೧. ಯಾವ ಕಾಯಿಲೆಯಲ್ಲಿ ಟೊಮೇಟೊ ತಿನ್ನಬಾರದು ?
ನೆಗಡಿ, ಕೆಮ್ಮು, ಕೀಲು ನೋವು, ಊತ, ತಲೆನೋವು, ಆಮ್ಲಪಿತ್ತ (ಅಸಿಡಿಟಿ) ಯೂರಿಕ್ ಆಸಿಡ್ ಹೆಚ್ಚಳ (ನಮ್ಮ ಶರೀರದಲ್ಲಿ ಒಂದು ರೀತಿಯ ತ್ಯಾಜ್ಯ, ಅದನ್ನು ಮೂತ್ರದ ಮೂಲಕ ಶರೀರದಿಂದ ಹೊರಹಾಕಲಾಗುತ್ತದೆ.) ಹೆಚ್ಚಿರುವ ಕ್ರಿಯೇಟಿನಿನ್ (ಶರೀರದಲ್ಲಿ ತಯಾರಾಗುವ ನೈಟ್ರೋಜನ್ಯುಕ್ತ ತ್ಯಾಜ್ಯ, ಮೂತ್ರದ ಮೂಲಕ ಶರೀರದಿಂದ ಹೊರಹಾಕಲಾಗುತ್ತದೆ) ಮೂತ್ರಪಿಂಡದ ಕಾಯಿಲೆ (ಕಿಡ್ನಿ ಸ್ಟೋನ್ ಮುಂತಾದ) ಅಲರ್ಜಿ, ಚರ್ಮರೋಗ
೨. ಟೊಮೆಟೊಗೆ ಪರ್ಯಾಯ ಇದೆಯೇ ?
ಪರ್ಯಾಯ ಇದೆ. ಸುಮಾರು ೧೫ ವರ್ಷಗಳ ಹಿಂದೆ ಟೊಮೆಟೊ ಇಷ್ಟೊಂದು ಉಪಯೋಗದಲ್ಲಿರಲಿಲ್ಲ. ಪಂಜಾಬಿ ಆಹಾರದಿಂದ ಟೊಮೆಟೊ ಗ್ರೇವಿ ಈ ರೀತಿ ಆಹಾರ ಬಂದಿತು. ಇಲ್ಲವಾದರೆ ಕೋಕಮ್, ಹುಣಸೆಹಣ್ಣು, ನಿಂಬೆ ಹಣ್ಣು, ಅಪರೂಪಕ್ಕೆ ಆಮಚುರ್ ಇದನ್ನು ಉಪಯೋಗಿಸಿ ಆಹಾರ ಪದಾರ್ಥಗಳನ್ನೂ ರುಚಿಯಾಗಿ ತಯಾರಿಸುತ್ತಿದ್ದರು.
೩. ಕೋಕಮ್, ಹುಣಸೆ ಹಣ್ಣು, ನಿಂಬೆಹಣ್ಣು, ಆಮಚುರ್ ಈ ಪದಾರ್ಥಗಳಿಂದಾಗುವ ಲಾಭ ಮುಂದಿನಂತಿದೆ :
೩ ಅ. ಹುಣಸೆಹಣ್ಣು : ಇದರಲ್ಲಿ ವಿಟಮಿನ್ ‘ಸಿ’ ಹೇರಳ ವಾಗಿರುತ್ತದೆ. ಹುಣಸೆಹಣ್ಣಿನಿಂದ ಹೊಟ್ಟೆ ಸ್ವಚ್ಚವಾಗುತ್ತದೆ ಮತ್ತು ಪಚನ(ಜೀರ್ಣ) ಕ್ರಿಯೆ ಸುಧಾರಿಸುತ್ತದೆ ಹಾಗೂ ದೊಡ್ಡ ಕರುಳಿನ ಶಕ್ತಿ ಹೆಚ್ಚುತ್ತದೆ ಮತ್ತು ಅದರ ಚಲನಕ್ರಿಯೆ (ಠಿಎಡೀಸ್ಣಚಿಟಸಿಸ್) ನಿಯಮಿತಗೊಳಿಸುತ್ತದೆ. ಕೀಲು ನೋವು ಇರುವವರು ಹುಣಸೆಹಣ್ಣಿನ ಚಟ್ನಿ ತಿನ್ನಬಾರದು; ಆದರೆ ಅಡುಗೆಗೆ ಬಳಸಿದ ಹುಣಸೆಹಣ್ಣು ತಿನ್ನಬಹುದು.
೩ ಆ. ಕೋಕಮ್ : ತೂಕ ಮತ್ತು ಕೊಲೆಸ್ಟ್ರಾಲ್ (ರಕ್ತದಲ್ಲಿನ ಒಂದು ಘಟಕ) ಕಡಿಮೆಗೊಳಿಸುತ್ತದೆ, ಹೃದಯದ ಕಾರ್ಯ ಮತ್ತು ಪಚನಕ್ರಿಯೆ ಸುಧಾರಿಸುತ್ತದೆ ಹಾಗೂ ಆಮ್ಲಪಿತ್ತಕ್ಕೆ ವರದಾನವಾಗಿದ್ದು ಪಿತ್ತದ ಗಂಧಲೆ (ಶರೀರದ ಮೇಲೆ ಪಿತ್ತದ ಗಂಧಲೆ) ಬರುವುದು ಕಡಿಮೆಯಾಗುತ್ತದೆ.
೩ ಇ. ನಿಂಬೆಹಣ್ಣು : ವಿಟಮಿನ್ ಸಿ ಹೇರಳವಾಗಿ ಇದೆ ಹಾಗೂ ಇದು ಜೀರ್ಣಕಾರಿಯಾಗಿದ್ದು ತೂಕ ಕಡಿಮೆಗೊಳಿಸುತ್ತದೆ. ಇದರಿಂದ ತ್ವಚೆಯ (ಚರ್ಮ) ಆರೋಗ್ಯ ಸುಧಾರಿಸುತ್ತದೆ.
೩ ಈ. ಆಮಚೂರ : ಕಫ ಕಡಿಮೆಗೊಳಿಸುತ್ತದೆ, ಪದೇಪದೇ ಮೂತ್ರ ವಿಸರ್ಜನೆ ಆಗುವುದನ್ನು ನಿಲ್ಲಿಸುತ್ತದೆ ಮತ್ತು ಕೀಲುಗಳಿಗೆ ಬಲ ನೀಡುತ್ತದೆ.
೨ ಉ. ಮಾವಿನಕಾಯಿ ಮತ್ತು ನೆಲ್ಲಿಕಾಯಿ : ಮೇಲಿನ ನಾಲ್ಕು ಪದಾರ್ಥಗಳನ್ನು ಬಿಟ್ಟು ಋತುಗಳಿಗನುಸಾರ ಉಪಲಬ್ಧವಿರುವ ಮಾವಿನಕಾಯಿ ಮತ್ತು ನೆಲ್ಲಿಕಾಯಿಯನ್ನು ನಾವು ನಮ್ಮ ಅಡುಗೆಯಲ್ಲಿ ಖಂಡಿತ ಬಳಸಬೇಕು. ಮಾವಿನಕಾಯಿ ಜೀರ್ಣಕಾರಿಯಾಗಿದೆ ಹಾಗೂ ನೆಲ್ಲಿಕಾಯಿಯಿಂದ ವಿಟಮಿನ್ ಸಿ ಹೇರಳವಾಗಿ ದೊರೆಯುತ್ತದೆ. ನೆಲ್ಲಿಕಾಯಿಯಿಂದ ಆಮ್ಲಪಿತ್ತ ಕಡಿಮೆಯಾಗುತ್ತದೆ ಹಾಗೂ ಶರೀರದಲ್ಲಿ ಹೊಸ ಕೋಶಗಳು ತಯಾರಾಗಲು ಸಹಾಯವಾಗುತ್ತದೆ.
ಇಷ್ಟೊಂದು ಹೇರಳವಾದ ಪೋಷಕಾಂಶ ಇರುವಾಗ ಟೊಮೆಟೊದ ಅವಶ್ಯಕತೆ ಏನಿದೆ ? ಅಪರೂಪಕ್ಕೆ ಪಾವ್ ಬಾಜಿ ಮತ್ತು ಚೋಲೆ ತಯಾರಿಸುವಾಗ ಉಪಯೋಗಿಸಿ; ಆದರೆ ಪ್ರತಿನಿತ್ಯ ಬೇಡ !
– ವೈದ್ಯೆ ಚಂದಾರಾಣಿ ಬಿರಾಜದಾರ, ಎಂ.ಡಿ. ಆಯುರ್ವೇದ
ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು. ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥ ಗಳಲ್ಲಿ ಉಲ್ಲೇಖವಿದೆ. |