ವ್ರತಗಳು ಮತ್ತು ಧಾರ್ಮಿಕ ಹಬ್ಬಗಳಿರುವ ಶ್ರಾವಣ ಮಾಸದ ಮಹಾತ್ಮೆ

೧೭.೮.೨೦೨೩ ರಿಂದ ಶ್ರಾವಣ ಮಾಸ ಆರಂಭವಾಗಿದೆ, ಅದರ ನಿಮಿತ್ತ ಈ ಲೇಖನ. ‘ಶ್ರಾವಣ ಮಾಸ’ ಶಿವನಿಗೆ ಅತ್ಯಂತ ಪ್ರಿಯವಾಗಿದೆ. ಈ ಮಾಸದಲ್ಲಿ ಮಾಡಲಾಗುವ ವ್ರತಗಳು ಮತ್ತು ಆಚರಿಸಲ್ಪಡುವ ಧಾರ್ಮಿಕ ಹಬ್ಬಗಳ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ.

ಜಗದ್ಗುರು ರಾಮಾನಂದಾಚಾರ್ಯ ನರೇಂದ್ರಾಚಾರ್ಯ ಮಹಾರಾಜರು

೧. ಶಿವ ಉಪಾಸನೆ

‘ಜಲಧಾರಾ ಶಿವಪ್ರಿಯಃ |’, ಈ ನ್ಯಾಯಕ್ಕನುಸಾರ ಸಂಪೂರ್ಣ ಶ್ರಾವಣ ಮಾಸದಲ್ಲಿ ಶಿವಾಭಿಷೇಕ ಮಾಡಬೇಕು; ಏಕೆಂದರೆ, ಭಗವಾನ ಶಿವನಿಗೆ ಜಲವು ಅತ್ಯಂತ ಪ್ರಿಯವಾಗಿದೆ. ಶಿವ ಮಂದಿರಗಳಲ್ಲಿ ಲಿಂಗದ ಮೇಲೆ ಅಖಂಡ ಜಲಧಾರೆಯನ್ನು ಇಡಲಾಗುತ್ತದೆ. ಶಿವಪೂಜೆಯಲ್ಲಿ ಬಿಲ್ವಪತ್ರ್ರೆಗೆ ವಿಶೇಷ ಮಹತ್ವವಿದೆ. ತ್ರಿಜನ್ಮಪಾಪ ಸಂಹಾರದ ಸಾಮರ್ಥ್ಯವು ಬಿಲ್ವದಲ್ಲಿರುವುದರಿಂದ ಒಂದು ಬಿಲ್ವಪತ್ರೆಯನ್ನು ಸಮರ್ಪಿಸಲು ಹೇಳಲಾಗಿದೆ. ಶಿವ ಉಪಾಸನೆಯಲ್ಲಿ ‘ಚಿಂತಾಮಣಿ ಪಾರ್ಥಿವೇಶ್ವರ ಪೂಜೆ’ಗೆ ಒಂದು ಬೇರೆಯೇ ಮಹತ್ವವಿದೆ. ಪ್ರತಿದಿನ ಮಣ್ಣಿನ ಶಿವಲಿಂಗ ವನ್ನು ತಯಾರಿಸಬೇಕು, ಅದರ ಪೂಜೆಯನ್ನು ಮಾಡಿ ವಿಸರ್ಜನೆ ಮಾಡಬೇಕು, ಇದು ಪುರಾಣ ಪ್ರಸಿದ್ಧ ಶಿವ ಉಪಾಸನೆ ಆಗಿದೆ.

೨. ಶ್ರಾವಣ ಸೋಮವಾರ

ಶ್ರಾವಣ ಮಾಸದಲ್ಲಿ ಸೋಮವಾರಕ್ಕೆ ವಿಶೇಷ ಮಹತ್ವವಿದೆ. ಈ ದಿನ ಶಿವನ ಉಪಾಸನೆಯು ಹೆಚ್ಚು ಫಲದಾಯಕವಾಗಿರುತ್ತದೆ. ಪ್ರತಿ ಸೋಮವಾರ ಶಿವಮುಷ್ಟಿ ಅರ್ಪಿಸುವ ವ್ರತವನ್ನು ಮಾಡಲಾಗುತ್ತದೆ. ಶಿವನ ಪೂಜೆಯನ್ನು ಮಾಡಿ ಪ್ರತಿ ಸೋಮವಾರ ಕ್ರಮವಾಗಿ ಅಕ್ಕಿ, ಎಳ್ಳು, ಹೆಸರು, ಅಗಸೆ ಮತ್ತು ಜವೆಗೋದಿ ಪ್ರತಿಯೊಂದನ್ನು ಒಂದೊಂದು ಮುಷ್ಟಿ ಶಿವನಿಗೆ ಅರ್ಪಿಸಲಾಗುತ್ತದೆ.

೩. ಶ್ರಾವಣೀ ಶನಿವಾರ

ಶ್ರಾವಣ ಮಾಸದ ಶಿವ ವ್ರತದಲ್ಲಿ ಸೋಮವಾರ ದಂತೆಯೇ ಶನಿವಾರಕ್ಕೆ, ಹಾಗೆಯೇ ಶಿವನ ಉಪಾಸನೆಯ ಜೊತೆಗೆ ನರಸಿಂಹ, ಅಶ್ವಥ್ಥ, ಮಾರುತಿ ಮತ್ತು ಶನಿದೇವರ ಪೂಜೆಗೂ ವಿಶೇಷ ಮಹತ್ವವಿದೆ; ಆದ್ದರಿಂದ ಶ್ರಾವಣ ಮಾಸದಲ್ಲಿ ಸೋಮವಾರದ ಜೊತೆಗೆ ಶನಿವಾರವೂ ವ್ರತ-ಉಪವಾಸ ಮಾಡುತ್ತಾರೆ.

೪. ಆದಿತ್ಯ ವ್ರತ

ಈ ವ್ರತದಲ್ಲಿ ಸೂರ್ಯನ ಉಪಾಸನೆಯನ್ನು ಮಾಡಲಾಗುತ್ತದೆ. ಈ ವ್ರತವು ಶ್ರಾವಣದಿಂದ ಮಾಘ ಮಾಸದ ವರೆಗೆ ೬ ಮಾಸ ಇರುತ್ತದೆ. ಪ್ರತಿ ರವಿವಾರ ಸೂರ್ಯೋದಯದ ಮೊದಲು ಎದ್ದು ಸ್ನಾನಾದಿ ನಿತ್ಯಕರ್ಮಗಳನ್ನು ಮಾಡಿ ಮೌನವಾಗಿದ್ದು ಸೂರ್ಯನ ಉಪಾಸನೆ ಮಾಡಲಾಗುತ್ತದೆ. ೬ ತಿಂಗಳು ಮಾಡಲು ಸಾಧ್ಯವಾಗದಿದ್ದರೆ, ಕೇವಲ ಶ್ರಾವಣ ಮಾಸದಲ್ಲಿ ಬರುವ ರವಿವಾರಗಳಂದು ಸೂರ್ಯನ ಉಪಾಸನೆಯನ್ನು ಮಾಡಬೇಕು. ಮಾಘ ಶುಕ್ಲ ೭, ಅಂದರೆ ರಥಸಪ್ತಮಿಯಂದು ಈ ವ್ರತದ ಉದ್ಯಾಪನ ಮಾಡಬೇಕು.

೫. ಮಂಗಳಗೌರಿ ವ್ರತ

‘ಸ್ತ್ರೀಯರಿಗೆ ಅಖಂಡ ಸೌಭಾಗ್ಯ, ಪುತ್ರ ಸಂಪತ್ತು ಲಭಿಸಬೇಕು’, ಎಂದು ಈ ವ್ರತವನ್ನು ಮಾಡುತ್ತಾರೆ. ಸ್ತ್ರೀಯರು ವಿವಾಹದ ನಂತರ ಈ ವ್ರತವನ್ನು ಆರಂಭಿಸುತ್ತಾರೆ. ಈ ವ್ರತವನ್ನು ನಿರಂತರ ೫ ವರ್ಷಗಳ ಕಾಲ ಮಾಡಬೇಕಾಗುತ್ತದೆ. ಅನಂತರ ಈ ವ್ರತದ ಉದ್ಯಾಪನ ಮಾಡುತ್ತಾರೆ. ಈ ವ್ರತದಲ್ಲಿ ಶಿವ-ಪಾರ್ವತಿಯರ ಉಪಾಸನೆಯನ್ನು ಮಾಡುತ್ತಾರೆ. ರಾತ್ರಿ ಜಾಗರಣೆ ಮಾಡಲಾಗುತ್ತದೆ.

– ಜಗದ್ಗುರು ರಾಮಾನಂದಾಚಾರ್ಯ ನರೇಂದ್ರಾಚಾರ್ಯ ಮಹಾರಾಜ