ತಮಿಳುನಾಡಿನಲ್ಲಿ ಕೆಲವು ಶ್ರೀ ಗಣೇಶಮೂರ್ತಿ ತಯಾರಿಕಾ ಘಟಕವನ್ನು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಬೀಗ !

  • ಪ್ಲಾಸ್ಟರ್ ಆಫ್ ಪ್ಯಾರಿಸ್ ನ ಮೂರ್ತಿ ಎಂದು ಕ್ರಮ ಕೈಕೊಂಡಿರುವುದಾಗಿ ಮಂಡಳಿಯ ದಾವೆ

  • ಮೂರ್ತಿಗಳು ನೀರಿನಲ್ಲಿ ಕರಗುತ್ತವೆ ಎಂಬುದು ಮೂರ್ತಿ ತಯಾರಕರಿಂದ ಮಾಹಿತಿ !

ಚೆನ್ನೈ (ತಮಿಳುನಾಡು) – ತಮಿಳುನಾಡಿನ ದ್ರಮುಕ (ದ್ರಾವಿಡ್ ಮುನ್ನೇತ್ರ ಕಳಘಂ) ಸರಕಾರವು ರಾಜ್ಯದಲ್ಲಿ ಶ್ರೀ ಗಣೇಶ ಚತುರ್ಥಿಯ ನಿಮಿತ್ತ ಶ್ರೀ ಗಣೇಶನ ಮೂರ್ತಿಗಳನ್ನು ತಯಾರಿಸಲಾಗುತ್ತಿತ್ತು. ಅದರಲ್ಲಿ ಕೆಲವು ಸ್ಥಳಗಳಿಗೆ ಬೀಗ ಹಾಕಲು ಪ್ರಾರಂಭಿಸಿದೆ. ಶ್ರೀ ಗಣೇಶ ಚತುರ್ಥಿಗೆ 3 ದಿನ ಇರುವಾಗಲೇ ಇಂತಹ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹಿಂದೂಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದ ಕರೂರಿನ ಸುಂಗಾಗೇಟ್ ಪ್ರದೇಶದಲ್ಲಿ ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿಯು ಮೂರ್ತಿ ತಯಾರಿಕೆಯ ಘಟಕವನ್ನು ಮುಚ್ಚಿದೆ. ಇಲ್ಲಿ ಪರಿಸರ ಮಾಲಿನ್ಯವಾಗುತ್ತಿದೆ ಎಂದು ಹೇಳಿ ಈ ಕ್ರಮ ಕೈಗೊಳ್ಳಲಾಗಿದೆ. ಮಾಲಿನ್ಯ ಮಂಡಳಿಯು ಕಂದಾಯ ಇಲಾಖೆ, ಪೊಲೀಸರು ಸೇರಿ ಇಲ್ಲಿ ದಿಢೀರ್ ಸರ್ವೆ ನಡೆಸಿ ಈ ಸ್ಥಳಗಳನ್ನು ಮುಚ್ಚಿದ್ದಾರೆ. ಇಲ್ಲಿ ಸುಮಾರು 400 ಗಣೇಶ ಮೂರ್ತಿಗಳಿದ್ದವು. ಈ ಮೂರ್ತಿಗಳನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ತಯಾರಿಸಲಾಗಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಂಡಳಿ ತಿಳಿಸಿದೆ. ಈ ಕಾರ್ಯಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಘಟನೆಯನ್ನು ವಿರೋಧಿಸಲಾಗುತ್ತಿದೆ.

ಬಿಜೆಪಿ ಕಾರ್ಯಕರ್ತನ ಮೂರ್ತಿ ಘಟಕಕ್ಕೂ ಬೀಗ !

ಕೆಲ ದಿನಗಳ ಹಿಂದೆ ತೆನಕಾಸಿಯ ಒಂದು ಮೂರ್ತಿ ಘಟಕದ ಮೇಲೆ ದಾಳಿ ನಡೆಸಿ ಅದರ ಮಾಲೀಕನಾಗಿರುವ ಭಾಜಪ ಕಾರ್ಯಕರ್ತನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈ ಮೂರ್ತಿ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದಾಗಿದೆ ಎಂದು ಆರೋಪಿಸಲಾಗಿತ್ತು. ಆಗ ಕುಶಲಕರ್ಮಿಯೊಬ್ಬರು ಮೂರ್ತಿಯನ್ನು ಕರಗುವ ಮಣ್ಣಿನಿಂದ ತಯಾರಿಸಲಾಗಿದೆಯೆಂದು ಹೇಳಿದ ಬಳಿಕವೂ ಕ್ರಮ ಕೈಕೊಂಡರು.

ಮೂರ್ತಿಗಳಿಂದ ಮಾಲಿನ್ಯವಾಗುವುದಿಲ್ಲವೆಂದು ಹೇಳಿದರೂ ಕ್ರಮ

ಮೂರ್ತಿ ತಯಾರಿಸುವ ಕುಶಲಕರ್ಮಿಯೊಬ್ಬರ ವಿಡಿಯೋ ಪ್ರಸಾರವಾಗಿದ್ದು, ಅದರಲ್ಲಿ ಅವರು, `ನಾವು ಕಳೆದ 10 ವರ್ಷಗಳಿಂದ ಮೂರ್ತಿಗಳನ್ನು ತಯಾರಿಸುತ್ತಿದ್ದೇವೆ. ಇದಕ್ಕಾಗಿ ಉಪಯೋಗಿಸುವ ವಸ್ತುಗಳು ನೀರಿನಲ್ಲಿ ಕರಗುತ್ತವೆ. ನಾವು ಉಪಯೋಗಿಸುವ ಬಣ್ಣ ನೈಸರ್ಗಿಕವಾಗಿದ್ದು, ಅದರಲ್ಲಿ ನೀರಿನ ಬಣ್ಣಗಳಿವೆ. ಅದರಲ್ಲಿ ಯಾವುದೇ ರಾಸಾಯನಿಕಗಳಿಲ್ಲ. ಮಾಲಿನ್ಯ ಮಂಡಳಿ ಅಧಿಕಾರಿಗಳು ಕೂಡ ವಿಗ್ರಹಗಳನ್ನು ಪರಿಶೀಲಿಸಿದ್ದರು. ‘ಮೂರ್ತಿಗಳ ಗುಣಮಟ್ಟ ಚೆನ್ನಾಗಿಲ್ಲ’ ಎಂದು ಅವರು ಮೂರ್ತಿ ಘಟಕಕ್ಕೆ ಬೀಗ ಜಡಿದರು. ಇಲ್ಲಿ 170 ಮೂರ್ತಿಗಳಿದ್ದವು. ಸಾಲ ಮಾಡಿ 10 ಲಕ್ಷ ರೂಪಾಯಿಗಳ ಬಂಡವಾಳ ಹೂಡಿಕೆ ಮಾಡಿದ್ದೆವು ಎಂದು ಹೇಳಿದ್ದಾರೆ.

(ಸೌಜನ್ಯ – Ritam English – News)

ಈ ವೇಳೆ ಮಹಿಳೆಯೊಬ್ಬರು ಮಾತನಾಡಿ, ಇಷ್ಟು ವರ್ಷಗಳಿಂದ ಮೂರ್ತಿ ತಯಾರಿಸುತ್ತಿದ್ದೇವೆ; ಆದರೆ ಅಂತಹ ಯಾವುದೇ ಕ್ರಮ ಕೈಗೊಂಡಿರಲಿಲ್ಲ. 20 ದಿನಗಳ ಹಿಂದೆಯೇ ಹೇಳಿದ್ದರೆ ಈ ಮೂರ್ತಿಗಳನ್ನು ಬೇರೆ ರಾಜ್ಯಗಳಿಗೆ ತೆಗೆದುಕೊಂಡು ಹೋಗುತ್ತಿದ್ದೆವು ಎಂದು ಹೇಳಿದರು.

ಹಿಂದೂಗಳ ವ್ಯಾಪಾರಗಳನ್ನು ನಷ್ಟಗೊಳಿಸುವ ಪ್ರಯತ್ನ ! – ಭಾಜಪ

ತಮಿಳುನಾಡು ಭಾಜಪ ಪ್ರದೇಶಾಧ್ಯಕ್ಷ ಕೆ. ಅಣ್ಣಾಮಲೈ

ತಮಿಳುನಾಡು ಭಾಜಪ ಪ್ರದೇಶಾಧ್ಯಕ್ಷ ಕೆ. ಅಣ್ಣಾಮಲೈ ಇವರು ಈ ಘಟನೆ ಕುರಿತು ತಮಿಳುನಾಡು ಸರ್ಕಾರವನ್ನು ಟೀಕಿಸಿದ್ದಾರೆ. ಅವರು, ನಮ್ಮ ಹಬ್ಬಗಳ ಮೇಲೆ ಅವಲಂಬಿಸಿರುವ ಜನರ ವ್ಯಾಪಾರವನ್ನು ನಷ್ಟಪಡಿಸಲು ಪ್ರಯತ್ನಿಸುವ ಮೂಲಕ ದ್ರಮುಕ ಸರಕಾರವು ಸನಾತನ ಧರ್ಮೀಯರ ಭಾವನೆಗಳನ್ನು ನೋಯಿಸುತ್ತಿದೆ. ಹಾಗೆಯೇ ಸ್ಥಳೀಯ ಅರ್ಥವ್ಯವಸ್ಥೆಗೂ ಹಾನಿಯುಂಟು ಮಾಡುತ್ತಿದೆಯೆಂದು ಹೇಳಿದರು.

ದ್ರಮುಕ ಪಕ್ಷದ ಮಿತಿ ಮೀರಿದ ಸನಾತನ ಧರ್ಮದ ವಿರೋಧ ! – ಸ್ಥಳೀಯ ಹಿಂದೂ ಸಂಘಟನೆಗಳು

ಸ್ಥಳೀಯ ಹಿಂದೂ ಸಂಘಟನೆಗಳು, ನಾವು 120 ಗಣೇಶ ಮೂರ್ತಿಗಳಿಗೆ ಬೇಡಿಕೆ ಇಟ್ಟಿದ್ದೆವು; ಆದರೆ ಈಗ ಇದ್ದಕ್ಕಿದ್ದಂತೆ ಮೂರ್ತಿ ಘಟಕವನ್ನು ಮುಚ್ಚಲಾಯಿತು. ಇದು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸುವ ಷಡ್ಯಂತ್ರವಾಗಿದೆ. ದ್ರಮುಕವು ಸನಾತನ ಧರ್ಮದ ವಿರೋಧ ಮಿತಿಮೀರಿದೆಯೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಪಾದಕೀಯ ನಿಲುವು

ಸನಾತನ ಧರ್ಮವನ್ನು ಮುಗಿಸುವ ಉದ್ದೇಶವನ್ನು ಹೊಂದಿರುವ ತಮಿಳುನಾಡಿನ ದ್ರಮುಕ ಸರಕಾರವು ಪರಿಸರ ಮಾಲಿನ್ಯ ನಿಯಂತ್ರಣದ ಹೆಸರಿನಲ್ಲಿ ಉದ್ದೇಶಪೂರ್ವಕವಾಗಿ ಇಂತಹ ಕ್ರಮ ಕೈಗೊಳ್ಳುತ್ತಿದ್ದರೆ, ಅದರಲ್ಲಿ ಆಶ್ಚರ್ಯಪಡಬೇಕಾಗಿಲ್ಲ !

ಜಲಮೂಲಗಳಿಗೆ ರಾಸಾಯನಿಕಗಳನ್ನು ಬಿಟ್ಟು ನೀರನ್ನು ಕಲುಷಿತಗೊಳಿಸುವ ಕಾರ್ಖಾನೆಗಳ ವಿರುದ್ಧ ಪರಿಸರ ಮಾಲಿನ್ಯ ಮಂಡಳಿಯು ಇದೇ ರೀತಿಯ ತ್ವರಿತ ಕ್ರಮವನ್ನು ತೆಗೆದುಕೊಳ್ಳುತ್ತಿತ್ತೇ ?