ಹರಿಯಾಣಾದ ನೂಂಹ ನಗರದಲ್ಲಿ ಮತಾಂಧರು ಮಾಡಿದ ಹಿಂಸಾಚಾರದ ಸತ್ಯತೆ !

ನೂಂಹದ ಗಲಭೆಯಲ್ಲಿನ ಹಿಂಸಾಚಾರದ ಒಂದು ದೃಶ್ಯ

೧. ಹರಿಯಾಣಾದ ನೂಂಹ ನಗರದಲ್ಲಿ ಹಿಂದೂಗಳ ಜಲಾಭಿಷೇಕ ಯಾತ್ರೆಯ ಮೇಲೆ ಮತಾಂಧರಿಂದ ಭೀಕರ ದಾಳಿ !

‘ನೂಂಹ (ಮೇವಾತ)ನಲ್ಲಿನ ಹಿಂಸಾಚಾರದ ಬಗ್ಗೆ ಆಳವಾಗಿ ಗಮನಿಸುವವರು ಒಮ್ಮೆ ಭಯಭೀತರಾಗಿ ಶೋಕಮಗ್ನರಾಗ ಬಹುದು. ನಾನು ಸ್ವತಃ ಭಾರತ ರಾವತ ಮತ್ತು ಉಲೇಮಾ-ಎ-ಹಿಂದ್‌ನ ಪ್ರಮುಖ ಮೌಲಾನಾ ಸೋಹೇಬ ಕಾಸ್ಮೀ ಇವರ ಜೊತೆಗೆ ಸಂಚಾರನಿಷೇಧ ಹಾಗೂ ಭಯದ ವಾತಾವರಣದಲ್ಲಿ ಹಿಂಸಾಚಾರವಾಗಿರುವ ಎಲ್ಲ ಸ್ಥಳಗಳಿಗೆ ಹೋದೆನು. ಹಿಂಸಾಚಾರ ನಡೆದಿರುವ ಪರಿಸರದಲ್ಲಿನ ಕೆಲವು ಜನರನ್ನು ಭೇಟಿ ಮಾಡಲು ಪ್ರಯತ್ನಿಸಿದೆವು, ಅವರೊಂದಿಗೆ ಮಾತನಾಡಿ ಪರಿಸ್ಥಿತಿಯನ್ನು ತಿಳಿದುಕೊಂಡೆವು. ಈ ಹಿಂದೆ ಭಾರತದಲ್ಲಿ ಯಾವುದೇ ಧಾರ್ಮಿಕ ಯಾತ್ರೆಯ ಸಂದರ್ಭದಲ್ಲಿ ಇಂತಹ ಹಿಂಸಾಚಾರ ಆಗಿರಲಿಲ್ಲ. ಯಾರು ಇದಕ್ಕೆ ಎರಡು ಪಂಗಡಗಳಲ್ಲಿನ ಸಾಮಾನ್ಯ ಒತ್ತಡ ಅಥವಾ ಸಂಘರ್ಷವೆಂದು ನೋಡುತ್ತಾರೆಯೋ, ಅವರು ಒಮ್ಮೆ ಅಲ್ಲಿ ಸ್ವತಃ ಹೋಗಿ ಸತ್ಯವನ್ನು ನೋಡಬೇಕು. ಯಾವುದೇ ಹಿಂಸಾಚಾರದಲ್ಲಿ, ಒತ್ತಡದಲ್ಲಿ ಅಥವಾ ಸಮಸ್ಯೆಯಲ್ಲಿ ಸತ್ಯವನ್ನು ಅಡಗಿಸಲು ಪ್ರಯತ್ನವಾದರೆ, ಅದರಲ್ಲಿ ನಿಜವಾದ ಅಪರಾಧಿಗಳ ಬಂಧನವಾಗುವುದಿಲ್ಲ ಅಥವಾ ಅದರ ಪುನರಾವರ್ತನೆ ಆಗುವುದಿಲ್ಲ ಎಂದೇನಿಲ್ಲ. ಹಾಗಾದರೆ ಸತ್ಯ ಏನಿದೆ ?

ಜಲಾಭಿಷೇಕ ಯಾತ್ರೆ ‘ದೇವ ನಲಹರ ಮಹಾದೇವ’ ಮಂದಿರ ದಿಂದ ಹೊರಟು ಫಿರೋಜಪುರ ಝಿರಕಾಕ್ಕೆ ಹೋಗಲಿಕ್ಕಿತ್ತು.

ಈ ಮಂದಿರವು ಅರವಲೀ ಬೆಟ್ಟದ ಕೆಳಗಿನ ಭಾಗದಲ್ಲಿದೆ. ಅಲ್ಲಿಂದ ಹೊರಗೆ ಹೋಗಲು ಒಂದೇ ರಸ್ತೆ ಇದೆ, ಅದು ನೂಂಹ ನಗರದ ಕಡೆಗೆ ಹೋಗುತ್ತದೆ. ಮುಂದೆ ಎರಡು ರಸ್ತೆಗಳು ಬರುತ್ತವೆ, ಅವುಗಳಲ್ಲಿನ ಒಂದು ವೈದ್ಯಕೀಯ ಮಹಾವಿದ್ಯಾಲಯ ದಿಂದ ನೂಂಹ ನಗರಕ್ಕೆ ಹೋಗುತ್ತದೆ ಹಾಗೂ ಇನ್ನೊಂದು ನೂಂಹ ನಗರದಿಂದ ಮುಖ್ಯ ಮಹಾಮಾರ್ಗಕ್ಕೆ ಹೋಗುತ್ತದೆ. ಮಂದಿರದಿಂದ ಬಹುದೂರದ ವರೆಗೆ ಜನವಸತಿಯಿಲ್ಲ. ಯಾತ್ರೆ ಆರಂಭವಾದ ೫೦ ಯಾರ್ಡ್ (೧೫೦ ಅಡಿ) ಅಂತರದಲ್ಲಿ ನಿಮಗೆ ವಾಹನಗಳ ಸುಟ್ಟ ಅವಶೇಷಗಳು ಹಾಗೂ ಇತರ ಸಾಹಿತ್ಯಗಳು ಕಾಣಿಸುವವು. ಪೊಲೀಸರು ಸುಟ್ಟು ಹೋಗಿರುವ ವಾಹನಗಳ ಅವಶೇಷಗಳನ್ನು ಸಂಪೂರ್ಣ ತೆಗೆದು, ಆ ಸ್ಥಳ ವನ್ನು ಸ್ವಚ್ಛಗೊಳಿಸಿದ್ದಾರೆ. ಆದರೂ ಈ ಆಕ್ರಮಣ ಎಷ್ಟು ಭೀಕರವಾಗಿರಬಹುದು ಎಂಬುದನ್ನು ಇದು ತೋರಿಸುತ್ತದೆ.

೨. ಯಾತ್ರೆಯಲ್ಲಿ ಭಾಗವಹಿಸಿದ ಹಿಂದುತ್ವನಿಷ್ಠ ಯುವಕನ ಶಿರಚ್ಛೇದ !

ಒಂದು ವೇಳೆ ಇಲ್ಲಿ ಜನವಸತಿಯೆ ಇಲ್ಲದಿರುವಾಗ ಇಷ್ಟೊಂದು ವಾಹನಗಳನ್ನು ಸುಡುವುದರ ಕಾರಣವೇನು ? ‘ಯಾತ್ರೆ ಮುಂದೆ ಸಾಗಿದಾಗ ಕೆಲವರು ಮುಂದೆ ಹೋದರು, ಕೆಲವರು ಮಧ್ಯಭಾಗದಲ್ಲಿ ಉಳಿದರು ಹಾಗೂ ಮಧ್ಯಭಾಗದಲ್ಲ್ಲಿಯೇ ಆಕ್ರಮಣಗಳು ಆರಂಭವಾದವು’, ಈ ಮಾಹಿತಿ ನಮಗೆ ಸಿಕ್ಕಿತು. ಜೀವವನ್ನು ಉಳಿಸಿಕೊಳ್ಳಲು ಜನರಿಗೆ ಪುನಃ ಮಂದಿರದ ಕಡೆಗೆ ಓಡಿ ಹೋಗಬೇಕಾಯಿತು. ಪ್ರವಾಸದಲ್ಲಿ ಮಹಿಳೆಯರು ಮತ್ತು ಚಿಕ್ಕ ಮಕ್ಕಳೂ ಇದ್ದರು.

ಹಿಂದಿನಿಂದ ಬೆಟ್ಟದ ಮೇಲಿನಿಂದ ಗುಂಡುಗಳನ್ನು ಹಾರಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಮುಂದೆ ಹೋಗಿರುವ ಕೆಲವರ ಮೇಲೆ ಮುಂದೆ ಅಲ್ಲಿಯೂ ಆಕ್ರಮಣ ವನ್ನು ಮಾಡಲಾಯಿತು. ಅಭಿಷೇಕನ ಮೇಲೆ ಗುಂಡು ಹಾರಿಸಿ, ಶಿರಚ್ಛೇದ ಮಾಡಿರುವ ವಾರ್ತೆ ಸಿಕ್ಕಿದ ಸ್ಥಳವು ವೈದ್ಯಕೀಯ ಮಹಾ ವಿದ್ಯಾಲಯದ ವೃತ್ತದಿಂದ ಸ್ವಲ್ಪ ಮುಂದಿದೆ. ಯಾವುದೇ ಯಾತ್ರೆ ಆರಂಭ ವಾದಾಗ ಕೆಲವರು ಮೋಟಾರ್‌ಸೈಕಲ್‌ ಅಥವಾ ಚತುಷ್ಚಕ್ರ ವಾಹನ (ಕಾರು, ಟ್ರ್ಯಾಕ್ಸ ಇತ್ಯಾದಿ)ಗಳಿಂದ ಮುಂದೆ ಹೋಗುತ್ತಾರೆ. ಇದರಿಂದ ರಸ್ತೆ ಖಾಲಿಯಾಗಿ ಯಾತ್ರೆ ಹೊರಡಲು ಸುಲಭವಾಗುತ್ತದೆ. ಅದರಲ್ಲಿಯೇ ಅಭಿಷೇಕ ಮುಂದೆ ಹೋಗಿದ್ದನು.

ಅಲ್ಲಿ ಹೋದಾಗ ಜೀವವನ್ನು ಉಳಿಸಿಕೊಂಡು ಮಂದಿರದಲ್ಲಿ ಅಡಗಿರುವವರನ್ನು ರಕ್ಷಿಸಲು ಪೊಲೀಸರಿಗೆ ಏಕೆ ತಡವಾಯಿತು ?

ಮಂದಿರದ ಎದುರಿಗಿನ ಖಾಲಿ ಜಾಗದಿಂದ ಅಥವಾ ಅದರ ಆಚೆಗಿನ ವಸತಿಯಿಂದ ಕಲ್ಲುತೂರಾಟ, ಗುಂಡು ಹಾರಾಟ ಹಾಗೂ ಪೊಲೀಸರೊಂದಿಗಿನ ಘರ್ಷಣೆ ಎಷ್ಟು ತೀವ್ರ ಆಗಿತ್ತೆಂದರೆ, ಯಾರನ್ನೂ ಅಲ್ಲಿಂದ ಕರೆದುಕೊಂಡು ಹೋಗುವುದು ಅಪಾಯ ಕರ ವಾಗಿದೆ ಎಂದು ಅನಿಸುತ್ತಿತ್ತು. ಪೊಲೀಸರು ಕೆಲವು ಗಂಟೆ ಹಿಂಸಾಚಾರಿಗಳನ್ನು ನಿಯಂತ್ರಿಸಲು ಪ್ರಯತ್ನಿಸಿದರು; ಆದರೆ ತಡವಾಗಿರುವುದರಿಂದ ಗುಂಡು ಹಾರಾಟದಿಂದ ರಕ್ಷಿಸಲು ಪೊಲೀಸರು ರಕ್ಷಣೆ ನೀಡುತ್ತಾ ಸುತ್ತುವರಿದುಕೊಂಡು ಪೊಲೀಸರ ವಾಹನದಲ್ಲಿ ಸ್ವಲ್ಪ ಸ್ವಲ್ಪ ಜನರನ್ನು ಅಲ್ಲಿಂದ ಹೊರಗೆ ತರಲು ಪ್ರಾರಂಭಿಸಿದರು. ರಾತ್ರಿ ತಡವಾಗಿತ್ತು. ಸಂಚಾರನಿಷೇಧ ಹಾಗೂ ಒತ್ತಡಮಯ ವಾತಾವರಣದಿಂದ ಅಲ್ಲಿ ನೇತಾರರನ್ನು ಹುಡುಕಲು ಮತ್ತು ಭೇಟಿಯಾಗಲು ಕಠಿಣವಾಗಿತ್ತು.

೩. ಸಾವಿರಾರು ಹಿಂದೂಗಳನ್ನು ಹತ್ಯೆಗೊಳಿಸುವ ಮತಾಂಧರ ಒಳಸಂಚು ವಿಫಲವಾಯಿತು !

ಆಮ್‌ ಆದ್ಮಿ ಪಕ್ಷದ ಮುಖಂಡ ಫಕ್ರುದ್ದೀನ ಅಲೀ ಇವರು ಅವರ ಊರಲ್ಲಿನ ಮನೆಯಲ್ಲಿ ಭೇಟಿಯಾದರು. ಈ ರೀತಿ ‘ಧಾರ್ಮಿಕ ಯಾತ್ರೆಯ ಮೇಲೆ ಇಂತಹ ಆಕ್ರಮಣವಾಗುವ ಬಗ್ಗೆ ಕಲ್ಪನೆಯನ್ನೂ ಮಾಡಲು ಸಾಧ್ಯವಿಲ್ಲ’ ಎಂದು ಅವರು ಹೇಳಿದರು. ಈ ಮೊದಲು ಹೊಡೆದಾಟವಾದರೆ, ಪೊಲೀಸರು ಬರುತ್ತಿದ್ದರು, ಅವರು ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದರು, ಲಾಠಿ ಪ್ರಹಾರ ಮಾಡುತ್ತಿದ್ದರು, ಅದರಿಂದ ಜನರು ಪಲಾಯನ ಮಾಡುತ್ತಿದ್ದರು. ಈ ಸಲ ಅವರು ಪೊಲೀಸರಂತೆ ‘ಬ್ಯಾರಿಕೆಡಿಂಗ’ (ಅಡಚಣೆಯನ್ನು ನಿರ್ಮಾಣ ಮಾಡುವುದು) ಮಾಡಿ ಸುತ್ತುವರಿದು ನಾಲ್ಕೂ ದಿಕ್ಕುಗಳಿಂದ ಆಕ್ರಮಣ ಮಾಡಿದರು ಹಾಗೂ ಬೆಂಕಿ ಹಚ್ಚಿ ಜನರಲ್ಲಿ ಭಯವನ್ನು ಉತ್ಪನ್ನ ಮಾಡಿದರು. ಇದರಿಂದ ಇದು ನಿಯೋಜನಬದ್ಧ ರೀತಿಯಿಂದ ಮಾಡಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಅವರ ಹೇಳಿಕೆಗನುಸಾರ ಈ ನಿಯೋಜನೆ ಮೇವಾತದಲ್ಲಿಯಲ್ಲ, ರಾಜಸ್ಥಾನದ ಪರಿಸರದಲ್ಲಿ ಆಗಿರಬಹುದು ಎಂದು ಅನಿಸುತ್ತದೆ. ನೂಂಹ ಜಿಲ್ಲೆ ಮತ್ತು ಸಂಪೂರ್ಣ ಮೇವಾತ ಒಂದು ಬದಿಯಲ್ಲಿ ರಾಜಸ್ಥಾನದ ಅಲವರ ಎಂಬ ಊರಿಗೆ ಹೊಂದಿಕೊಂಡಿದ್ದು ಇನ್ನೊಂದು ಬದಿಯಲ್ಲಿ ಮಥುರಾ ಮತ್ತು ಭರತಪುರಕ್ಕೆ ಹೊಂದಿಕೊಂಡಿದೆ. ಕೆಲವು ಜನರ ಅಭಿಪ್ರಾಯಕ್ಕನುಸಾರ ಯಾತ್ರೆ ನೂಂಹವನ್ನು ಬಿಟ್ಟು ಬಡಕಾಲಿಗೆ ತಲಪುತ್ತಿದ್ದರೆ, ಕೆಲವೊಂದು ಸಾವಿರ ಜನರ ಮೃತ್ಯು ಆಗುತ್ತಿತ್ತು. ಈ ಪ್ರವಾಸ ೧೦೦ ಯಾರ್ಡ್ (೩೦೦ ಅಡಿ) ದಷ್ಟೂ ಉಳಿಯಲು ಸಾಧ್ಯವಾಗಲಿಲ್ಲ, ಇದನ್ನು ಗಮನದಲ್ಲಿಡಿ.

೪. ಮತಾಂಧ ಗಲಭೆಕೋರರಿಂದ ಸೈಬರ್‌ ಪೊಲೀಸ್‌ ಠಾಣೆಯ ದಾಖಲೆಗಳನ್ನು ನಾಶಗೊಳಿಸಲು ಪ್ರಯತ್ನ !

ನೂಂಹ ನಗರದಲ್ಲಿಯೂ ಹಿಂಸಾಚಾರ ಮಾಡುವ ಗುಂಪು ವಿವಿಧ ದಿಕ್ಕುಗಳಿಗೆ ಚದುರಿದ ಕಾರಣ ಸಾವು ನೋವುಗಳ ಸಂಖ್ಯೆ ಬಹಳ ಕಡಿಮೆ ಇತ್ತು. ಕೆಲವು ಅಂಗಡಿಗಳನ್ನು ಲೂಟಿ ಮಾಡಿ ಅವುಗಳನ್ನು ಸುಡಲಾಯಿತು. ಕೆಲವರು ಬಸ್‌ಗಳನ್ನು ನಿಲ್ಲಿಸಿ ಜನರನ್ನು ಇಳಿಸಿ ಅವುಗಳಿಗೆ ಬೆಂಕಿಯನ್ನು ಹಚ್ಚಿದರು. ನೂಂಹ ಸೈಬರ್‌ ಪೊಲೀಸ್‌ ಠಾಣೆಯ ದೃಶ್ಯವೂ ನಿಮಗೆ ಬಹಳಷ್ಟು ವಿಷಯಗಳನ್ನು ತಿಳಿಸಿ ಹೇಳಬಹುದು. ಬಸ್‌ಗಳ ಗಾಜುಗಳನ್ನು ಒಡೆದು ಅವುಗಳನ್ನು ವಶಪಡಿಸಿಕೊಂಡು ಅವುಗಳನ್ನು ಚಲಾಯಿಸುವಾಗ ಸೈಬರ್‌ ಪೊಲೀಸ್‌ ಠಾಣೆಯ ಗೋಡೆಗೆ ಡಿಕ್ಕಿ ಹೊಡೆದು ಗೋಡೆಯನ್ನು ಉರುಳಿಸಲಾಯಿತು. ಅದೇ ರೀತಿ ಪೊಲೀಸರ ವಾಹನಗಳನ್ನೂ ಧ್ವಂಸಗೊಳಿಸಲಾಯಿತು. ಸೈಬರ್‌ ಪೊಲೀಸ್‌ ಠಾಣೆಯ ದಾಖಲೆಗಳನ್ನು ನಾಶಮಾಡುವುದೇ ಗಲಭೆಕೋರರ ಉದ್ದೇಶವಾಗಿತ್ತು ಎಂದು ಸ್ಪಷ್ಟವಾಗುತ್ತದೆ. ಮೇವಾತ ಸೈಬರ್‌ ಅಪರಾಧಗಳ ದೇಶದಲ್ಲಿನ ಅತೀ ದೊಡ್ಡ ಕೇಂದ್ರವಾಗಿದೆ. ಕಳೆದ ಕೆಲವು ದಿನಗಳಲ್ಲಿ ಅಲ್ಲಿ ೩೦೦ ಕ್ಕಿಂತಲೂ ಹೆಚ್ಚು ದಾಳಿಗಳನ್ನು ಮಾಡಲಾಯಿತು ಹಾಗೂ ದೊಡ್ಡ ಪ್ರಮಾಣ ದಲ್ಲಿ ಜನರನ್ನು ಬಂಧಿಸಲಾಯಿತು. ಅವುಗಳಲ್ಲಿ ಕೆಲವು ಆಶ್ಚರ್ಯಜನಕ ವಸ್ತುಗಳನ್ನು ಜಪ್ತಿ ಮಾಡಲಾಯಿತು.

ಗಲಭೆಯಲ್ಲಿ ಸುಟ್ಟು ಹಾಕಲಾದ ವಾಹನಗಳು

೫. ಬಸ್‌ ಮತ್ತು ಖಾಸಗಿ ಚತುಷ್ಚಕ್ರ (ಕಾರುಗಳು, ಟ್ಯಾಕ್ಸ ಇತ್ಯಾದಿ) ವಾಹನಗಳನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಲಾಯಿತು!

ಇನ್ನೊಂದೆಡೆ ಕೆಲವು ಚಿತ್ರಸುರುಳಿಗಳಿಂದಾಗಿ ಒತ್ತಡದ ವಾತಾವರಣವಿತ್ತು ಅಥವಾ ಯಾತ್ರೆಯ ನಿಯೋಜಕರು ಒತ್ತಡದ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದು ಹೇಳುತ್ತಿದ್ದರು, ಇದರಿಂದ ಸೈಬರ್‌ ಪೊಲೀಸ್‌ ಠಾಣೆಯ ಮೇಲೆ ಆಕ್ರಮಣ ಮಾಡುವ ಯಾವುದೇ ಕಾರಣ ಇರಲಿಕ್ಕಿಲ್ಲ. ರಸ್ತೆಯ ಮೇಲಿನಿಂದ ಓಡಾಡುವ ಬಸ್‌ಗಳಿಂದ ಜನರನ್ನು ಅವಮಾನಗೊಳಿಸುವುದು ಹಾಗೂ ಆ ಬಸ್‌ಗಳನ್ನು ಸುಡುವುದು, ಇದೂ ಕಾರಣ ಆಗಿರಲು ಸಾಧ್ಯವಿಲ್ಲ. ಏನಾದರೂ ಆಕ್ಷೇಪಾರ್ಹ ಹಾಗೂ ಪ್ರಕ್ಷೋಭಕ ವಾಗಿದ್ದರೆ, ಪೊಲೀಸ್‌ರಿಗೆ ತಿಳಿಸಬೇಕಿತ್ತು. ಇಷ್ಟು ಸ್ಥಳಗಳಲ್ಲಿ ನಡೆದಿರುವ ಭೀಕರ ಅಕ್ರಮಣಗಳು ಯೋಗ್ಯವಲ್ಲ. ಪೊಲೀಸ್‌ ಠಾಣೆಯ ಅವಶೇಷಗಳು ಹಾಗೂ ಅಲ್ಲಿ ಬಿದ್ದಿರುವ ಸುಟ್ಟಿರುವ ವಾಹನಗಳನ್ನು ನೋಡಿದರೆ ಎದೆಯಲ್ಲಿ ನಡುಕ ವುಂಟಾ ಗುತ್ತದೆ. ಸಾಮಾನ್ಯ ಚತುಷ್ಚಕ್ರ ವಾಹನಗಳ ಕೇವಲ ಕಬ್ಬಿಣದ ಹೊರತು ಇನ್ನೇನೂ ಉಳಿದಿಲ್ಲ. ಬಸ್‌ಗಳ ಅವಸ್ಥೆಯೂ ಹಾಗೆಯೇ ಇತ್ತು. ಈ ರೀತಿ ವಾಹನಗಳನ್ನು ಸುಡುವುದು ಇದು ಪೂರ್ಣ ತರಬೇತಿ ಪಡೆದವರ ಕೆಲಸವಾಗಿದೆ. ಕ್ಷಣಿಕ ಕೋಪ ಹಾಗೂ ಉದ್ರೇಕದಿಂದ ವಾಹನಗಳಿಗೆ ಅಲ್ಪಸ್ವಲ್ಪ ಹಾನಿಯಾಗಬಹುದು.

ಅವು ಕೆಲವೇ ನಿಮಿಷಗಳಲ್ಲಿ ಸುಟ್ಟು ಭಸ್ಮವಾಗಲು ಸಾಧ್ಯವಿಲ್ಲ. ಇದರಿಂದ ಮೊದಲೇ ಸಿದ್ಧತೆಯನ್ನು ಮಾಡಲಾಗಿತ್ತು, ತರಬೇತಿಯನ್ನು ನೀಡಲಾಗಿತ್ತು ಹಾಗೂ ಸಾಮಗ್ರಿಗಳನ್ನು ಸಂಗ್ರಹಿಸಲಾಗಿತ್ತು ಎಂಬುದು ಗಮನಕ್ಕೆ ಬರುತ್ತದೆ. ದಂಗೆ ಆಗಲೇ ಪ್ರಾರಂಭವಾಗಿದ್ದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಪೆಟ್ರೋಲ್‌ ಸಂಗ್ರಹಿಸಲು ಬರುವುದಿಲ್ಲ ಹಾಗೂ ಕೆಲವೇ ನಿಮಿಷಗಳಲ್ಲಿ ಮತ್ತು ಗಂಟೆಗಳಲ್ಲಿ ವಿತರಿಸಲೂ ಸಾಧ್ಯವಿಲ್ಲ. ಮಂದಿರದಿಂದ ಮುಂದೆ ನಿರ್ಜನ ಪ್ರದೇಶದಲ್ಲಿ ‘ಸಿಸಿಟಿವಿ‘ ಕೆಮೆರಾಗಳು ಇರಲಿಲ್ಲ. ಆದ್ದರಿಂದ ಆಕ್ರಮಣಕಾರಿಗಳು ಕಾಣಿಸುವುದಿಲ್ಲ. ಮುಂದಿನ ಕೆಲವು ಚಿತ್ರಸುರುಳಿಗಳಿವೆ. ಕೆಲವು ಕಟ್ಟಡಗಳನ್ನು ಬುಲ್ಡೋಝರ್‌ ಉಪಯೋಗಿಸಿ ಉರುಳಿಸಲಾಯಿತು. ಅವುಗಳಿಂದ ಕಲ್ಲು ಮತ್ತು ಇನ್ನಿತರ ವಸ್ತುಗಳನ್ನು ಎಸೆಯುತ್ತಿರುವುದು ಕಂಡುಬಂದಿತು. ಜನರು ಮನೆಯ ಛಾವಣಿಯಿಂದ ಕಲ್ಲು ತೂರಾಟ ಮಾಡುವುದನ್ನು ನೋಡಿದ್ದರು. ಈ ಗಲಭೆಯಲ್ಲಿ ಪೆಟ್ರೋಲ್‌ ಬಾಂಬ್‌ಗಳನ್ನು ಕೂಡ ಎಸೆಯಲಾಯಿತು. ಇಲ್ಲಿನ ಪೊಲೀಸ್‌ ಠಾಣೆಯಿಂದ ಕೆಲವೇ ಯಾರ್ಡ್ ಅಂತರದಲ್ಲಿದ್ದ ಸಹಾರಾ ಹೊಟೇಲ್‌ನಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಕಲ್ಲುಗಳು ಮತ್ತು ಇತರ ವಸ್ತುಗಳು ಸಿಕ್ಕಿವೆ. ಅರವಲಿಯ ಬೆಟ್ಟದಲ್ಲಿ ಕಲ್ಲುಗಳನ್ನು ಒಡೆಯಲಾಗುತ್ತದೆ. ಅವುಗಳನ್ನು ಸಾಗಿಸುವ ಡಂಪರ್‌ಗಳ ಸಂಖ್ಯೆ ಸಾಕಷ್ಟು ಇದೆ. ಆದ್ದರಿಂದ ಎಲ್ಲಿಯೂ ಕಲ್ಲುಗಳು ಕಾಣಿಸಿದರೆ, ಸಂಶಯ ಬರುವುದಿಲ್ಲ.

೬. ನೂಂಹದಲ್ಲಿನ ಭಾಜಪದ ನೇತಾರರ ‘ಆಯಿಲ್‌ ಮಿಲ್‌’ಗೆ ಬೆಂಕಿ

ನೂಂಹದಿಂದ ೨೦ ಕಿ.ಮೀ. ಅಂತರದಲ್ಲಿರುವ ಬಡಕಲಿಯ ಸ್ಥಿತಿಯೂ ಬಿಕ್ಕಟ್ಟಾಗಿತ್ತು. ಅಲ್ಲಿ ನೂಂಹ ಜಿಲ್ಲಾ ಭಾಜಪದ ಪದಾಧಿಕಾರಿಯ ‘ಅಯಿಲ್‌ ಮಿಲ್‌’ನ ಮೇಲೆ ಮಧ್ಯಾಹ್ನ ಆಕ್ರಮಣವಾಯಿತು. ಅದು ಸಂಪೂರ್ಣ ಸುಟ್ಟು ಭಸ್ಮವಾಗಿದೆ ಹಾಗೂ ಅಲ್ಲಿ ನಿಲ್ಲಿಸಿದ ಎರಡು ವಾಹನಗಳೂ ಬೆಂಕಿಗೆ ಆಹುತಿಯಾಗಿವೆ. ರಾತ್ರಿ ೧೨ ರ ನಂತರ ಪೊಲೀಸರು ಅಲ್ಲಿ ತಲುಪಿದರು, ಎಂದು ಜನರು ಹೇಳಿದರು. ಅಲ್ಲಿ ೨೦ ಅಂಗಡಿಗಳು ಸುಟ್ಟುಭಸ್ಮವಾಗಿದ್ದು ಅವು ಒಂದೇ ಸಮಾಜದ ಜನರದ್ದಾಗಿವೆ. ಯಾವಾಗ ಆಕ್ರಮಣವಾಗಬಹುದು ಎಂಬುದನ್ನು ಹೇಳಲು ಬರುವುದಿಲ್ಲ. ಆದ್ದರಿಂದ ಭಯದಿಂದ ಅಂಗಡಿಗಳ ರಕ್ಷಣೆಗಾಗಿ ರಾತ್ರಿ ಕಾವಲು ಇಡಬೇಕಾಗುತ್ತದೆ, ಎಂದು ಜನರು ಹೇಳಿದರು.

ಮುಖ್ಯ ವೃತ್ತದಲ್ಲಿ ಕೇಂದ್ರೀಯ ಸಶಸ್ತ್ರ ದಳದವರಿದ್ದಾರೆ; ಆದರೆ ಭದ್ರತೆಗಾಗಿ ಪೊಲೀಸರು ಇಲ್ಲ. ಇಷ್ಟು ದೂರವಿರುವ ಅಂಗಡಿಗಳನ್ನು ಏಕೆ ಗುರಿಪಡಿಸಲಾಯಿತು ?’, ಎಂಬುದು ಪ್ರಶ್ನೆಯಾಗಿದೆ. ಇಷ್ಟು ಭೀಕರ ಬೆಂಕಿಗಾಗಿ ಸಲಕರಣೆ ಮತ್ತು ಇಷ್ಟು ಜನರು ಅನಿರೀಕ್ಷಿತವಾಗಿ ಬರಲು ಸಾಧ್ಯವಿಲ್ಲ. ಒಂದು ಸಮಾಜದ ಅಂಗಡಿಗಳನ್ನು ಲೂಟಿಗೈದು ಸುಟ್ಟುಹಾಕಲಾಯಿತು.

೭. ಗಲಭೆಗೀಡಾದವರಿಗೆ ಪರಿಹಾರ ಸಿಗುವುದು ಆವಶ್ಯಕ !

ಪೊಲೀಸ್‌ರ ವೈಫಲ್ಯ ಬಹಿರಂಗವಾಗಿದೆ. ಮಧ್ಯಾಹ್ನ ೧೨ ಗಂಟೆಯ ನಂತರ ಸ್ವಲ್ಪ ಸಮಯದಲ್ಲಿಯೆ ಯಾತ್ರೆಯ ಮೇಲೆ ಆಕ್ರಮಣವಾಯಿತು. ಯಾತ್ರೆಯ ಜೊತೆಗಿದ್ದ ಬೆರಳಷ್ಟು ಪೊಲೀಸರು ತಮ್ಮ ಜೀವ ಉಳಿಸಲು ಪ್ರಯತ್ನಿಸಬೇಕಾಯಿತು. ಈ ಆಕ್ರಮಣದಿಂದಾಗಿ ಜನರಿಗೆ ಮಂದಿರದ ಕಡೆಗೆ ಓಡಬೇಕಾಯಿತು. ಸಂಜೆ ೫ ಗಂಟೆಯ ಸುಮಾರಿಗೆ ಪೊಲೀಸರು ಅಲ್ಲಿ ತಲುಪಿದರು. ಸಂಪೂರ್ಣ ನಗರ ಆಕ್ರಮಣಕಾರಿಗಳ ವಶದಲ್ಲಿತ್ತು. ಈ ಪರಿಸ್ಥಿತಿಯನ್ನು ಬದಲಾಯಿಸುವುದು ಆವಶ್ಯಕವಾಗಿದೆ. ಯಾರ ಮೇಲೆ ಆಕ್ರಮಣವಾಯಿತು, ಯಾರ ಅಂಗಡಿಗಳನ್ನು ಸುಡಲಾಯಿತು, ಅವರಿಗೆ ತಕ್ಷಣ ಸಂಪೂರ್ಣ ಪರಿಹಾರ ಸಿಗಬೇಕು. ಅವರಲ್ಲಿ ಸುರಕ್ಷತೆಯ ಭಾವನೆ ನಿರ್ಮಾಣವಾಗಬೇಕು. ಹಿಂಸಾಚಾರ ಮಾಡುವವರಿಗೆ ಮತ್ತು ಮಾಡಿಸುವವರಿಗೆ ಶಿಕ್ಷೆಯಾಗುವುದು, ಎಂದು ಅನಿಸಬೇಕು. ಇದೆಲ್ಲ ಹೊಣೆಗಾರಿಕೆ ಆಡಳಿತ ಮತ್ತು ಸರಕಾರದ್ದಾಗಿದೆ. ಜೊತೆಗೆ ರಾಜಕೀಯ, ಅರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಗುಂಪುಗಳು ಕೂಡ ಮುಂದೆ ಬರಬೇಕು.

– ಅವಧೇಶ ಕುಮಾರ

(ಆಧಾರ : ‘ವಿಶ್ವ ಸಂವಾದ ಕೇಂದ್ರ, ಭಾರತ’ದ ಜಾಲತಾಣ)