ರಾವಣನ ದುರಹಂಕಾರ ಮತ್ತು ಬಾಬರ್ ಹಾಗೂ ಔರಂಗಜೇಬನ ದೌರ್ಜನ್ಯ, ಇದಾದ ನಂತರವೂ ಸನಾತನವು ಅಂತ್ಯಗೊಂಡಿಲ್ಲ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಕೇಂದ್ರ ಸರಕಾರ ಜಾರಿಗೊಳಿಸಿರುವ ಯೋಜನೆಗಳು ಹಾಗೆಯೇ ಮಾಡಿರುವ ಕಾರ್ಯಗಳನ್ನು ಸನಾತನ ಎಂಬ ಪದ ಬಳಸಿ ಅಪಕೀರ್ತಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ; ಆದರೆ ರಾವಣನ ದುರಹಂಕಾರ ಮತ್ತು ಬಾಬರ್ ಹಾಗೂ ಔರಂಗಜೇಬನ ದೌರ್ಜನ್ಯದ ಬಳಿಕವೂ ಸನಾತನ ಕೊನೆಗೊಂಡಿಲ್ಲ ವಿರೋಧಿಸುವವರು ಮರೆತಿದ್ದಾರೆ. ಇಂತಹ ತುಚ್ಛ ಜನರು ಸನಾತನವನ್ನು ಏನು ಅಂತ್ಯಗೊಳಿಸಲಿದ್ದಾರೆ ?, ಎನ್ನುವ ಶಬ್ದಗಳಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉದಯನಿಧಿ ಅವರನ್ನು ಟೀಕಿಸಿದ್ದಾರೆ.

ಸೂರ್ಯನ ಮೇಲೆ ಉಗುಳುವ ಯತ್ನ !

ಯೋಗಿ ಆದಿತ್ಯನಾಥ್ ತಮ್ಮ ಮಾತನ್ನು ಮುಂದುವರಿಸಿ, ಜನರು ತಮ್ಮ ಮೂರ್ಖತನವನ್ನು ಸಾಬೀತುಪಡಿಸಲು ಸೂರ್ಯನ ಮೇಲೆ ಉಗುಳಲು ಪ್ರಯತ್ನಿಸುತ್ತಿರುತ್ತಾರೆ; ಆದರೆ, ಸೂರ್ಯನ ಮೇಲೆ ಉಗುಳಲು ಪ್ರಯತ್ನಿಸಿದರೆ, ಉಗುಳು ಸ್ವತಃ ಅವರ ಮುಖದ ಮೇಲೆಯೇ ಬೀಳುತ್ತದೆಯೆಂದು ಅವರಿಗೆ ತಿಳಿಯುವುದಿಲ್ಲ. ರಾವಣ, ಹಿರಣ್ಯಕಶಿಪು, ಕಂಸ ಮುಂತಾದ ರಾಕ್ಷಸರು ಕೂಡ ಈಶ್ವರನ ಶಕ್ತಿಗೆ ಸವಾಲೆಸೆದರು, ಅವರೆಲ್ಲರಿಗೂ ಸೋಲಿನ ಧೂಳಿನ ರುಚಿ ನೋಡಬೇಕಾಯಿತು. ಸನಾತನ ಧರ್ಮ ಎಂದಿಗೂ ನಾಶವಾಗದ ಸತ್ಯವಾಗಿದೆ. ಇದು ದೇವರ ಕೃಪೆಯೇ ಆಗಿದೆ. ಸನಾತನ ಧರ್ಮಕ್ಕೆ ಶಕ್ತಿ ಸಿಗುತ್ತಿರುವ ಕಾಲದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣವಾಗುತ್ತಿದೆ ಎಂದು ಹೇಳಿದರು.