ಠಾಣೆ, ಆಗಸ್ಟ್ 31 (ಸುದ್ದಿ.) – ಕಲ್ಯಾಣ ಸಮೀಪದ ಆಂಬಿವಲಿ ಪ್ರದೇಶದ ಇರಾನಿ ವಸಾಹತುವಿನಲ್ಲಿದ್ದ ಅಪರಾಧಿ ಫಿರೋಜ್ ಖಾನ್ (ವಯಸ್ಸು 62 ವರ್ಷಗಳು) ಇವನನ್ನು ಬಂಧಿಸಲು ಮುಂಬಯಿನ ಡಿ.ಎನ್. ನಗರ ಪೊಲೀಸ ಠಾಣೆಯ ಪೊಲೀಸರು ಹೋಗಿದ್ದರು. ಈ ವೇಳೆ ಆರೋಪಿಗಳ ಸಂಬಂಧಿಕರು ಪೊಲೀಸ ಪಡೆಯ ಮೇಲೆ ಕಲ್ಲು ತೂರಾಟ ನಡೆಸಿದರು. ಪೊಲೀಸರು ಹಾಗೂ ಆರೋಪಿಯ ಸಂಬಂಧಿಕರ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಪೊಲೀಸರು ಫಿರೋಜ್ ಖಾನ್ನನ್ನು ಬಂಧಿಸಿ ಕರೆದೊಯ್ದರು. ಫಿರೋಜ್ ವಿರುದ್ಧ ಮುಂಬಯಿ, ಠಾಣೆ ಮತ್ತು ನವಿ ಮುಂಬಯಿ ಪ್ರದೇಶದಲ್ಲಿ 35 ಪ್ರಕರಣಗಳು ದಾಖಲಾಗಿವೆ.
ಫಿರೋಜನು ಒಬ್ಬ ವ್ಯಕ್ತಿಗೆ 1 ಲಕ್ಷ ರೂಪಾಯಿ ವಂಚಿಸಿದ್ದನು. ಈ ಪ್ರಕರಣದಲ್ಲಿ ಅಂಧೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆಯಲ್ಲಿ ಫಿರೋಜ್ ಹಲವು ಅಪರಾಧಗಳನ್ನು ಮಾಡಿ ಪರಾರಿಯಾಗಿರುವುದು ಪತ್ತೆಯಾಗಿದೆ. ಆತ ಆಂಬಿವಲಿಯ ಇರಾನಿ ವಸತಿಯಲ್ಲಿ ಇರುವ ಮಾಹಿತಿ ಸಿಗುತ್ತಲೇ ಪೊಲೀಸರು ಆತನನ್ನು ಬಂಧಿಸಲು ಬಲೆ ಬೀಸಿದ್ದರು. ಪೊಲೀಸರ ಒಂದು ತಂಡ ವಸತಿಯ ಸುತ್ತ ಅಡಗಿ ಕುಳಿತಿತ್ತು. ಆತನನ್ನು ಹಿಡಿಯಲು ಯತ್ನಿಸುತ್ತಿದ್ದಾಗಲೇ ಮೇಲಿನ ಘಟನೆ ನಡೆದಿದೆ. ಈ ಎಲ್ಲಾ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಫಿರೋಜನನ್ನು ಬಂಧಿಸಿ ಮುಂಬಯಿಗೆ ಕರೆದೊಯ್ಯಲಾಗಿದೆ.
(ಸೌಜನ್ಯ: Express News)
ಸಂಪಾದಕೀಯ ನಿಲಿವು
|