ಹಿಂದೂ ಮಹಾಸಭೆಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜರ ಬೇಡಿಕೆ
ನವ ದೆಹಲಿ – ಭಾರತದ ಚಂದ್ರಯಾನ-3 ಚಂದ್ರನ ಮೇಲೆ ಇಳಿದ ನಂತರ ಈಗ ಹಿಂದೂ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜರು ಚಂದ್ರನನ್ನು ‘ಹಿಂದೂ ಸನಾತನ ರಾಷ್ಟ್ರ’ ಎಂದು ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ.
1. ಸ್ವಾಮಿ ಚಕ್ರಪಾಣಿ ಮಹಾರಾಜ್ ಅವರು ಟ್ವೀಟ್ ಮಾಡಿ, ‘ಚಂದ್ರಯಾನ-3 ಇಳಿದ ಸ್ಥಳಕ್ಕೆ ‘ಶಿವಶಕ್ತಿ ಪಾಯಿಂಟ್’ ಎಂದು ಹೆಸರಿಡಲಾಗಿದೆ. ಯಾವುದೇ ಜಿಹಾದಿ ಮನೋಭಾವದ ವ್ಯಕ್ತಿ ಅಲ್ಲಿಗೆ ಹೋಗಿ ‘ಗಝವಾ-ಎ-ಹಿಂದ್’ (ಮುಸ್ಲಿಂ ರಾಷ್ಟ್ರಕ್ಕಾಗಿ ಹೋರಾಡುವುದು), ಜಿಹಾದ್ ಮಾಡಿ ಅಲ್ಲಿ ಮೊದಲು ಭಯೋತ್ಪಾದನೆಯನ್ನು ಹರಡಬಹುದು, ಅದಕ್ಕಿಂತ ಮೊದಲು ಸಂಸತ್ತಿನಲ್ಲಿ ಚಂದ್ರನನ್ನು ‘ಹಿಂದೂ ಸನಾತನ ರಾಷ್ಟ್ರ’ ಎಂದು ಘೋಷಿಸುವ ನಿರ್ಣಯವನ್ನು ಅಂಗೀಕರಿಸಬೇಕು ಮತ್ತು ‘ಶಿವ ಶಕ್ತಿ ಪಾಯಿಂಟ್’ ಅನ್ನು ಚಂದ್ರನ ರಾಜಧಾನಿಯನ್ನಾಗಿ ಮಾಡಬೇಕು ಎಂದು ಹೇಳಿದ್ದಾರೆ.
2. ಸ್ವಾಮಿ ಚಕ್ರಮಣಿ ಮಹಾರಾಜರು ಮಾತು ಮುಂದುವರಿಸಿ, ರಾಜಧಾನಿ ‘ಶಿವ ಶಕ್ತಿ ಪಾಯಿಂಟ್’ ಆಗಿರಬೇಕು ಏಕೆಂದರೆ ಶಿವನ ತಲೆಯ ಮೇಲೆ ಚಂದ್ರನಿದ್ದಾನೆ. ಹಿಂದೂಗಳು ಚಂದ್ರನೊಂದಿಗೆ ಪ್ರಾಚೀನ ಸಂಬಂಧವನ್ನು ಹೊಂದಿದ್ದಾರೆ. ನಮ್ಮ ಧರ್ಮಗ್ರಂಥಗಳಲ್ಲಿ ಚಂದ್ರನನ್ನು ಅನೇಕ ರೀತಿಯಲ್ಲಿ ಉಲ್ಲೇಖಿಸಿದ್ದಾರೆ. ಚಂದ್ರನ ಪಾವಿತ್ರ್ಯವನ್ನು ರಕ್ಷಿಸಲು ಅದನ್ನು ಹಿಂದೂ ಸನಾತನ ರಾಷ್ಟ್ರ ಎಂದು ಘೋಷಿಸಬೇಕು ಎಂದು ಹೇಳಿದರು.
(ಸೌಜನ್ಯ : Hindustan Times)