ಮಹಾರಾಷ್ಟ್ರದ ಮುಖ್ಯಮಂತ್ರಿ ಇಂಗ್ಲೆಂಡ್ ಗೆ ಹೋಗಿ ‘ವಾಘ ನಖ’ ಹಸ್ತಾಂತರಿಸುವ’ ಒಪ್ಪಂದಕ್ಕೆ ಸಹಿ ಮಾಡುವರು !


ಮುಂಬಯಿ – ಬ್ರಿಟಿಷರು ಭಾರತದಿಂದ ಕೊಂಡೊಯ್ದಿರುವ ಛತ್ರಪತಿ ಶಿವಾಜಿ ಮಹಾರಾಜರ ‘ಹುಲಿ ಉಗುರು’ ಭಾರತಕ್ಕೆ ಹಿಂತಿರುಗಿ ತರುವುದಕ್ಕಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತು ರಾಜ್ಯದ ಸಾಂಸ್ಕೃತಿಕ ಕಾರ್ಯ ಸಚಿವ ಸುಧೀರ ಮುನಗಂಟಿವಾರ ಇವರು ಸೆಪ್ಟೆಂಬರ್ ೨೯ ರಂದು ಇಂಗ್ಲೆಂಡಿಗೆ ಹೋಗುವರು. ಅಲ್ಲಿ ಅಕ್ಟೋಬರ್ ೩ ರಂದು ಮುಖ್ಯಮಂತ್ರಿ ‘ಹುಲಿ ಉಗುರು’ ಹಸ್ತಾಂತರದ ಒಪ್ಪಂದದ ಮೇಲೆ ಸಹಿ ಹಾಕುವರು. ಇದೇ ‘ಹುಲಿ ಉಗುರಿನಿಂದ’ ಛತ್ರಪತಿ ಶಿವಾಜಿ ಮಹಾರಾಜರು ಅವರ ಜೊತೆಗೆ ಮೋಸ ಮಾಡಿದ್ದ ಅಫ್ಜಲಖಾನನ ಕರಳು ಬಗೆದು ಹೊರತೆಗೆದಿದ್ದರು. ಈ ಪ್ರತಿನಿಧಿ ಮಂಡಳದಲ್ಲಿ ಸಾಂಸ್ಕೃತಿಕ ಇಲಾಖೆಯ ಪ್ರಧಾನ ಸಚಿವರು ಮತ್ತು ಪುರಾತತ್ವ ಮತ್ತು ವಸ್ತುಸಂಗ್ರಹಾಲಯದ ಸಂಚಾಲಕರ ಸಂಚಾಲಕರು ಇರುವರು. ಯಾವ ಸ್ಥಳದಲ್ಲಿ ಈ ‘ಹುಲಿಉಗುರು’ ಇರುವುದು, ಆ ಲಂಡನ್ ನಲ್ಲಿಯ ವಿಕ್ಟೋರಿಯಾ ಅಂಡ್ ಅಲ್ಬರ್ಟ್ ಮ್ಯೂಸಿಯಂ ನ ಸಂಚಾಲಕ ಟ್ರೈಯ ಸ್ಟ್ರಮ ಹಂಟ್ ಇವರ ಜೊತೆಗೆ ಭಾರತೀಯ ಪ್ರತಿನಿಧಿ ಮಂಡಳದ ಭಾರತೀಯ ಸಮಯಾನಸಾರ ಮಧ್ಯಾಹ್ನ ೩.೩೦ ಗಂಟೆಗೆ ಸಭೆ ನಡೆಯುವುದು. ಅಕ್ಟೋಬರ್ ೨ ರಂದು ಲಂಡನ್ ನಲ್ಲಿಯ ಸೇಂಟ್ ಜಂಪ್ಸೆಸ್ ಪೆಲೆಸಲಾ ಈ ಪ್ರತಿನಿಧಿ ಮಂಡಳಕ್ಕೆ ಭೇಟಿ ನೀಡುವುದು. ಈ ಪ್ರತಿನಿಧಿ ಮಂಡಳ ಅಕ್ಟೋಬರ್ ನಾಲ್ಕರವರೆಗೆ ಇಂಗ್ಲೆಂಡ್ಲ್ ನಲ್ಲಿ ಇರುವರು.