ಶಿಕ್ಷಕಿಯ ಹೇಳಿಕೆ ಮೇರೆಗೆ ಮುಸಲ್ಮಾನ ವಿದ್ಯಾರ್ಥಿಗೆ ಇತರ ವಿದ್ಯಾರ್ಥಿಗಳು ಹೊಡೆದಿರುವ ಶಾಲೆ ಮುಚ್ಚಲಾಗಿದೆ !

ಉತ್ತರ ಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಈ ರೀತಿಯ ಕ್ರಮ ಕೈಗೊಳ್ಳುವುದು ಹಿಂದುಗಳಿಗೆ ಅಪೇಕ್ಷಿತವಾಗಿರಲಿಲ್ಲ !

ಮುಜಫರನಗರ (ಉತ್ತರಪ್ರದೇಶ) – ಇಲ್ಲಿಯ ನೇಹಾ ಪಬ್ಲಿಕ್ ಸ್ಕೂಲನಲ್ಲಿ ಅಂಗವಿಕಲ ಶಿಕ್ಷಕಿಯು ಒಬ್ಬ ಮುಸಲ್ಮಾನ ವಿದ್ಯಾರ್ಥಿಗೆ ಹೋಮ್ ವರ್ಕ್ ಮಾಡದೇ ಇದ್ದದಿದ್ದಕ್ಕೆ ಇತರ ವಿದ್ಯಾರ್ಥಿಗಳಿಂದ ಹೊಡೆಸಿ ಶಿಸ್ತು ಕಲಿಸುವ ಪ್ರಯತ್ನ ಮಾಡಿದ್ದರು. ಈ ಘಟನೆಯ ವಿಡಿಯೋ ಪ್ರಸಾರವಾದ ನಂತರ ದೇಶಾದ್ಯಂತ ಟೀಕೆಗಳು ಆರಂಭವಾದ ನಂತರ ಈಗ ಪ್ರಾರ್ಥಮಿಕ ಶಿಕ್ಷಣಾಧಿಕಾರಿಗಳು ಈ ಶಾಲೆಯನ್ನು ಮುಚ್ಚಿಸಿದೆ. ಶಿಕ್ಷಕಿ ತೃಪ್ತ ತ್ಯಾಗಿ ಇವರ ಒಡೆತನದ ಖಾಸಗಿ ಶಾಲೆ ಆಗಿದೆ. ಇದರ ಬಗ್ಗೆ ಶಿಕ್ಷಣ ಅಧಿಕಾರಿ, ಈ ಶಾಲೆಯಿಂದ ಶಿಕ್ಷಣ ಇಲಾಖೆಯ ಮಾನದಂಡ ಪೂರ್ಣ ಮಾಡದೇ ಇರುವುದರಿಂದ ಅನುಮತಿ ರದ್ಧ ಪಡಿಸಿರುವ ನೋಟಿಸ್ ಕಳುಹಿಸಲಾಗಿದೆ. ಶಾಲೆಯಲ್ಲಿನ ಒಟ್ಟು ೫೦ ವಿದ್ಯಾರ್ಥಿಗಳನ್ನು ಒಂದು ವಾರದಲ್ಲಿಯೆ ಸರಕಾರಿ ಶಾಲೆಯಲ್ಲಿ ಅಥವಾ ಇತರ ಶಾಲೆಗಳಲ್ಲಿ ಸೇರಿಸಿಕೊಳ್ಳಲಾಗುವುದು ಎಂದು ಹೇಳಿದೆ.

ಸಂಪಾದಕೀಯ ನಿಲುವು

ಜಮ್ಮು ಕಾಶ್ಮೀರದಲ್ಲಿನ ಕಠುವಾ ಇಲ್ಲಿ ಫಲಕದ ಮೇಲೆ ‘ಜೈ ಶ್ರೀರಾಮ’ ಬರೆದಿರುವುದರಿಂದ ಮುಸಲ್ಮಾನ ಶಿಕ್ಷಕನು ಹಿಂದೂ ವಿದ್ಯಾರ್ಥಿಗೆ ಅಮಾನವೀಯವಾಗಿ ಥಳಿಸಿರುವುದರಿಂದ ವಿದ್ಯಾರ್ಥಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಬೇಕಾಯಿತು. ಕಾಶ್ಮೀರದಲ್ಲಿಯ ಸರಕಾರ ಮಾತ್ರ ಈ ಶಾಲೆಯ ಮೇಲೆ ನಿಷೇಧ ಹೇರಲಿಲ್ಲ, ಇದು ವಿಪರ್ಯಾಸ ಅಲ್ಲವೇ ?