ಮಸೀದಿಗಳು ನಮಾಜ್ ಗಾಗಿ ಇದೆಯೋ ಅಥವಾ ಹಿಂದೂಗಳ ಧಾರ್ಮಿಕ ಮೆರವಣಿಗೆಗಳ ಮೇಲೆ ಕಲ್ಲು ತೂರಾಟ ನಡೆಸಲು ಇದೆಯೋ ?, ಎನ್ನುವುದನ್ನು ಈಗ ವಿಚಾರಣೆ ನಡೆಸುವುದು ಆವಶ್ಯಕವಾಗಿದೆ. ದೇಶದಲ್ಲಿ ಅನೇಕ ವರ್ಷಗಳಿಂದ ಇಂತಹ ಘಟನೆಗಳು ನಡೆಯುತ್ತಿದ್ದರೂ ಪೊಲೀಸರು ಮಸೀದಿ ಮತ್ತು ಅವರ ಛಾವಣಿಗಳನ್ನು ಏಕೆ ಪರಿಶೀಲಿಸುತ್ತಿಲ್ಲ ? ಅಥವಾ ಪೊಲೀಸರು ಅಲ್ಲಿಗೆ ಹೋಗಲು ಹೆದರುತ್ತಾರೆಯೇ ?

ಹಿಂದೂಗಳ ಧಾರ್ಮಿಕ ಮೆರವಣಿಗೆಗಳ ಮೇಲೆ ಕಲ್ಲು ಎಸೆಯುವ ಮಸೀದಿಗಳ ಮೇಲೆಯೂ ಬುಲ್ಡೋಜರ ನಡೆಸಿ ಅದನ್ನು ಕೆಡವಲು ಕಾನೂನುಪ್ರೇಮಿ ನಾಗರಿಕರು ಒತ್ತಾಯಿಸಿದರೆ, ಅದು ತಪ್ಪಾಗಲಾರದು !