‘ಸನಾತನ ಧರ್ಮ ಅಂದರೆ ಜಾತಿಗಳಲ್ಲಿ ವಿಭಜನೆ ಮಾಡುವ ನಿಯಮ !’ (ಅಂತೆ) – ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ

ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರ ಹಿಂದೂದ್ವೇಷಿ ಹೇಳಿಕೆ

ಚೆನ್ನೈ – ಉದಯನಿಧಿ ಅವರ ಹೇಳಿಕೆಯ ಬಗ್ಗೆ ವಿವಾದ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಇವರು, ‘ಸನಾತನ ಧರ್ಮವು ಬೇರೇನೂ ಅಲ್ಲದೆ ಜಾತಿ ವಿಭಜನೆಯ ನಿಯಮವಾಗಿದೆ. ಇದಕ್ಕಾಗಿ ಪ್ರತಿಪಾದಿಸುವವರೆಲ್ಲರೂ ಒಳ್ಳೆಯ ಹಳೆಯ ದಿನಗಳಿಗಾಗಿ ಹಾತೊರೆಯುತ್ತಿದ್ದಾರೆ’ ಜಾತಿ ಭಾರತಕ್ಕೆ ಸಿಕ್ಕ ಶಾಪವಾಗಿದೆ’, ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದಾರೆ. ಕಾರ್ತಿ ಚಿದಂಬರಂ ಅವರು ಮುಂದೆ ಮಾತನಾಡುತ್ತಾ, “ತಮಿಳುನಾಡಿನ ಸಾಮಾನ್ಯ ಭಾಷೆಯಲ್ಲಿ ‘ಸನಾತನ ಧರ್ಮ’ ಎಂದರೆ ಜಾತಿ-ಶ್ರೇಣಿಬದ್ದ ಸಮಾಜ. ಸನಾತನ ಧರ್ಮವನ್ನು ಪ್ರತಿಪಾದಿಸುವ ಪ್ರತಿಯೊಬ್ಬರೂ ವಿಶೇಷ ಅಧಿಕಾರದ ವರ್ಗದಿಂದ ಬಂದಿರುತ್ತಾನೆ.” ಎಂದು ಹೇಳಿದರು.
ಕಾರ್ತಿ ಕಾಶ್ಮೀರದ ಹಜರತಬಲ್ ದರ್ಗಾದಲ್ಲಿ ನಮಾಜ್ ಮಾಡಿದ್ದರು !

ಸನಾತನ ಧರ್ಮದ ಬಗ್ಗೆ ಮಾತನಾಡುವ ಕಾರ್ತಿ ಚಿದಂಬರಂ ಅವರು ಸೆಪ್ಟೆಂಬರ್ 2021 ರಲ್ಲಿ, ಕಾಶ್ಮೀರದ ಹಜರತ್‌ಬಲ್ ದರ್ಗಾಕ್ಕೆ ಹೋಗಿ ನಮಾಜ್ ಮಾಡಿದ್ದರು. ಅವರು ಹೆಮ್ಮೆಯಿಂದ ತಮ್ಮ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.

ಸಂಪಾದಕೀಯ ನಿಲಿವು

ಕಾರ್ತಿ ಚಿದಂಬರಂರವರೆಂದರೆ ಹಿಂದೂ ಧರ್ಮದ ಮೇಲೆ ಕೆಸರು ಎರಚುವ ಅವಕಾಶವಾದಿ ! ‘ಇಂತಹ ವೈಚಾರಿಕ ಮತಾಂತರಿಗಳಿಂದ ಹಿಂದೂ ಧರ್ಮಕ್ಕೆ ನಿಜವಾದ ಅಪಾಯವಿದೆ’ ಎಂದು ಯಾರಿಗಾದರು ಅನಿಸಿದರೆ ಇದರಲ್ಲಿ ತಪ್ಪೇನಿದೆ ?

ಮುಸ್ಲಿಂ ಮತ್ತು ಕ್ರೈಸ್ತ ನಾಯಕರು ತಮ್ಮ ಧರ್ಮವನ್ನು ಎಂದಿಗೂ ಈ ರೀತಿ ಅಗೌರವಗೊಳಿಸುವುದಿಲ್ಲ, ಇದಕ್ಕೆ ವಿರುದ್ಧವಾಗಿ ಹಿಂದೂ ಧರ್ಮವನ್ನು ಅಗೌರವಿಸಲು ಹಿಂದೂ ನಾಯಕರ ನಡುವೆ ಸ್ಪರ್ಧೆಗಳು ನಡೆದಿರುತ್ತದೆ ! ಇದು ಹಿಂದೂ ನಾಯಕರಲ್ಲಿನ ಧರ್ಮಾಭಿಮಾನಶೂನ್ಯವಿರುವ ವೃತ್ತಿ ತೋರಿಸುತ್ತದೆ !