ಬೆಳಗ್ಗೆ ಎದ್ದು ರಸ, ನಿಂಬೆರಸ, ನೀರು ಇತ್ಯಾದಿ ಕುಡಿಯುವುದನ್ನು ತಡೆಗಟ್ಟಿ !

ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

ದಿನನಿತ್ಯ ಬೆಳಗ್ಗೆ ಇಂತಹ ರಸವನ್ನು ಕುಡಿಯಿರಿ’, ‘ನಿಂಬೆ ರಸ ಕುಡಿಯಿರಿ’ ಎಂಬ ಸಂದೇಶಗಳು ಸಾಮಾಜಿಕ ಪ್ರಸಾರ ಮಾಧ್ಯಮಗಳಲ್ಲಿ ಆಯುರ್ವೇದದ ಹೆಸರಿನಲ್ಲಿ ಪ್ರಸಾರವಾಗುತ್ತಿರುತ್ತವೆ. ಹೆಚ್ಚಿನ ಜನರು ಅದನ್ನು ಪಾಲಿಸುತ್ತಾರೆ. ಅವರಿಗೆ ‘ಇದು ಆಯುರ್ವೇದದ ಚಿಕಿತ್ಸೆಯಾಗಿದೆ. ಇದರಿಂದ ಏನು ಅಪಾಯವಾಗುವುದಿಲ್ಲ’, ಎಂದು ಅನಿಸುತ್ತದೆ. ಇಲ್ಲಿ ಗಮನದಲ್ಲಿಡಬೇಕಾದ ಅಂಶವೆಂದರೆ, ಆಯುರ್ವೇದದಲ್ಲಿ ‘ಕಾರಣ ಇಲ್ಲದಿರುವಾಗ ಇಂತಿಂತಹ ಔಷಧಿಯನ್ನು ದಿನನಿತ್ಯ ತೆಗೆದುಕೊಳ್ಳಿರಿ’, ಎಂದು ಎಲ್ಲಿಯೂ ಹೇಳಿಲ್ಲ. ಅದು ನಿಂಬೆರಸವಿರಲಿ ಅಥವಾ ಕೇವಲ ನೀರು ಇರಲಿ, ಶರೀರದಲ್ಲಿನ ಅಗ್ನಿ (ಜೀರ್ಣಶಕ್ತಿ) ಕಡಿಮೆ ಇರುವಾಗ ಏನೇ ತಿಂದರೂ, ಅದು ಇಂದಲ್ಲ ನಾಳೆ ಅಪಾಯಕಾರಿಯಾಗಿರುತ್ತದೆ. ಆದ್ದರಿಂದ ಸಾಮಾಜಿಕ ಪ್ರಸಾರಮಾಧ್ಯಮಗಳಲ್ಲಿನ ಸಂದೇಶಗಳ ಪ್ರಕಾರ ದಿನನಿತ್ಯ ಬೆಳಗ್ಗೆ ಸಾಕಷ್ಟು ನೀರು ಕುಡಿಯುವುದು, ನಿಂಬೆರಸ ಮತ್ತು ಜೇನುತುಪ್ಪ ಸೇವಿಸುವುದು, ಯಾವುದೇ ರಸವನ್ನು ಸೇವಿಸುವುದನ್ನು ತಡೆಗಟ್ಟಬೇಕು.’

ಮಳೆಗಾಲದಲ್ಲಾಗುವ ಕೀಲು ನೋವಿಗೆ ಸುಲಭ ಪರಿಹಾರ

ಸತತ ಮಳೆಯಿಂದ ವಾತಾವರಣ ತಣ್ಣಗಾಗುತ್ತಿದ್ದಂತೆ ಹಲವರು ಕೈಕಾಲುಗಳ ಸಂಧಿ ನೋವಿನಿಂದ (ಕೀಲುನೋವು) ಬಳಲುತ್ತಾರೆ. ಈ ರೀತಿ ಸಂಧುಗಳಲ್ಲಿ ನೋವಾಗುತ್ತಿದ್ದಲ್ಲಿ, ‘ಹೀಟಿಂಗ್‌ ಪ್ಯಾಡ್‌’ನ ಸಹಾಯದಿಂದ ಕೈಕಾಲುಗಳಿಗೆ ಶಾಖ ನೀಡಿ. ಆಗ ನೋವು ತಕ್ಷಣ ಕಡಿಮೆಯಾಗಿ ಆರಾಮವೆನಿಸ ತೊಡಗುತ್ತದೆ. ಶಾಖ ನೀಡಲು ಬಿಸಿನೀರು, ಹೇರ್‌ ಡ್ರೈಯರ್‌ (ಕೂದಲು ಒಣಗಿಸುವ ಯಂತ್ರ)ಅನ್ನು ಸಹ ಬಳಸಬಹುದು. ಆದರೆ ಯಾವುದಾದರೊಂದು ಪದ್ಧತಿಯಿಂದ ನೋವಿರುವ ಭಾಗಕ್ಕೆ ಶಾಖ ನೀಡುವುದು ಮಹತ್ವದ್ದಾಗಿದೆ.

– ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ