ಶ್ರೀಲಂಕಾದ ಕಡಲ ಗಡಿಯಲ್ಲಿ ಮೀನುಗಾರರ ನುಸುಳಿದ್ದಾರೆಂದು ಆರೋಪ
ಕೊಲಂಬೋ (ಶ್ರೀಲಂಕ) – ಶ್ರೀಲಂಕಾದ ಕಡಲ ಗಡಿಯಲ್ಲಿ ನುಸುಳಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಭಾರತೀಯ ೧೭ ಮೀನುಗಾರರನ್ನು ಶ್ರೀಲಂಕಾದ ನೌಕಾಪಡೆ ಬಂಧಿಸಿದೆ. ಅವರ ೩ ದೋಣಿಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಶ್ರೀಲಂಕಾದ ಉತ್ತರದಲ್ಲಿರುವ ಜಾಫ್ನಾದಲ್ಲಿರುವ ಕಾಕರಥಿವು ದ್ವೀಪದ ಬಳಿ ಶ್ರೀಲಂಕಾ ನೌಕಾಪಡೆ ಈ ಕಾರ್ಯಾಚರಣೆಯನ್ನು ನಡೆಸಿತು.
Sri Lankan Navy arrests 17 Indian fishermen and seizes 3 trawlers for alleged poaching in territorial waters.#SriLanka #FishermenArresthttps://t.co/jZn8Pyf3S8
— Telangana Today (@TelanganaToday) September 14, 2023
ಸಂಪಾದಕೀಯ ನಿಲುವುಶ್ರೀಲಂಕಾ ಅಥವಾ ಪಾಕಿಸ್ತಾನದ ಕಡಲ ಗಡಿಯಲ್ಲಿ ಭಾರತೀಯ ಮೀನುಗಾರರ ಅತಿಕ್ರಮಣ ಮತ್ತು ಮೀನುಗಾರಿಕೆ ಆರೋಪದ ಮೇಲೆ ಭಾರತೀಯ ಮೀನುಗಾರರನ್ನು ಈ ದೇಶಗಳ ನೌಕಾಪಡೆಗಳು ಯಾವಾಗಲೂ ಬಂಧಿಸುತ್ತವೆ. ಕಳೆದ ೭೫ ವರ್ಷಗಳಿಂದ ಎಲ್ಲಾ ಆಡಳಿತಗಾರರು ಈ ಬಗ್ಗೆ ಕ್ರಮ ಕೈಗೊಳ್ಳದಿರುವುದು ಲಜ್ಯಾಸ್ಪದ ! |