‘ನಾಸಾ’ ದಿಂದ ಚಂದ್ರನ ಮೇಲೆ ಇಳಿದ ‘ಚಂದ್ರಯಾನ-3’ ಚಿತ್ರ ಬಿಡುಗಡೆ !

ನವದೆಹಲಿ : ಭಾರತದ ಚಂದ್ರಯಾನ-3 ಚಂದ್ರನ ಮೇಲೆ ಇಳಿಯುತ್ತಿರುವ ಚಿತ್ರವನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಬಿಡುಗಡೆ ಮಾಡಿದೆ. ಆಗಸ್ಟ್ 23, 2023 ರಂದು ಚಂದ್ರಯಾನ-3 ಚಂದ್ರನ ಮೇಲ್ಮೈಗೆ ಬಂದಿಳಿದಿದೆ. ಆ ಸ್ಥಳವು ಚಂದ್ರನ ದಕ್ಷಿಣ ಧ್ರುವದಿಂದ 600 ಕಿ.ಮೀ. ಅಂತರದಲ್ಲಿದೆ. ನಮ್ಮ ‘ಲೂನರ್ ರಿಯಾನ್ಸೆಂಸ್ ಆರ್ಬಿಟರ್’ನಲ್ಲಿ ಅಳವಡಿಸಲಾದ’ ‘ಎಲ್.ಆರ್.ಓ.’ ಕ್ಯಾಮರಾವು ‘ಚಂದ್ರಯಾನ-3’ ಲ್ಯಾಂಡಿಂಗ್ ಪ್ರದೇಶದ ಚಿತ್ರವನ್ನು ತೆಗೆದುಕೊಂಡಿದೆ. ಈ ಚಿತ್ರ ‘ಚಂದ್ರಯಾನ-3’ ಚಂದ್ರನ ಮೇಲೆ ಇಳಿದ 4 ದಿನಗಳ ನಂತರ ತೆಗೆಯಲಾಗಿದೆ. ಈ ಚಿತ್ರದಲ್ಲಿ ‘ವಿಕ್ರಮ್’ ಲ್ಯಾಂಡರ್ ಇಳಿದ ಈ ಛಾಯಾಚಿತ್ರದಲ್ಲಿ, ನಾಲ್ಕು ಬದಿಗಳಲ್ಲಿ ಬಿಳಿ ಬಣ್ಣವನ್ನು ಕಾಣಬಹುದು. ಲ್ಯಾಂಡರ್‌ನ ಎಂಜಿನ್ ಧೂಳನ್ನು ಎಬ್ಬಿಸಿದೆ ಎಂದು ಹೇಳಿದೆ.

(ಸೌಜನ್ಯ – Hindustan Times)