ಗಣೇಶೋತ್ಸವ ಹತ್ತಿರ ಬರುತ್ತಿದ್ದಂತೆ ೧೩ ಸೇತುವೆಗಳು ಅಪಾಯಕಾರಿ ಎಂದು ಎಚ್ಚರಿಕೆ ನೀಡಿತು !

ತಡವಾಗಿ ಎಚ್ಚರಗೊಂಡ ಮುಂಬಯಿ ಮಹಾ ನಗರಪಾಲಿಕೆಯ ಸೇತುವೆ ವಿಭಾಗ !

ಮುಂಬಯಿ – ಗಣೇಶೋತ್ಸವ ಬರುತ್ತಿದ್ದಂತೆ ಮುಂಬಯಿಯಲ್ಲಿನ ವಿವಿಧ ಮೂರ್ತಿ ಶಾಲೆಗಳಿಂದ ಮೂರ್ತಿಗಳನ್ನು ಮೆರವಣಿಗೆಯ ಮೂಲಕ ಸಾರ್ವಜನಿಕ ಮಂಡಳಗಳಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಈ ಮೆರವಣಿಗೆಗಳು ಪ್ರಾರಂಭ ಆಗುವವರೆಗೆ ಅಪಾಯಕಾರಿ ಸೇತುವೆಗಳ ಬಗ್ಗೆ ಯಾವುದೇ ಮಾಹಿತಿ ನೀಡದಿರುವ ಮುಂಬಯಿ ಮಹಾನಗರ ಪಾಲಿಕೆಯ ಸೇತುವೆ ವಿಭಾಗವು ಮೆರವಣಿಗೆ ಮಾರ್ಗದಲ್ಲಿ ೧೩ ಸೇತುವೆಗಳು ಅಪಾಯಕಾರಿ ಇರುವದರ ಬಗ್ಗೆ ತಿಳಿಸಿದೆ. ಆದ್ದರಿಂದ ‘ಈ ಅಪಾಯಕಾರಿ ಸೇತುವೆಗಳ ಮೇಲೆ ಹೆಚ್ಚು ಸಮಯ ನಿಲ್ಲಬಾರದು. ಸೇತುವೆಯಿಂದ ಹೋಗುವಾಗ ಕಾಳಜಿ ವಹಿಸಬೇಕು ಎಂದು ಮೇಲೆ ಮೇಲಿನ ಸೂಚನೆ ಸೇತುವೆ ವಿಭಾಗದಿಂದ ನೀಡಲಾಗಿದೆ.

೧. ಈ ಸೇತುವೆಯಲ್ಲಿ ಮಹಾಲಕ್ಷ್ಮಿ ಸ್ಟೀಲ್ ರೈಲ್ವೆ ಓವರ್ ಬ್ರಿಜ್, ಕರೋಲ್ ರೆಲ್ ಓವರ್ ಬ್ರಿಜ್ (ಪ್ರಭಾದೇವಿ), ತಿಲಕ ರೈಲ್ವೆ ಓವರ್ ಬ್ರಿಜ್ (ದಾದರ್), ಕರಿ ರೋಡ್ ರೈಲ್ವೆ ಓವರ್ ಬ್ರಿಜ್, ಮರಿನ್ ಲೈನ್ಸ್ ರೈಲ್ವೇ ಓವರ್ ಬ್ರಿಜ್, ಸ್ಯಾಂಡಹರ್ಟ್ ರೋಡ್ ರೈಲ್ವೆ ಓವರ್ ಬ್ರಿಜ್, ಫ್ರೆಂಚ್ ರೈಲ್ ಓವರ್ ಬ್ರಿಜ್, ಕೆನಡಿ ರೈಲ್ವೆ ಸೇತುವೆ, ಪೋಕ್ಲ್ಯಾಂಡ್ ರೈಲ್ವೆ ಓವರ್ ಬ್ರಿಜ್, ಬೆಲಾಸಿಸ್ ಮುಂಬಯಿ ಸೆಂಟ್ರಲ್ ಹತ್ತಿರದ ಬ್ರಿಜ್ ಮತ್ತು ಘಾಟಕೋಪರ ರೈಲ್ವೆ ಓಹಾರ್ ಬ್ರಿಜ್ ಈ ಸೇತುವೆಗಳ ಸಮಾವೇಶವಿದೆ. ಇದರಲ್ಲಿ ರೈಲ್ವೆ ಮಾರ್ಗಗಳ ಮೇಲಿನ ಸೇತುವೆಗಳ ಸಮಾವೇಶದ ಸಂಖ್ಯೆ ಹೆಚ್ಚಾಗಿದೆ.

೨. ಕರಿ ರೋಡ್ ರೈಲು ನಿಲ್ದಾಣ, ಚಿಂಚಪೋಕಳಿ ರೈಲು ನಿಲ್ದಾಣ ಮತ್ತು ಮಂಡಲಿಕ ಸೇತುವೆ ಮೇಲಿಂದ ಒಂದೇ ಬಾರಿಗೆ ೧೬ ಟನ್ ಗಿಂತ ಹೆಚ್ಚಿನ ಭಾರ ತಡೆಯಲಾಗದು. ಇದರ ಕಾಳಜಿ ವಹಿಸಲು ಸೇತುವೆ ವಿಭಾಗದಿಂದ ಕರೆ ನೀಡಿದೆ.

ಸಂಪಾದಕೀಯ ನಿಲುವು

ಕೇವಲ ನಾಗರೀಕರಿಗೆ ಕಾಳಜಿ ವಹಿಸಲು ಹೇಳುವುದರಿಂದ ಸರಕಾರದ ಜವಾಬ್ದಾರಿ ಮುಗಿಯುವುದಿಲ್ಲ. ‘ಗಣೇಶೋತ್ಸವದ ಮೊದಲು ಅಪಾಯಕಾರಿ ಸೇತುವೆಗಳ ಕಾಮಗಾರಿ ಏಕೆ ಮುಗಿಯಲಿಲ್ಲ ?’, ‘ಈ ಸೇತುವೆಗಳ ಮೇಲೆ ಯಾವುದಾದರೂ ಅಪಘಾತ ನಡೆದರೆ ಅದಕ್ಕೆ ಹೊಣೆ ಯಾರು ?’, ಇದು ಕೂಡ ಸರಕಾರ ನಿಶ್ಚಯಿಸಬೇಕು ಹಾಗೂ ಈ ಸೇತುವೆಯಿಂದ ಯಾವುದೇ ಅಪಘಾತ ನಡೆಯಬಾರದೆಂದು ಅವಶ್ಯಕವಾಗಿರುವ ಉಪಾಯ ಯೋಜನೆಗೆ ಸರಕಾರದಿಂದ ಪ್ರಾಧಾನ್ಯತೆಯ ಮೇರೆಗೆ ಮಾಡುವುದು ಅವಶ್ಯಕವಾಗಿದೆ !