ಇದೇ ಮೊದಲ ಬಾರಿಗೆ ಜಮ್ಮು ಕಾಶ್ಮೀರದಲ್ಲಿ ಸಾರ್ವಜನಿಕ ಗಣೇಶೋತ್ಸವ !

ಪುಣೆ – ಜಮ್ಮು ಕಾಶ್ಮೀರದಲ್ಲಿನ ‘ಗಣಪತಿಯಾರ್ ಟ್ರಸ್ಟ್’ ನಲ್ಲಿ ಗಣೇಶೋತ್ಸವ ಆಚರಿಸಬೇಕು, ಅದಕ್ಕಾಗಿ ಪುಣೆಯಲ್ಲಿನ ೭ ಮಂಡಳಿಗಳು ಒಟ್ಟಾಗಿ ಸೇರಿ ‘ಶ್ರೀಮಂತ ಬಾಹುಸಾಹೇಬ ರಂಗಾರಿ ಟ್ರಸ್ಟ್’ ನ ಟ್ರಸ್ಟಿ ಮತ್ತು ಉತ್ಸವ ಪ್ರಮುಖ ಪುನೀತ ಬಾಲನ ಇವರ ನೇತೃತ್ವದಲ್ಲಿ ಮೂರ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ. ಕಾಶ್ಮೀರದಲ್ಲಿ ಇದೇ ಮೊದಲು ಬಾರಿಗೆ ಒಂದುವರೆ ದಿನದ ಗಣೇಶೋತ್ಸವ ಆಚರಿಸಲಾಗುವುದು. ‘ಪುಣೆಯಲ್ಲಿನ ಗಣೇಶೋತ್ಸವ ಮಂಡಳಿಯ ನೇತೃತ್ವದಿಂದ ಕಾಶ್ಮೀರದಲ್ಲಿ ಮೊದಲ ಬಾರಿಗೆ ನಾವು ಗಣೇಶೋತ್ಸವ ಆಚರಿಸುತ್ತಿದ್ದೇವೆ. ನಮಗೆ ಇದರ ಆನಂದವಾಗುತ್ತಿದೆ’, ಎಂದು ಕಾಶ್ಮೀರದಲ್ಲಿನ ‘ಗಣಪತಿಯಾರ ಟ್ರಸ್ಟ್’ ನ ಸಂದೀಪ ಕೌಲ ಇವರು ಹೇಳಿದರು.

‘ಶ್ರೀಮಂತ ಭಾವುಸಾಹೇಬ ರಂಗಾರಿ ಗಣಪತಿ ಟ್ರಸ್ಟ್’ ಜೊತೆಗೆ ಪುಣೆಯಲ್ಲಿನ ೫ ಗೌರವಾನ್ವಿತ ಗಣಪತಿ ಮಂಡಳಿ ಸಹಿತ ಅಖಿಲ ಮಂಡೈ ಮಂಡಳಿಯ ಟ್ರಸ್ಟಿ ಒಟ್ಟಾಗಿ ಸೇರಿ ಈ ವರ್ಷ ಕಾಶ್ಮೀರದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಿಸುವ ನಿರ್ಣಯ ತೆಗೆದುಕೊಂಡಿದ್ದಾರೆ. ಅದರ ಪ್ರಕಾರ ಶ್ರೀನಗರದಲ್ಲಿನ ‘ಗಣಪತಿಯಾರ ಟೆಂಪಲ್’ನ ಸಂದೀಪ ಕೌಲ ಮತ್ತು ಶಿಶಾಂತ ಚಾಕೋ ಇವರಿಗೆ ಪುಣೆಯ ಗ್ರಾಮ ದೇವತೆ ಕಸಬ ಗಣಪತಿ ಸಾರ್ವಜನಿಕ ಮಂಡಳದ ಗಣಪತಿಯ ಪ್ರತಿಕೃತಿ ನೀಡಲಾಯಿಗಿತ್ತು. ಈ ಕಾರ್ಯಕ್ರಮ ಶ್ರೀಮಂತ ಬಾವುಸಾಹೇಬ ರಂಗಾರಿ ಗಣಪತಿ ಟ್ರಸ್ಟ್ ಇಲ್ಲಿ ಉತ್ಸಾಹದಲ್ಲಿ ನಡೆಸಿದರು. ಈ ಸಮಯದಲ್ಲಿ ಶ್ರೀಮಂತ ಬಾವುಸಾಹೇಬ ರಂಗಾರಿ ಟ್ರಸ್ಟಿನ ಟ್ರಸ್ಟಿ, ಉತ್ಸವ ಪ್ರಮುಖ ಪುನೀತ ಬಾಲನ ಟ್ರಸ್ಟಿನ ಅಧ್ಯಕ್ಷ ಸಂಜೀವ ಜಾವಳೆ, ಕಸಬಾ ಗಣಪತಿ ಮಂಡಳದ ಅಧ್ಯಕ್ಷ ಶ್ರೀಕಾಂತ ಶೇಟೆ, ಗ್ರಾಮ ದೇವತೆ ತಾಂಬಡಿ ಜೋಗೇಶ್ವರಿ ಮಂಡಳದ ಅಧ್ಯಕ್ಷ ಪ್ರಸಾದ ಕುಲಕರ್ಣಿ ಮುಂತಾದವರ ಸಹಿತ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.