‘ಜಿ-20’ ಶೃಂಗಸಭೆಯ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಅಲಂಕಾರ ಮಾಡುವಾಗ ಶಿವಲಿಂಗಕ್ಕೆ ಅವಮಾನ !

  • ಶಿವಲಿಂಗದ ಆಕಾರದಲ್ಲಿ ಕಾರಂಜಿ ನಿರ್ಮಾಣ !

  • ಭಾಜಪ ಮತ್ತು ಆಮ್ ಆದ್ಮಿ ಪಕ್ಷ ಇವರಿಂದ ಪರಸ್ಪರರ ಮೇಲೆ ಆರೋಪ !

ನವದೆಹಲಿ – ದೆಹಲಿಯಲ್ಲಿ ಸಪ್ಟೆಂಬರ್ ೯ ಮತ್ತು ೧೦ ರಂದು ಜಿ-20 ಪರಿಷತ್ತಿನ ಸಭೆ ನಡೆಯುವುದು. ಇದರ ಹಿನ್ನೆಲೆಯಲ್ಲಿ ನಗರವನ್ನು ಅಲಂಕರಿಸಲಾಗುತ್ತಿದೆ. ದೌಲಾ ಕುಂವಾ ಪ್ರದೇಶದಲ್ಲಿನ ಹನುಮಾನ ಚೌಕದಲ್ಲಿ ರಸ್ತೆಯ ಬದಿಗೆ ಕಾರಂಜಿಗಳು ನಿರ್ಮಿಸಲಾಗಿದೆ. ಎರಡು ಬದಿಗೆ ೬ ಕಾರಂಜಿಗಳು ನಿರ್ಮಿಸಿದ್ದಾರೆ. ಈ ಕಾರಂಜಿಗಳು ಶಿವಲಿಂಗದ ಆಕಾರದಲ್ಲಿದೆ. ಆದ್ದರಿಂದ ಟೀಕಿಸಲಾಗುತ್ತಿದೆ.

೧. ಭಾಜಪದ ನಾಯಕಿ ಚಾರು ಪ್ರಜ್ಷಾ ಇವರು ಟ್ವೀಟ್ ಮಾಡಿ, ಶಿವಲಿಂಗ ಅಲಂಕಾರಕ್ಕಾಗಿ ಅಲ್ಲ ಮತ್ತು ದೌಲಾ ಕುಂವಾ ಜ್ಞಾನವಾಪಿ ಅಲ್ಲ. ಆಮ್ ಆದ್ಮಿ ಪಕ್ಷದ ಸರಕಾರದಿಂದ ದೌಲಾ ಕುಂವಾದಲ್ಲಿ ಶಿವಲಿಂಗಆಕಾರದ ಕಾರಂಜಿ ನಿರ್ಮಿಸಿದ್ದಾರೆ ಎಂದು ಹೇಳಿದ್ದಾರೆ.

೨. ಇನ್ನೊಂದು ಕಡೆ ಆಮ್ ಆದ್ಮಿ ಪಕ್ಷವು ಇದಕ್ಕಾಗಿ ಭಾಜಪವೇ ಹೊಣೆ ಎಂದು ಹೇಳಿ ಶಿವಲಿಂಗದ ಅವಮಾನ ಮಾಡಿರುವ ಆರೋಪ ಮಾಡಿದೆ.

ಮೇಲೆ ಪ್ರಕಾಶಿಸಲಾದ ಚಿತ್ರ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ತರುವುದಾಗಿರದೇ ನಿಜ ಸ್ಥಿತಿ ತಿಳಿಸುವುದಾಗಿದೆ

 

ಸಂಪಾದಕೀಯ ನಿಲಿವು

ಇತರ ಧರ್ಮದವರ ಧರ್ಮ ಶ್ರದ್ಧೆಗೆ ಈ ರೀತಿ ಅವಮಾನಿಸುವ ಧೈರ್ಯ ತೋರಲು ಸಾಧ್ಯವಿಲ್ಲ; ಕಾರಣ ಅದರ ಪರಿಣಾಮ ಏನಾಗಬಹುದು ? ಇದು ತಿಳಿದಿದೆ. ಹಿಂದೂ ಸ್ವಂತ ಧರ್ಮದ ಬಗ್ಗೆ ನಿದ್ರಿಸುತ್ತಿರುವುದರಿಂದ ಇಂತಹ ಘಟನೆಗಳು ತಾವೆ ಮಾಡುತ್ತಾರೆ ಅಥವಾ ಯಾರಾದರೂ ಇಂತಹ ಕೃತ್ಯ ಮಾಡಿದರೆ ಅವರು ನಿಷ್ಕ್ರಿಯವಾಗಿ ಇರುತ್ತಾರೆ !