ಕಾಠ್ಮಾಂಡು (ನೇಪಾಳ) – ಚೀನಾದ “ಬೆಲ್ಟ್ ಅಂಡ್ ರೋಡ್ ಇನಿಷಿಯೇಟೀವ್”(ಬಿ.ಆರ್.ಐ) ಯೋಜನೆಯಲ್ಲಿ ನೇಪಾಳವು ಸಹಭಾಗಿಯಾಗುವ ಸಾಧ್ಯತೆಯಿದೆ. ಇದುವರೆಗೂ ನೇಪಾಳವು ಈ ಯೋಜನೆಯ ಕರಾರು ಪತ್ರಕ್ಕೆ ಸಹಿ ಹಾಕಿದೆಯಾದರೂ ಈ ಯೋಜನೆಯನ್ನು ಪೂರ್ಣಗೊಳಿಸಿದೆ ಎಂದು ಚೀನಾವು ಹೇಳಿಕೊಂಡಿದೆ. ಆದರೆ ನೇಪಾಳದ ಸರಕಾರಿ ಅಧಿಕಾರಿಗಳು ಈ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ.ಚೀನಾದ ಈ ಯೋಜನೆಗೆ ಭಾರತವು ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಈಗ ಕೆಲವು ದೇಶಗಳು ಈ ಯೋಜನೆಯಿಂದ ಹೊರಗೆ ಸರಿದಿವೆ.
(ಸೌಜನ್ಯ – WION)