2008ರಲ್ಲಿ ನಡೆದ ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಮ್ಮದ್ ಅರ್ಷದ್ ಖಾನ್ ನ ಬಂಧನ

ಬೆಂಗಳೂರು – 2008ರಲ್ಲಿ ನಡೆದ ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣದ ಮತ್ತೊಬ್ಬ ಆರೋಪಿಯನ್ನು ಇತ್ತೀಚೆಗೆ ಬಂಧಿಸಲಾಗಿದೆ. ಭಯೋತ್ಪಾದಕ ಗುಂಪಿನ ಪ್ರಮುಖ ಸೂತ್ರಧಾರ ಪರಾರಿಯಾಗಿರುವ ಮುಖಂಡ ಮಹಮ್ಮದ್ ಜುನೈದ್ ನ ಸಹಚರ ಮಹಮ್ಮದ್ ಅರ್ಷದ್ ಖಾನ್ ನನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ. ಮಹಮ್ಮದ್ ಅರ್ಷದ್ ಬೆಂಗಳೂರಿನಲ್ಲಿ ಭಯೋತ್ಪಾದನೆ ಹರಡಲು ಉದ್ದೇಶಿಸಿದ್ದನು.

ಪರಾರಿಯಾಗಿರುವ ಭಯೋತ್ಪಾದಕ ಮಹಮ್ಮದ್ ಜುನೈದ್ ಬಗ್ಗೆ ಮಹಮ್ಮದ್ ಅರ್ಷದ್ ಖಾನ್ ಬಂಧನದಿಂದ ಮಹತ್ವದ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಖಾನ್ ವಿರುದ್ಧ ಕೊಲೆ, ಕಳ್ಳತನ ಮತ್ತು ಇತರ ಗಂಭೀರ ಅಪರಾಧಗಳು ಸೇರಿದಂತೆ 17 ಕ್ರಿಮಿನಲ್ ಕೇಸ್ ಗಳು ದಾಖಲಾಗಿವೆ. ಭಯೋತ್ಪಾದಕರ ಸಂಚಿನ ಹಿಂದಿನ ಮಾಸ್ಟರ್ ಮೈಂಡ್ (ಮುಖ್ಯ ಸೂತ್ರದಾರ) ಮಹಮ್ಮದ್ ಜುನೈದ್ ಸ್ಥಳೀಯ ಗುಂಪಿಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪೂರೈಸುತ್ತಿದ್ದನು. ಮಹಮ್ಮದ್ ಜುನೈದ್ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಸಂಚು ರೂಪಿಸಿದ್ದನು. ಅವನು ಅಫ್ಘಾನಿಸ್ತಾನದ ಗಡಿ ಪ್ರದೇಶದಿಂದ ಕಾರ್ಯನಿರ್ವಹಿಸುತ್ತಿದ್ದಾನೆ ಎಂದು ಸಂಶಯ ವ್ಯಕ್ತಪಡಿಸಲಾಗಿದೆ.

ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಈ ಭಯೋತ್ಪಾದಕ ಗುಂಪಿನ ಲಷ್ಕರ್-ಎ-ತೊಯಬಾದೊಂದಿಗೆ ಸಂಪರ್ಕ ಹೊಂದಿರುವುದು ಕಂಡು ಬಂದಿದೆ.