ಕರ್ಣಾವತಿ (ಗುಜರಾತ)ಇಲ್ಲಿ ಹಿಂದೂ ಯುವಕನ ಜೊತೆ ತಿರುಗಾಡುತ್ತಿದ್ದ ಮುಸ್ಲಿಂ ಯುವತಿಯನ್ನು ಮುಸ್ಲಿಮರಿಂದಲೇ ಥಳಿತ !

ಕರ್ಣಾವತಿ (ಗುಜರಾತ) – ಇಲ್ಲಿಯ ಓರ್ವ ಹಿಂದೂ ಯುವಕನ ಜೊತೆ ಮುಸಲ್ಮಾನ ಯುವತಿಯು ತಿರುಗಾಡುವಾಗ ಮುಸಲ್ಮಾನರ ಗುಂಪೊಂದು ಥಳಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಇದರಲ್ಲಿ ಹಿಂದೂ ಯುವಕನನ್ನೂ ಥಳಿಸಿದ್ದು ಕಂಡು ಬಂದಿದೆ. ಈ ಘಟನೆಯು ಕರ್ಣಾವತಿಯ ವಾಸನಾ ಪ್ರದೇಶದ ಚಿರಾಗ್ ಶಾಲೆಯ ಹತ್ತಿರ ನಡೆದಿದೆ. ಥಳಿಸಿದ ಮುಸಲ್ಮಾನರು ಯುವತಿಗೆ ವಿಚಾರಿಸುತ್ತಾ ಅವಳ ಬುರ್ಖಾ ತೆಗೆಯಲು ಪ್ರಯತ್ನಿಸಿದ್ದರು. ಹಾಗೆಯೇ ಈ ಯುವತಿಯ ವೀಡಿಯೋ ಮಾಡಿ ಅವಳ ಕುಟುಂಬದವರಿಗೆ ತೋರಿಸುವುದಾಗಿ ಹೇಳುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ.

ಸಂಪಾದಕರ ನಿಲುವು

* ಈ ವಿಷಯದಲ್ಲಿ ಪ್ರಗತಿ(ಅಧೋಗತಿ)ಪರರು, ಜಾತ್ಯತಿತ ಮತ್ತು ವ್ಯಕ್ತಿ ಸ್ವಾತಂತ್ರ್ಯದವರು ಇದರ ಬಗ್ಗೆ ಚಕಾರ ಎತ್ತುವುದಿಲ್ಲ, ಇದನ್ನು ಗಮನಿಸಿ !