ಕೇರಳದ ಪಾದ್ರಿಯಿಂದ ಅಯ್ಯಪ್ಪ ಸ್ವಾಮಿಯ ‘ವ್ರತಂ’ ಪಾಲನೆ, ಚರ್ಚ ಕೆಂಡಾಮಂಡಲ !

ಚರ್ಚ್ ಸ್ಪಷ್ಟೀಕರಣ ಕೇಳಿದ ಕೂಡಲೇ ಪಾದ್ರಿಯಿಂದ ಚರ್ಚ್ ನ ಗುರುತು ಪತ್ರ ಮತ್ತು ಪರವಾನಿಗೆ ಹಿಂತಿರುಗಿಸಿದರು !

ತಿರುವನಂತಪುರಂ (ಕೇರಳ) – ಕೇರಳದ ಓರ್ವ ಪಾದ್ರಿಯು ಪ್ರಸಿದ್ಧ ಶಬರಿಮಲೈ ದೇವಸ್ಥಾನದಲ್ಲಿ ಭಗವಾನ್ ಅಯ್ಯಪ್ಪನ 41 ದಿನಗಳ ‘ವ್ರತಂ’ (ಉಪವಾಸ) ಪಾಲಿಸಿದ್ದಕ್ಕಾಗಿ ಕೇರಳದ ಚರ್ಚ್ ಅವನನ್ನು ಕಠಿಣ ಶಬ್ದಗಳಲ್ಲಿ ನಿಂದಿಸಿದೆ. ತದನಂತರ ಪಾದ್ರಿ ಚರ್ಚ್ ನ ಗುರುತಿನ ಚೀಟಿ ಮತ್ತು ಪರವಾನಗಿಯನ್ನು ಹಿಂದಿರುಗಿಸಿದರು. `ಆಂಗ್ಲಿಕನ್ ಚರ್ಚ್ ಆಫ್ ಇಂಡಿಯಾ’ದ ಪಾದ್ರಿ ರೇವ ಮನೋಜ ಕೆಜಿ ಇವರು 41 ದಿನಗಳ ವರೆಗೆ ನಡೆಯುವ ‘ವ್ರತಮ್’ ಪಾಲಿಸುತ್ತಿದ್ದಾರೆ.

ಈ ವಿಷಯ ಚರ್ಚ್ ಗೆ ತಿಳಿದಾಗ ಚರ್ಚ್ ಪಾದ್ರಿ ರೇವ ಮನೋಜ್ ಕೆಜಿಯವರಿಗೆ ಚರ್ಚ್ ನ ತತ್ವ ಮತ್ತು ನಿಯಮಗಳನ್ನು ಉಲ್ಲಂಘಿಸಿರುವರೆಂದು ಆರೋಪಿಸಿ ಸ್ಪಷ್ಟೀಕರಣ ನೀಡುವಂತೆ ತಿಳಿಸಿದರು. ಪಾದ್ರಿ ಸ್ಪಷ್ಟಿಕರಣ ನೀಡುವ ಬದಲು ಚರ್ಚ್ ನೀಡಿದ ಗುರುತಿನ ಪತ್ರ ಮತ್ತು ಪರವಾನಗಿಯನ್ನು ಹಿಂದಿರುಗಿಸಿದರು. ಪಾದ್ರಿ ಮನೋಜ್ ಮಾತನಾಡಿ, “ನನ್ನ ಕೆಲಸವು ಚರ್ಚ್ ನ ತತ್ವಗಳನ್ನು ಆಧರಿಸಿಲ್ಲ, ದೇವರ ತತ್ವಗಳನ್ನು ಆಧರಿಸಿದೆ. ದೇವರು ಪ್ರತಿಯೊಬ್ಬರನ್ನೂ, ಅವನು ಯಾವುದೇ ಜಾತಿ, ಮತ, ಧರ್ಮದ ಭೇದವಿಲ್ಲದೆ ಎಲ್ಲರನ್ನೂ ಪ್ರೀತಿಸುವಂತೆ ಹೇಳಿದ್ದಾನೆ. ನಿಮಗೆ ದೇವರ ಮೇಲೆ ಪ್ರೀತಿಯಿದೆಯೋ, ಚರ್ಚ್ ಮೇಲೆ ಇದೆಯೋ ? ಎನ್ನುವುದನ್ನು ನೀವು ನಿರ್ಧರಿಸಬಹುದು. ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಉದ್ದೇಶ ಹೇಗೆ ಕ್ರೈಸ್ತ ಧರ್ಮದಂತೆ ಇತ್ತು ಅದೇ ರೀತಿ ಹಿಂದೂ ಧರ್ಮವನ್ನು ಅದರ ಆಚರಣೆಗಳನ್ನು ಮೀರಿ ಅರ್ಥಮಾಡಿಕೊಳ್ಳುವುದಾಗಿತ್ತು. ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಹಿಂದುಗಳಿಗೆ ಯಾವಾಗಲೂ ಸರ್ವಧರ್ಮ ಸಮಭಾವದ ಉಪದೇಶವನ್ನು ನೀಡುವ ಪ್ರಗತಿ(ಅಧೋ)ಪರರು, ನಾಸ್ತಿಕವಾದಿಗಳು, ಕಾಂಗ್ರೆಸ್ಸಿಗರು, ಎಡಪಂಥೀಯರು ಈಗ ಚರ್ಚ್ ಗೆ ಅಂತಹ ಉಪದೇಶ ಏಕೆ ನೀಡುವುದಿಲ್ಲ ?