AI ತಂತ್ರಜ್ಞಾನದ ಮೂಲಕ ಅಶ್ಲೀಲ ಫೋಟೊ ತೆಗೆದಿರುವ ಬಗ್ಗೆ ಇನ್ನೂ ೨೩ ಯುವತಿಯರ ಆರೋಪ !

  • ಯುವತಿಯ ಅಶ್ಲೀಲ ಫೋಟೊ ತೆಗೆದು ವೈರಲ್ ಮಾಡಿದ ಪ್ರಕರಣ

  • AI ತಂತ್ರಜ್ಞಾನದ ದುಷ್ಪರಿಣಾಮ ತಿಳಿಯಿರಿ !

ಪಾಲಘರ – AI ತಂತ್ರಜ್ಞಾನದ (ಆರ್ಟಿಫಿಶಿಯಲ್ ಇಂಟಿಲಿಜೆನ್ಸಿ) ಮೂಲಕ ನಮ್ಮ ಅಶ್ಲೀಲ ಫೋಟೊಗಳನ್ನು ತಯಾರಿಸಿದ್ದಾರೆ, ಎಂದು ಇನ್ನೂ ೨೩ ಯುವತಿಯರು ಮುಂದೆ ಬಂದು ಹೇಳಿದ್ದಾರೆ. ಅವರ ಅಶ್ಲೀಲ ಫೋಟೊಗಳನ್ನು ಅಶ್ಲೀಲ ವೆಬ್ ಸೈಟ್ ನಲ್ಲಿ ಪ್ರಸಾರವಾಗಿವೆ. ಈ ಪ್ರಕರಣದಲ್ಲಿ ಕೇಂದ್ರ ತನಿಖಾ ವಿಭಾಗದಿಂದ (ಸಿಬಿಐ) ಕುಲಂಕುಶವಾಗಿ ವಿಚಾರಣೆ ನಡೆಸಬೇಕೆಂದು ಆಗ್ರಹಿಸಲಾಗಿದೆ.

೧. ನಾಲಾಸೋಪರಾ ಪಶ್ಚಿಮ ಇಲ್ಲಿಯ ಕಳಂಬ ಗ್ರಾಮದಲ್ಲಿ ವಾಸಿಸುವ ಜೀತ ನಿಜಾಯಿ (ವಯಸ್ಸು ೧೯ ವರ್ಷ) ಈ ಯುವಕನು AI ತಂತ್ರಜ್ಞಾನದ ಮೂಲಕ ಯುವತಿಯರ ಅಶ್ಲೀಲ ಫೋಟೊಗಳನ್ನು ತಯಾರಿಸಿ ಅವುಗಳನ್ನು ‘ಇನ್ಸ್ತಗ್ರಾಂ’ ನಲ್ಲಿ ನಕಲಿ ಖಾತೆ ಹಾಗೂ ಅಶ್ಲೀಲ ವೆಬ್ ಸೈಟ್ ನಲ್ಲಿ ಪ್ರಸಾರ ಮಾಡಿದ್ದನು. ಈ ಪ್ರಕರಣದಲ್ಲಿ ಇಬ್ಬರೂ ಅಪ್ರಾಪ್ತ ಹುಡುಗಿಯರು ದೂರು ದಾಖಲಿಸಿದ ನಂತರ ಅರ್ಣಾಳ ಮರೈನ್ ಪೊಲೀಸರು ಜೀತ ನಿಜಾಯಿ ಮತ್ತು ಅವನ ಸಹೋದರ ಯಶ ನಿಜಾಯಿನನ್ನು ಬಂಧಿಸಿದ್ದಾರೆ. ಜೀತ ನಿಜಾಯಿ ಇವನ ಮೊಬೈಲ್ ನಲ್ಲಿ ೯ ಹುಡುಗಿಯರ ಅಶ್ಲೀಲ ಛಾಯಾಚಿತ್ರಗಳು ದೊರೆತಿವೆ.

೨. ಸಂತ್ರಸ್ತೇ ಯುವತಿಯು ಮರೈನ್ ಸೇನೆಯ ಸಹಾಯದಿಂದ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಯ ಬಳಿ ದೂರು ನೀಡಿದ್ದಾರೆ. ‘ಈ ಸಂತ್ರಸ್ತೇ ಯುವತಿಗೆ ಅಂತರರಾಷ್ಟ್ರೀಯ ನಂಬರ್ ನಿಂದ ಫೋನ್ ಗಳು ಬರುತ್ತಿರುವುದು ಒಂದು ಅಂತರಾಷ್ಟ್ರೀಯ ‘ಸೆಕ್ಸ್ ರಾಕೆಟ್’ ನ ಭಾಗವಾಗಿದೆ ಎಂದು ಮರೈನ್ ಸೇನೆಯ ಅಧ್ಯಕ್ಷ ಕೈಲಾಸ ಪಾಟೀಲ್ ಆರೋಪಿಸಿದ್ದಾರೆ.

೩. ಪೊಲೀಸರು ಆರೋಪಿಯ ಮೊಬೈಲ್ ಫಾರೆನ್ಸಿಕ ಲ್ಯಾಬ್ ಗೆ ಕಳುಹಿಸಿದ್ದಾರೆ. ಈ ಕುರಿತು ಆಗಸ್ಟ್ ೨೨ ರಂದು ದೂರು ದಾಖಲಿಸಲಾಗಿದೆ. ಆದ್ದರಿಂದ ‘ಪ್ರತಿಯೊಂದು ಹುಡುಗಿ ಪ್ರತ್ಯೇಕವಾಗಿ ದೂರು ದಾಖಲಿಸಲು ಬರುವುದಿಲ್ಲ. ನಾವು ಸಂಬಂಧಿತ ಸಂತ್ರಸ್ತ ಹುಡುಗಿಯರ ಹೇಳಿಕೆ ನಮುದಿಸಿಕೊಳ್ಳುತ್ತಿದ್ದೇವೆ’, ಎಂದು ಪೊಲೀಸರು ಮಾಹಿತಿ ನೀಡಿದರು.