ಇಸ್ರೋದ ಮಹಿಳಾ ವಿಜ್ಞಾನಿ ಎನ್. ವಲರ್ಮತಿ ನಿಧನ

‘ಚಂದ್ರಯಾನ-3’ಗೆ ‘ಕೌಂಟ್ಡೌನ್’ ಗೆ ಧ್ವನಿ ನೀಡಿದ್ದರು !

(ಇಲ್ಲಿ ಕೌಂಟ್ಡೌನ್ ಎಂದರೆ ಯಾನದ ಉಡಾವಣೆಯ ಕೊನೆಯ 10 ಸೆಕೆಂಡುಗಳನ್ನು ಎಣಿಸುವ ಕೆಳಗಿನಿಂದ ಮೇಲಿನ ತನಕ ಎಣಿಸುವಿಕೆ ಎಂದರ್ಥ)

ಶ್ರೀಹರಿಕೋಟಾ (ಆಂಧ್ರಪ್ರದೇಶ) – ‘ಚಂದ್ರಯಾನ-3’ ಉಡಾವಣೆಗೂ ಮುನ್ನ ‘ಕೌಂಟ್ಡೌನ್’ ಮಾಡಿದ ‘ಇಸ್ರೋ’ದ ಮಹಿಳಾ ವಿಜ್ಞಾನಿ ಎನ್. ವಲರ್ಮತಿ ಅವರು ಸೆಪ್ಟೆಂಬರ್ 3ರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 64 ವರ್ಷ ವಯಸ್ಸಾಗಿತ್ತು. ‘ಇಸ್ರೋ’ದ ಹಲವು ಯೋಜನೆಗಳ ಉಡಾವಣೆಯ ‘ಕೌಂಟ್ಡೌನ್’ ಎನ್. ವಲರ್ಮತಿಯವರು ಮಾಡಿದ್ದರು. ‘ಇಸ್ರೋ’ದ ಮಾಜಿ ನಿರ್ದೇಶಕ ಡಾ. ಪಿ.ವಿ. ವೆಂಕಟಕೃಷ್ಣನ್ ಅವರು ವಲರ್ಮತಿಯವರ ನಿಧನದ ಕುರಿತು ಟ್ವೀಟ್ ಮಾಡಿದ್ದಾರೆ.