ಸನಾತನ ಧರ್ಮದ ಮೇಲೆ ಟೀಕೆ ಮಾಡುವವರು ರಾವಣನ ವಂಶಸ್ಥರು ! – ಧೀರೇಂದ್ರ ಕೃಷ್ಣ ಶಾಸ್ರಿ

ಬರೇಲಿ (ಉತ್ತರ ಪ್ರದೇಶ) – ಸನಾತನ ಧರ್ಮದ ಮೇಲೆ ಟೀಕೆ ಮಾಡುವವರು ರಾವಣನ ವಂಶದವರಾಗಿದ್ದಾರೆ. ಭಾರತದಲ್ಲಿ ವಾಸಿಸುವ ಓರ್ವ ನಾಗರಿಕನು ಈ ರೀತಿಯಲ್ಲಿ ಹೇಳಿಕೆ ನೀಡಿ ಭಾರತದಲ್ಲಿ ವಾಸಿಸುವ ಎಲ್ಲ ಸನಾತನಿಗಳ ಹೃದಯಕ್ಕೆ ಆಘಾತ ಮಾಡಿದ್ದಾರೆ. ಇದು ಪ್ರಭು ಶ್ರೀ ರಾಮಚಂದ್ರನ ದೇಶವಾಗಿದೆ.

ಈ ಭೂಮಿಯ ಮೇಲೆ ಸೂರ್ಯ ಮತ್ತು ಚಂದ್ರ ಇರುವರೆವಿಗೂ ಸನಾತನ ಇರುತ್ತದೆ. ಇಂತಹ ಅನೇಕ ಜನರು ಬಂದು ಹೋಗಿದ್ದಾರೆ. ಇಂತಹ ಪ್ರಾಣಿಗಳಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ, ಎಂದು ಭಾಗೇಶ್ವರ ಧಾಮದ ಶ್ರೀ ಧೀರೇಂದ್ರಕೃಷ್ನ ಶಾಸ್ರಿಯವರು ತಮ್ಮ ಪ್ರವಚನದಲ್ಲಿ ಉದಯನಿಧಿ ಸ್ಟಾಲಿನ್ ರವರ ಹೆಸರು ಹೇಳದೆ ಟೀಕಿಸಿದ್ದಾರೆ.