ಲಿವ್ ಇನ್ ರಿಲೇಶನ್ಶಿಪ್’ ಮೂಲಕ ಭಾರತದ ವಿವಾಹ ಪದ್ದತಿಯನ್ನು ವ್ಯವಸ್ಥಿತವಾಗಿ ನಾಶಪಡಿಸುವ ಪ್ರಯತ್ನ ! – ಅಲಹಾಬಾದ್ ಹೈಕೋರ್ಟ್

ಪ್ರಯಾಗರಾಜ್ (ಉತ್ತರ ಪ್ರದೇಶ) – `ಲಿವ್ ಇನ್ ರಿಲೇಶನಶಿಪ್’ ಪದ್ದತಿಯು ಆರೋಗ್ಯಕರ ಮತ್ತು ಸಾಮಾಜಿಕ ಸ್ಥಿರತೆಯ ಸಂಕೇತವೆಂದು ಹೇಳಲು ಸಾಧ್ಯವಿಲ್ಲ. ವಿವಾಹ ಪದ್ದತಿಯಿಂದ ದೊರಕುವ ಭದ್ರತೆ ಮತ್ತು ಸ್ಥಿರತೆಯು ‘ಲಿವ್ ಇನ್ ರಿಲೇಶನ್ ಶಿಪ್’ನಲ್ಲಿ ಸಿಗುವುದಿಲ್ಲ. ಕೆಲವು ದಿನಗಳ ನಂತರ ಜೊತೆಗಾರರನ್ನು ಬದಲಾಯಿಸುವ ಈ ವಿಧಾನವನ್ನು ಕ್ರೂರ ಎಂದು ಕರೆಯಬೇಕಾಗುತ್ತದೆ. ಇದು ಭಾರತದಲ್ಲಿ ವಿವಾಹ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ನಾಶಪಡಿಸುವ ಪ್ರಯತ್ನವಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ಪ್ರಕರಣವೊಂದರ ಕುರಿತು ಆದೇಶ ನೀಡಿತು. ‘ಲಿವ್ ಇನ್ ರಿಲೇಶನ್ ಶಿಪ್’ನಲ್ಲಿ ವಾಸಿಸುವ ಮಹಿಳೆಯೊಬ್ಬಳು ತನ್ನ ಸಂಗಾತಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿದ್ದಾಳೆ. ಉಚ್ಚನ್ಯಾಯಾಲಯದಲ್ಲಿ ಈ ಪ್ರಕರಣವು ವಿಚಾರಣೆಗೆ ಬಂದಾಗ, ನ್ಯಾಯಾಲಯವು ಆರೋಪಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಮೇಲಿನ ಹೇಳಿಕೆಯನ್ನು ನೀಡಿದೆ.

ಸಂಗಾತಿಗೆ ಮೋಸ ಮಾಡುವುದು ಮತ್ತು ಬೇರೆಯವರೊಂದಿಗೆ ದೈಹಿಕ ಸಂಬಂಧ ಬೆಳೆಸುವುದು ಪ್ರಗತಿಶೀಲ ಸಮಾಜದ ಸಂಕೇತವೆಂದು ಪರಿಗಣಿಸಲಾಗುತ್ತಿದೆ !

ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸಿದ್ಧಾರ್ಥ ಇವರು ತೀರ್ಪು ನೀಡುವಾಗ, ಈ ದೇಶದಲ್ಲಿ ವಿವಾಹ ಪದ್ದತಿಯನ್ನು ಕಾಲಬಾಹಿರವೆಂದು ಪರಿಗಣಿಸಿದ ನಂತರವೇ ಲಿವ್ ಇನ್ ರಿಲೇಶನಶಿಪ್ ಸಾಮಾನ್ಯ ಎಂದು ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ. ಇದು ಅನೇಕ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಸಂಭವಿಸಿದೆ. ಮದುವೆಯ ಪದ್ದತಿಯನ್ನು ರಕ್ಷಿಸುವುದು ಆ ದೇಶಗಳಿಗೆ ದೊಡ್ಡ ಸಮಸ್ಯೆಯಾಗಿದೆ. ಇದು ಭವಿಷ್ಯದಲ್ಲಿ ನಮಗೆ ದೊಡ್ಡ ಸಮಸ್ಯೆಯನ್ನು ಸೃಷ್ಟಿಸುತ್ತಿದೆ. ಮದುವೆಯ ನಂತರ ಮತ್ತು ‘ಲಿವ್ ಇನ್ ರಿಲೇಶನ್ ಶಿಪ್’ ಸಂಬಂಧದಲ್ಲಿ ಸ್ತ್ರೀ ಅಥವಾ ಪುರುಷ ತನ್ನ ಸಂಗಾತಿಗೆ ಮೋಸ ಮಾಡಿ, ಬೇರೆ ವ್ಯಕ್ತಿಯೊಂದಿಗೆ ದೈಹಿಕ ಸಂಬಂಧವನ್ನು ಹೊಂದುವುದು ಪ್ರಗತಿಪರ ಸಮಾಜದ ಸಂಕೇತವಾಗಿದೆಯೆಂದು ಪರಿಗಣಿಸಲಾಗುತ್ತಿದೆ. (‘ಪ್ರಗತಿಪರ’ ಎಂದರೆ ಏನು ಎಂಬುದನ್ನು ನ್ಯಾಯಾಲಯ ಸ್ಪಷ್ಟಪಡಿಸಿದೆ ಎಂಬುದನ್ನು ಗಮನಿಸಬೇಕು ! – ಸಂಪಾದಕರು)

ಯಾವ ಪ್ರಕರಣ?

* ಉತ್ತರ ಪ್ರದೇಶದ ಸಹಾರನಪುರ ನಿವಾಸಿಯಾಗಿರುವ ಯುವಕ ಮತ್ತು ಆತನ 19 ವರ್ಷದ ಪ್ರಿಯತಮೆ ‘ಲಿವ್ ಇನ್ ರಿಲೇಶನ್ಶಿಪ್’ನಲ್ಲಿ ವಾಸಿಸುತ್ತಿದ್ದರು. ಇದರಿಂದ ಯುವತಿ ಗರ್ಭಿಣಿಯಾದಳು. ಇದರ ಹೊರತಾಗಿಯೂ ಆಕೆ ಯುವಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ದೂರು ದಾಖಲಿಸಿದ್ದಾಳೆ. ‘ಯುವಕನು ಮದುವೆಯ ಭರವಸೆ ನೀಡಿದ್ದನು; ಆದರೆ ಈಗ ಆತ ಮದುವೆಗೆ ಸಿದ್ಧನಿಲ್ಲ’ ಎಂದು ಯುವತಿ ದೂರಿದ್ದಾಳೆ. ತದನಂತರ ಪೊಲೀಸರು ಯುವಕನನ್ನು ಬಂಧಿಸಿದರು.