ಕಾಂಗ್ರೆಸ್ ಶಾಸಕ ಮಾಮನ್ ಖಾನ್ ಬಂಧನ !

ನೂಹ (ಹರಿಯಾಣ)ನಲ್ಲಿ ಮತಾಂಧ ಮುಸಲ್ಮಾನರು ಹಿಂದೂಗಳ ಯಾತ್ರೆಯ ಮೇಲೆ ದಾಳಿ ಮಾಡಿದ ಪ್ರಕರಣ

ಚಂಡೀಗಢ – ಹರಿಯಾಣದ ನೂಹನಲ್ಲಿ ಜುಲೈ 31, 2023 ರಂದು, ಬೃಜಮಂಡಲ ಜಲಾಭಿಷೇಕ ಯಾತ್ರೆಯ ಮೇಲೆ ಮತಾಂಧ ಮುಸ್ಲಿಮರು ದಾಳಿ ನಡೆಸಿದ್ದರು. ಇದರಲ್ಲಿ 7 ಜನರು ಸಾವನ್ನಪ್ಪಿದ್ದರು ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಕಾಂಗ್ರೆಸ್ ಶಾಸಕ ಮಾಮನ್ ಖಾನ್ ಅವರನ್ನು ಬಂಧಿಸಿದ್ದಾರೆ. ಮಾಮನ್ ಖಾನ್ ಮುಸ್ಲಿಮರನ್ನು ಪ್ರಚೋದಿಸುವ ಒಂದು ವಿಡಿಯೋ ಪ್ರಸಾರ ಮಾಡಿದ್ದರಿಂದಲೇ ಯಾತ್ರೆಯ ಮೇಲೆ ದಾಳಿ ನಡೆದಿದೆಯೆಂದು ಅವರ ಮೇಲೆ ಆರೋಪವಿದೆ. ಹಾಗೆಯೇ ದಾಳಿಯ ಸಮಯದಲ್ಲಿ ಅವರು ಮತಾಂಧ ಮುಸಲ್ಮಾನರೊಂದಿಗೆ ಸಂಪರ್ಕದಲ್ಲಿದ್ದರು ಎಂದೂ ಆರೋಪಿಸಲಾಗಿದೆ. ಉಪ ಪೊಲೀಸ್ ಅಧೀಕ್ಷಕರಾದ ಸತೀಶ್ ಕುಮಾರ್ ಅವರು ಮಾತನಾಡಿ, ‘ಖಾನ್ ಅವರನ್ನು ರಾಜಸ್ಥಾನದಿಂದ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಅವರ ವಿಚಾರಣೆ ನಡೆಸಲಾಗುತ್ತಿದೆ.’ ಎಂದು ಹೇಳಿದ್ದಾರೆ. ಇನ್ನೊಂದೆಡೆ ಪೊಲೀಸರು ಮಾಮನ ಖಾನ ಇವರ ಗ್ರಾಮವನ್ನು ಸುತ್ತುವರಿದಿದ್ದಾರೆ. ಇಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ಪೊಲೀಸರು ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ ಎಂದು ಹೇಳಿದರು.

ಪೊಲೀಸರು ಮಾಮನ ಖಾನರಿಗೆ ಎರಡು ಬಾರಿ ನೋಟಿಸ್ ಗಳನ್ನು ಕಳುಹಿಸಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದರು; ಆದರೆ ಮಾಮನ ಖಾನರು ಕಾರಣಗಳನ್ನು ನೀಡುತ್ತಾ ವಿಚಾರಣೆಗೆ ಹಾಜರಾಗಿರಲಿಲ್ಲ. ಮಾಮನ್ ಖಾನ್ ಪಂಜಾಬ್ ಮತ್ತು ಹರಿಯಾಣ ಉಚ್ಚ ನ್ಯಾಯಾಲಯಗಳಲ್ಲಿ ಅರ್ಜಿ ದಾಖಲಿಸಿ ಹಿಂಸಾಚಾರ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಆಗ್ರಹಿಸಿದ್ದರು. (ಇದಕ್ಕೆಕಳ್ಳನಿಗೊಂದು ಪಿಳ್ಳೆ ನೆವ’ ಎಂದು ಹೇಳುತ್ತಾರೆ ! – ಸಂಪಾದಕರು)

ಸಂಪಾದಕೀಯ ನಿಲುವು

ಹಿಂದೂಗಳ ಮೇಲೆ ದಾಳಿ ನಡೆಸುವ ಮತಾಂಧರ ಹಿಂದೆ ಯಾವಾಗಲೂ ಕಾಂಗ್ರೆಸ್ ನ ಕೈವಾಡವಿರುತ್ತದೆ, ಇದು ವಿಭಜನೆಯ ಕಾಲದಿಂದಲೂ ನಡೆದ ಇತಿಹಾಸವೇ ಆಗಿದೆ. ಇದೇ ಈಗ ಮಾಮನ್ ಖಾನ್ ಬಂಧನದಿಂದ ಮತ್ತೆ ಕಾಣಿಸಿಕೊಂಡಿದೆ. ಈಗ ಈ ವಿಷಯದಲ್ಲಿ ಹಿಂದೂಗಳನ್ನು ‘ಭಯೋತ್ಪಾದಕರು’ ಎಂದು ಕರೆಯುವ ಕಪಟ ಜಾತ್ಯತೀತರು, ಅಹಿಂಸಾವಾದಿ ಮತ್ತು ಗಾಂಧಿವಾದಿ ಕಾಂಗ್ರೆಸ್ಸಿಗರು ಬಾಯಿಬಿಡುವುದಿಲ್ಲ !