ಅಕ್ಟೋಬರ್ ನಿಂದ ಎಲ್ಲಾ ದಾಖಲೆಗಳನ್ನು ಜನನ ಪ್ರಮಾಣ ಪತ್ರದ ಮೂಲಕ ಪಡೆಯಬಹುದು !

ನವ ದೆಹಲಿ – ಅಕ್ಟೋಬರ್ ೧,೨೦೨೩ ರಿಂದ ಜನನ ಪ್ರಮಾಣಪತ್ರಕ್ಕೆ ಸಂಬಂಧಿಸಿದ ಹೊಸ ನಿಯಮಗಳು ಜಾರಿಗೆ ಬರುತ್ತವೆ. ಈ ಹೊಸ ನಿಯಮದ ಪ್ರಕಾರ, ಶಾಲಾ ಪ್ರವೇಶದಿಂದ ಹಿಡಿದು ಡ್ರೈವಿಂಗ್ ಲೈಸೆನ್ಸ್, ಸರಕಾರಿ ನೌಕರಿ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್ ಪೋರ್ಟ್, ಮದುವೆ ನೊಂದಣಿ, ಇತ್ಯಾದಿ ದಾಖಲೆಗಳನ್ನು ಜನನ ಪ್ರಮಾಣ ಪತ್ರದ ಆಧಾರದ ಮೇಲೆ ಪಡೆಯಲು ಸಾಧ್ಯವಾಗುತ್ತದೆ.

(ಸೌಜನ್ಯ – DT Next)

ಕೇಂದ್ರ ಸರಕಾರವು ಮುಂಗಾರು ಅಧಿವೇಶನದ ಸಂದರ್ಭದಲ್ಲಿ ಉಭಯ ಸದನಗಳಲ್ಲಿ “ಜನನ ಮತ್ತು ಮರಣ ನೊಂದಣಿ (ತಿದ್ದುಪಡಿ) ಮಸೂದೆ ೨೦೨೩”ಅನ್ನು ಮಂಡಿಸಿತ್ತು. ಇದಾದ ಬಳಿಕ ಮಸೂದೆಗೆ ರಾಷ್ಟ್ರಪತಿಗಳ ಒಪ್ಪಿಗೆ ಸಿಕ್ಕಿತು. ಕೇಂದ್ರ ಸರಕಾರವು ಅದರ ಅಡಿಯಲ್ಲಿ ಮಾಡಿದ ನಿಯಮಗಳನ್ನು ಅಕ್ಟೋಬರ್ ೧ ರಿಂದ ಜಾರಿಗೆ ತರಲು ಘೋಷಿಸಿದೆ. ಹೊಸ ಕಾನೂನು ಜಾರಿಯಾದ ನಂತರ ಜನನ ಮತ್ತು ಮರಣ ಪ್ರಮಾಣ ಪತ್ರಗಳು ಡಿಜಿಟಲ್ ರೊಪದಲ್ಲಿ ಲಭ್ಯವಾಗಲಿದೆ.