ಮಹಮ್ಮದ ಪೈಗಂಬರ ಇವರು ಮರ್ಯಾದಾ ಪುರುಷೋತ್ತಮ; ಬಿಹಾರದ ಶಿಕ್ಷಣ ಸಚಿವರು ಮತ್ತು ರಾಷ್ಟ್ರೀಯ ಜನತಾದಳದ ನಾಯಕ ಚಂದ್ರಶೇಖರ ಯಾದವ ಹೇಳಿಕೆ !

ಭಾಜಪದಿಂದ ಟೀಕೆ

ಬಿಹಾರದ ಶಿಕ್ಷಣ ಸಚಿವ ಮತ್ತು ರಾಷ್ಟ್ರೀಯ ಜನತಾದಳದ ನಾಯಕ ಚಂದ್ರಶೇಖರ ಯಾದವ

ನಾಲಂದ (ಬಿಹಾರ) – ಬಿಹಾರದ ಶಿಕ್ಷಣ ಸಚಿವ ಮತ್ತು ರಾಷ್ಟ್ರೀಯ ಜನತಾದಳದ ನಾಯಕ ಚಂದ್ರಶೇಖರ ಯಾದವ ಇವರು ಇಲ್ಲಿಯ ಹಿಲಸ ಪ್ರದೇಶದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಕಾರ್ಯಕ್ರಮದಲ್ಲಿ ಮಾತನಾಡುವಾಗ ಮಹಮ್ಮದ ಪೈಗಂಬರ ‘ಮರ್ಯಾದ ಪುರುಷೋತ್ತಮ’ ಎಂದು ಹೇಳಿದರು. (ಹಿಂದುಗಳ ಧಾರ್ಮಿಕ ಕಾರ್ಯಕ್ರಮದಲ್ಲಿ ಹಿಂದೂಗಳ ದೇವರಿಗೆ ನೀಡಿರುವ ಧಾರ್ಮಿಕ ಉಪಾಧಿ ಇತರ ಧರ್ಮಿಯರ ಶ್ರದ್ಧಾಸ್ಥಾನಗಳಿಗೆ ನೀಡುವ ಯಾದವ ! ಇಂತಹವರಿಗೆ ಹಿಂದುಗಳು ಖಂಡಿಸುವುದು ಅವಶ್ಯಕ ! – ಸಂಪಾದಕರು)

ಈ ಹೇಳಿಕೆಯಿಂದ ಭಾಜಪದಿಂದ ಯಾದವರನ್ನು ಟೀಕಿಸಲಾಗಿದ್ದು, ಯಾದವರು ಮುಸಲ್ಮಾನರನ್ನು ಓಲೈಸುವ ಪ್ರಯತ್ನ ಮಾಡುತ್ತಿದ್ದಾರೆ, ಎಂದು ಹೇಳಿದರು. ಚಂದ್ರಶೇಖರ ಯಾದವ ಇವರು ಈ ಹಿಂದೆ ಶ್ರೀರಾಮಚರಿತಮಾನಸವನ್ನೂ ಟೀಕಿಸಿದ್ದರು.

ಚಂದ್ರಶೇಖರ ಯಾದವ ಇವರು, ಯಾವಾಗ ಜಗತ್ತಿನಲ್ಲಿ ಕ್ರೂರ ಪ್ರವೃತ್ತಿ ಮತ್ತು ಅಪ್ರಾಮಾಣಿಕತೆ ಹೆಚ್ಚುತ್ತದೆ ಆಗ ಏಷ್ಯಾದಲ್ಲಿ ಈಶ್ವರನು, ಪ್ರಭು, ಪರಮಾತ್ಮನು ಜಗತ್ತಿನಲ್ಲಿ ಪ್ರಾಮಾಣಿಕತೆ ನಿರ್ಮಾಣ ಮಾಡುವುದಕ್ಕಾಗಿ ಮರ್ಯಾದ ಪುರುಷೋತ್ತಮ ಮಹಮ್ಮದ ಪೈಗಂಬರ ಇವರ ರೂಪದಲ್ಲಿ ಜನ್ಮ ತಾಳಿದನು. ಇಸ್ಲಾಂ ಪ್ರಾಮಾಣಿಕ ಜನರಿಗಾಗಿ ಸ್ಥಾಪನೆಯಾಗಿದೆ. ಇಸ್ಲಾಂ ಕ್ರೂರ ಮತ್ತು ಅಪ್ರಾಮಾಣಿಕತೆಯನ್ನು ವಿರೋಧಿಸುತ್ತಾ ಬಂದಿದೆ; ಆದರೆ ಆಪ್ರಾಮಾಣಿಕ ಜನರು ಕೂಡ ತಮ್ಮನ್ನು ಮುಸಲ್ಮಾನ ಎಂದು ತಿಳಿಯುತ್ತಾರೆ, ಆಗ ಅಲ್ಲ ಅವರಿಗೆ ಅನುಮತಿ ನೀಡುವುದಿಲ್ಲ ಎಂದು ಹೇಳಿದರು.

ಮುಖ್ಯಮಂತ್ರಿ ನಿತೀಶ ಕುಮಾರ ಇವರು ಯಾದವ ಇವರ ಮೇಲೆ ಕ್ರಮ ಕೈಗೊಳ್ಳಬೇಕು ! – ದಾನಿಶ ಇಕ್ಬಾಲ, ಭಾಜಪ

ಬಿಹಾರದಲ್ಲಿನ ಭಾಜಪದ ಪ್ರಸಾರ ಮಾಧ್ಯಮ ವಿಭಾಗದ ಮುಖ್ಯಸ್ಥ ದಾನಿಶ ಇಕ್ಬಾಲ ಇವರು, ಚಂದ್ರಶೇಖರ ಇವರ ಹೇಳಿಕೆ ಓಲೈಕೆಯ ಮಿತಿ ಮೀರಿದೆ. ಯಾದವ ಇವರು ಹಿಂದೆ ಒಂದು ಧರ್ಮಗ್ರಂಥವನ್ನು ಅವಮಾನಿಸಿದ್ದರು. ರಾಷ್ಟ್ರೀಯ ಜನತಾದಳದ ಇದು ಪರಂಪರೆಯೇ ಆಗಿದೆ. ಸಮಾಜದಲ್ಲಿ ಬಿರುಕು ಮೂಡಿಸುವ ರಾಜಕಾರಣ ಮಾಡಲಾಗುತ್ತಿದೆ. ಮುಖ್ಯಮಂತ್ರಿ ನಿತೀಶ ಕುಮಾರ ಇವರು ಇಂತಹ ಸಚಿವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಸಂಪಾದಕರ ನಿಲುವು

* ಈ ಜಗತ್ತಿನಲ್ಲಿ ‘ಮರ್ಯಾದಾ ಪುರುಷೋತ್ತಮ’ ಕೇವಲ ಒಬ್ಬನೇ ಆಗಿರುವುದು ಮತ್ತು ಅವನೆಂದರೆ ಭಗವಂತ ಶ್ರೀರಾಮ ! ಇಂತಹ ಸಮಯದಲ್ಲಿ ಇತರ ಯಾರಿಗೂ ಹೇಳುವುದು ಸರಿಯಲ್ಲ. ಮುಸಲ್ಮಾನರ ಮತಗಳಿಗಾಗಿ ಈ ರೀತಿಯ ಹೇಳಿಕೆ ನೀಡುವವರಿಗೆ ಕಾನೂನು ರೀತಿಯಿಂದ ವಿರೋಧಿಸಬೇಕು !