ಕಾಶ್ಮೀರದಲ್ಲಿ 30 ವರ್ಷಗಳಿಂದ ಪರಾರಿಯಾಗಿದ್ದ 8 ಭಯೋತ್ಪಾದಕರ ಬಂಧನ !

ಇಬ್ಬರು ಸರಕಾರಿ ನೌಕರಿಯಲ್ಲಿದ್ದರು !

ಶ್ರೀನಗರ (ಜಮ್ಮು-ಕಾಶ್ಮೀರ) – ಕಳೆದ 30 ವರ್ಷಗಳಿಂದ ಪರಾರಿಯಾಗಿದ್ದ 8 ಭಯೋತ್ಪಾದಕರನ್ನು ಪೊಲೀಸರು ಬಂಧಿಸಿದ್ದಾರೆ. ಆದಿಲ್ ಫಾರೂಕ್ ಫರಿದಿ, ಇಶ್ತಿಯಾಕ್ ಅಹ್ಮದ್, ಇಕ್ಬಾಲ್, ಮುಜಾಹಿದ್ ಹುಸೇನ್, ತಾರಿಕ್, ಎಜಾಜ್, ಜಮೀಲ್ ಮತ್ತು ಇಶ್ತಿಯಾಕ್. ಎಂದು ಗುರುತಿಸಲಾಗಿದೆ ಇವರೆಲ್ಲರೂ ರಾಜ್ಯದಲ್ಲಿ ಸಾಮಾನ್ಯ ನಾಗರಿಕರಂತೆ ವಾಸಿಸುತ್ತಿದ್ದರು. ಇವರಲ್ಲಿ 2 ಮಂದಿಗೆ ಸರಕಾರಿ ನೌಕರಿಯೂ ಸಿಕ್ಕಿದೆ. ಒಬ್ಬನು ಶಿಕ್ಷಣ ಇಲಾಖೆಯಲ್ಲಿ, ಇನ್ನೊಬ್ಬನು ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿದ್ದನು. ಈ ಎಲ್ಲಾ ಭಯೋತ್ಪಾದಕರ ಮೇಲೆ ಅಪಹರಣ, ಕೊಲೆ, ಕಾಶ್ಮೀರಿ ಹಿಂದೂಗಳು ಮತ್ತು ಭದ್ರತಾ ಪಡೆಗಳ ಮೇಲೆ ದಾಳಿ ಮಾಡಲು ಜನರನ್ನು ಪ್ರಚೋದಿಸಿರುವ ಆರೋಪವಿದೆ. ಅವರು ತಮ್ಮ ಕೃತ್ಯಗಳನ್ನು ಮಸೀದಿಗಳ ಸಹಾಯ ಪಡೆದು ಮಾಡಿದ್ದರು. (ಕಾಶ್ಮೀರದಲ್ಲಿ ಮಸೀದಿಗಳನ್ನು ಯಾವುದಕ್ಕೆ ಬಳಸಲಾಗುತ್ತಿತ್ತು ?, ಎನ್ನುವುದನ್ನು ಗಮನಿಸಬೇಕು ! ಈ ವಿಷಯದ ಬಗ್ಗೆ ಭಾರತದಲ್ಲಿರುವ ಒಬ್ಬನೇ ಒಬ್ಬ ಜಾತ್ಯತೀತರು, ಪ್ರಗತಿ(ಅಧೋಗತಿ)ಪರರು ಅಥವಾ ಮುಸಲ್ಮಾನ ರಾಜಕೀಯ ಪಕ್ಷ ಹಾಗೂ ನಾಯಕರು ಬಾಯಿ ತೆರೆಯುವುದಿಲ್ಲ ! – ಸಂಪಾದಕರು) ಪೊಲೀಸರಿಗೆ, ಇದೇ ರೀತಿ ಪರಾರಿಯಾಗಿರುವ ಇತರೆ ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದಲ್ಲಿಯೇ ವಾಸಿಸುತ್ತಿರುವ ಸಂಶಯವಿದೆ,

734 ಭಯೋತ್ಪಾದಕರು ಇನ್ನೂ ಪರಾರಿ !

ಜಮ್ಮು ಮತ್ತು ಕಾಶ್ಮೀರದಲ್ಲಿ ತನಿಖಾ ದಳದ 2 ತಂಡಗಳು ಪ್ರಸ್ತುತ ಪರಾರಿಯಾಗಿರುವ ಭಯೋತ್ಪಾದಕರ ಶೋಧ ನಡೆಸುತ್ತಿವೆ. ಪರಾರಿಯಾಗಿರುವ ಭಯೋತ್ಪಾದಕರ ಸಂಖ್ಯೆ 734 ರಷ್ಟಿದೆ. ಇದರಲ್ಲಿ ಕಾಶ್ಮೀರದಿಂದ 417 ಮತ್ತು ಜಮ್ಮುವಿನ 317 ಮಂದಿ ಸೇರಿದ್ದಾರೆ. ಈ ಪೈಕಿ 369 ಜನರನ್ನು ಗುರುತಿಸಲಾಗಿದ್ದು, 80 ಜನರು ಸಾವನ್ನಪ್ಪಿದ್ದಾರೆ. 45 ಮಂದಿ ಪಾಕಿಸ್ತಾನಕ್ಕೆ ಪಲಾಯನ ಮಾಡಿದ್ದಾರೆ. 127 ಜನರ ಮಾಹಿತಿ ಇದುವರೆಗೂ ಸಿಕ್ಕಿಲ್ಲ.

ಸಂಪಾದಕೀಯ ನಿಲುವು

ಪರಾರಿಯಾಗಿದ್ದ ಭಯೋತ್ಪಾದಕರಿಗೆ ಕೆಲಸ ಹೇಗೆ ಸಿಕ್ಕಿತು ? ಅವರಿಗೆ ಯಾರು ಸಹಾಯ ಮಾಡಿದರು? ಮುಂತಾದವುಗಳನ್ನು ಕಂಡು ಹಿಡಿದು ಸಂಬಂಧಪಟ್ಟವರ ವಿರುದ್ಧ ಕ್ರಮಕೈಗೊಳ್ಳುವುದು ಆವಶ್ಯಕವಾಗಿದೆ !

30 ವರ್ಷಗಳಿಂದ ಪರಾರಿಯಾಗಿರುವ ಭಯೋತ್ಪಾದಕರನ್ನು ಹಿಡಿಯಲು ಸಾಧ್ಯವಾಗದ ಪೊಲೀಸರ ಕಾರ್ಯಕ್ಷಮತೆ ಸ್ಪಷ್ಟವಾಗುತ್ತದೆ ! ಅಂತಹವರನ್ನು ಮನೆಯಲ್ಲಿ ಕೂರಿಸುವುದೇ ಸೂಕ್ತ !