ಮಣಿಪುರದಲ್ಲಿನ ಶೇಕಡ ೩೦ ರಷ್ಟು ಇರುವ ಕ್ರೈಸ್ತ ಧರ್ಮದ ಕುಕಿ ಜನಾಂಗದಿಂದ ಸ್ವತಂತ್ರ ರಾಜ್ಯದ ಬೇಡಿಕೆ !

ಇಂಪಾಲಾ (ಮಣಿಪುರ) – ಮಣಿಪುರದಲ್ಲಿ ಕಳೆದ ೪ ತಿಂಗಳಿಂದ ಹಿಂಸಾಚಾರ ನಡೆಯುತ್ತಿದೆ. ಸಂಸತ್ತಿನಲ್ಲಿ ಕೂಡ ಇದರಿಂದ ರಂಪಾರಾಧಾಂತ ನಡೆಯಿತು. ಈಗ ಮಣಿಪುರದ ವಿಭಜನೆ ಮಾಡಿ ಬೇರೆ ‘ಕುಕಿಲ್ಯಾಂಡ್’ ರಾಜ್ಯ ಸ್ಥಾಪನೆ ಮಾಡಲು ಕ್ರೈಸ್ತ ಧರ್ಮದ ಕುಕಿ ಜನಾಂಗದಿಂದ ಒತ್ತಾಯಿಸುತ್ತಿದೆ. ‘ಮೈತೆಯಿ ಜನಾಂಗದ ಜೊತೆಗೆ ವಾಸಿಸುವುದು ನಮಗೆ ಮೃತ್ಯುವಿನ ಸಮಾನವಾಗಿದೆ’, ಎಂದು ಕುಕಿ ಜನಾಂಗದ ಅಭಿಪ್ರಾಯವಾಗಿದೆ. ಮೈತೆಯಿ ಜನಾಂಗವು ಹಿಂದುಗಳಾಗಿದ್ದಾರೆ. ಮಣಿಪುರದ ಒಟ್ಟು ಜನಸಂಖ್ಯೆ ೨೮ ಲಕ್ಷ ೫೦ ಸಾವಿರವಾಗಿದೆ. ಅದರಲ್ಲಿ ಶೇಕಡ ೩೦ ರಷ್ಟು ಕುಕಿ ಜನರಿದ್ದಾರೆ.

೧. ೧೯೭೨ ರಲ್ಲಿ ಮಣಿಪುರ ಪೂರ್ಣರಾಜ್ಯ ಆದ ನಂತರ ೧೯೮೦ ರಲ್ಲಿ ಸ್ವತಂತ್ರ ಕುಕಿ ಲ್ಯಾಂಡಿನ ಬೇಡಿಕೆ ಮಾಡಲಾಗಿತ್ತು. ಆ ಸಮಯದಲ್ಲಿ ಕುಕಿ ಮತ್ತು ಝೋಮಿ ಬಂಡಾಯದ ಮೊದಲು ಮತ್ತು ಎಲ್ಲಕ್ಕಿಂತ ದೊಡ್ಡ ಸಂಘಟನೆ ‘ಕುಕಿ ನ್ಯಾಷನಲ್ ಆರ್ಗನೈಸೇಷನ್’ ನ ಸ್ಥಾಪನೆ ಮಾಡಲಾಯಿತು.

೨. ೨೦೧೨ ರಲ್ಲಿ ‘ತೆಲಂಗಾಣ’ ರಾಜ್ಯದ ಬೇಡಿಕೆ ಮಾನ್ಯವಾಗುತ್ತಿದೆ, ಇದು ತಿಳಿದ ನಂತರ ‘ಕುಕಿ ರಾಜ್ಯ ಬೇಡಿಕೆ ಸಮಿತಿ’ ಈ ಸಂಘಟನೆಯಿಂದ ‘ಕುಕಿ ಲ್ಯಾಂಡ್’ಗಾಗಿ ಪ್ರತಿಭಟನೆ ಮಾಡುವ ಘೋಷಣೆ ಮಾಡಲಾಯಿತು. ಅಂದಿನಿಂದ ಈ ಸಂಘಟನೆ ಸಮಯ ಸಮಯದಲ್ಲಿ ಮುಷ್ಕರ ಮತ್ತು ಬಂದ್ ಕರೆ ನೀಡಿ ಮಣಿಪುರದಲ್ಲಿ ಸರಕುಸಾಗಾಣಿಕೆ ತಡೆಯುವ ಕೆಲಸ ಮಾಡುತ್ತದೆ.

೩. ಮಣಿಪುರ್ ೨೨ ಸಾವಿರದ ೩೨೭ ಸ್ಕ್ವೇರ್ ಕಿಲೋಮೀಟರ್ ಕ್ಷೇತ್ರ ಹೊಂದಿದೆ. ಇದರಲ್ಲಿ ಶೇಕಡ ೬೦ ಕ್ಕಿಂತಲೂ ಹೆಚ್ಚಿನ ಎಂದರೆ ೧೨ ಸಾವಿರದ ೯೫೮ ಸ್ಕ್ವಯರ್ ಕಿಲೋಮೀಟರ್ ಕ್ಷೇತ್ರದಲ್ಲಿ ಕುಕಿ ಲ್ಯಾಂಡ್ ರೂಪಿಸುವ ಬೇಡಿಕೆ ಈ ಸಂಘಟನೆ ಮಾಡುತ್ತಿದೆ.