|
ಚೆನ್ನೈ (ತಮಿಳುನಾಡು) – ಉದಯನಿಧಿ ಇವರು ಸನಾತನ ಧರ್ಮದ ಬಗ್ಗೆ ಆಕ್ಷೇಪಾರ್ಹ ಹೇಳಿಕೆಯ ಬಗ್ಗೆ ಈಗ ಅವರ ತಂದೆ ಮತ್ತು ರಾಜ್ಯದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇವರು ಹೇಳಿಕೆ ನೀಡಿದ್ದಾರೆ. ಅವರು, ಉದಯನಿಧಿಗೆ ಹಿಂದುಳಿದ ಜಾತಿ, ಜನಾಂಗ ಮತ್ತು ಮಹಿಳೆಯರ ಜೊತೆಗೆ ಭೇದಭಾವ ಮಾಡುವ ಸನಾತನದ ಸಿದ್ದಾಂತದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉದಯನಿಧಿ ಯಾವುದೇ ಧರ್ಮ ಧಾರ್ಮಿಕ ಪರಂಪರೆ ಇವುಗಳಿಗೆ ನೋವುಂಟು ಮಾಡುವ ಉದ್ದೇಶ ಅವರದಾಗಿರಲಿಲ್ಲ. ಭಾಜಪ ಉದಯನಿಧಿ ಇವರ ವಿಚಾರ ತಿಳಿದುಕೊಂಡಿಲ್ಲ ಆದ್ದರಿಂದ ಉದಯನಿಧಿ ಇವರ ಬಗ್ಗೆ ಸುಳ್ಳು ಮಾಹಿತಿ ಪಸರಿಸುತ್ತಿದೆ ಎಂದು ಹೇಳಿದರು.
ಉದಯನಿಧಿ ಇವರ ದ್ರಮುಕ ಪಕ್ಷ ಹಿಂದೂ ಧರ್ಮವಿರೋಧಿಯಾಗಿದೆ. ಅವರ ಅದೇ ವಿಚಾರಧಾರೆ ಈಗ ಬಟಾಬಯಲಾಗಿದೆ. ಆದ್ದರಿಂದ ಉದಯನಿಧಿ ಇವರು ನೀಡಿರುವ ಹೇಳಿಕೆ ಸನಾತನ ಧರ್ಮದ ವಿರುದ್ಧವಾಗಿದೆ, ಇದರಲ್ಲಿ ಯಾವುದೇ ಸಂದೇಹವಿಲ್ಲ !
|
ಸನಾತನ ದ್ವೇಷಿ ಹೇಳಿಕೆ ನೀಡಿದ ನಂತರ ಉದಯನಿಧಿ ಇವರ ಬಗ್ಗೆ ಟೀಕೆಗಳು ಆರಂಭವಾದ ನಂತರ ಅವರು ಭಾಜಪವನ್ನು ಟೀಕಿಸಿದರು. ಉದಯನಿಧಿ, ಕೇಸರಿ ಪಕ್ಷದ ನಾಯಕರು ನನ್ನ ಹೇಳಿಕೆ ತಿರುಚಿ ಹೇಳುತ್ತಿದ್ದಾರೆ. ‘ಮೋದಿ ಮತ್ತು ಅವರ ಕಂಪನಿ ಜನರ ಗಮನ ವಿಚಲಿತ ಗೊಳಿಸುವುದಕ್ಕಾಗಿ ಸನಾತನದ ಉಪಯೋಗ ಮಾಡುತ್ತಿದ್ದಾರೆ. ನನ್ನ ಹೇಳಿಕೆ ಅವರ ರಕ್ಷಣೆಯ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ, ಎಂದು ಅವರು ಟೀಕಿಸಿದರು.
ಉದಯನಿಧಿ ಮಾತು ಮುಂದುವರಿಸಿ, ಮಣಿಪುರದಲ್ಲಿನ ಹಿಂಸಾಚಾರದ ಪ್ರಶ್ನೆಗಳನ್ನು ಎದುರಿಸಲಾಗದೆ ಪ್ರಧಾನಮಂತ್ರಿ ಜಗತ್ತೆಲ್ಲ ತಿರುಗುತ್ತಿದ್ದಾರೆ. ಕಳೆದ ೯ ವರ್ಷಗಳಲ್ಲಿ ಭಾಜಪ ನೀಡಿರುವ ಆಶ್ವಾಸನೆಗಳು ಗಾಳಿಗೆ ತೂರಿದ್ದಾರೆ. ‘ನೀವು ನಮ್ಮ ಕಲ್ಯಾಣಕ್ಕಾಗಿ ಏನು ಮಾಡಿದ್ದೀರಿ ?’, ಎಂದು ದೇಶ ಸಂಘಟಿತವಾಗಿ ಭಾಜಪ ಸರಕಾರಕ್ಕೆ ಪ್ರಶ್ನೆ ಕೇಳುತ್ತಿದೆ ಎಂದು ಹೇಳಿದರು.
On Tamil Nadu Minister Udhayanidhi Stalin’s ‘Sanatana Dharma should be eradicated’, Tamil Nadu CM MK Stalin says “He expressed his views on Sanatan principles that discriminate against Scheduled Castes, Tribals, and Women, with no intention to offend any religion or religious… pic.twitter.com/pq2GP0esRp
— ANI (@ANI) September 7, 2023
ಸಂಪಾದಕೀಯ ನಿಲಿವು
|