ದಾಳಿಕೋರರಲ್ಲಿ ಗಡೀಪಾರು ಶಿಕ್ಷೆ ಅನುಭವಿಸುತ್ತಿರುವ ಮತಾಂಧರ ಸಹಭಾಗ
ಶ್ರೀಗೊಂದಾ (ಜಿಲ್ಲೆ ಅಹಲ್ಯಾನಗರ) – ಕರ್ಜತನ ಒಂದು ತಗಡಿನ ಶೆಡ್ ನಲ್ಲಿ ಕೆಲವು ಗೋವುಗಳನ್ನು ಹತ್ಯೆ ಮಾಡಲು ಕೂಡಿ ಹಾಕಿರುವ ಮಾಹಿತಿ ಶ್ರೀಗೊಂದಾ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ಶಿವರಾಮ ಮಸ್ಕೆ ಅವರಿಗೆ ಸಿಕ್ಕಿತ್ತು. ಆ ಮಾಹಿತಿಯನ್ನು ದೃಢಪಡಿಸಿಕೊಳ್ಳಲು ಆಗಸ್ಟ್ 26 ರಂದು ಮಸ್ಕೆ ಆ ಸ್ಥಳಕ್ಕೆ ಹೋಗಿದ್ದರು. ಈ ವೇಳೆ ನದೀಮ್ ಖುರೇಷಿ, ಓಂಕಾರ ಸಾಯಕರ, ಸಮದ ಕುರೇಷಿ ಮತ್ತು ಜಿಲ್ಲೆಯಿಂದ ಗಡಿಪಾರು ಮಾಡಿದ್ದ ಅತೀಕ್ ಖುರೇಷಿಯು ತಮ್ಮ ಕಾರಿನ ಮೂಲಕ ಮಸ್ಕೆ ಮತ್ತು ಸಾಕ್ಷಿದಾರರ ಮೇಲೆ ಹಾಯಿಸಿ ಕೊಲ್ಲಲು ಪ್ರಯತ್ನಿಸಿದರು. ಅವರನ್ನು ತಳ್ಳಿ ನಿಂದಿಸಿ. ಬೆದರಿಕೆ ಹಾಕಿದರು ಹಾಗೆಯೇ ಸರಕಾರಿ ವಾಹನಕ್ಕೆ ಡಿಕ್ಕಿ ಹೊಡೆದು ವಾಹನವನ್ನು ಹಾನಿ ಮಾಡಿದರು. ದೂರುದಾರರು ಮತ್ತು ಸಾಕ್ಷಿದಾರರು ಮಾಡುತ್ತಿದ್ದ ಸರಕಾರಿ ಕೆಲಸಕ್ಕೆ ಅಡ್ಡಿಪಡಿಸಿದರು. ಈ ಪ್ರಕರಣದ ಕುರಿತು ಶಿವರಾಮ ಮಸ್ಕೆ ದೂರು ದಾಖಲಿಸಿದ್ದಾರೆ.
ಈ ವೇಳೆ ಪೊಲೀಸರಿಗೆ ಆ ಸ್ಥಳದಲ್ಲಿ 12 ಕರುಗಳು, 3 ಹಸುಗಳು, 1 ಸಾಹಿವಾಲ್ ಜಾತಿಯ ಹಸು ಇತ್ಯಾದಿಗಳನ್ನು ಬರ್ಬರವಾಗಿ ಕೊಲ್ಲಲು ಕೂಡಿ ಇಟ್ಟಿದ್ದರು. ಅತೀಕ ಖುರೇಷಿಯನ್ನು ಪೊಲೀಸ ಅಧೀಕ್ಷಕರು ಜಿಲ್ಲೆಯಿಂದ ಗಡೀಪಾರು ಮಾಡಿದ್ದರು. ಹೀಗಿರುವಾಗಲೂ ಅವನು ಜಿಲ್ಲೆಯಲ್ಲಿ ಅಕ್ರಮವಾಗಿ ತಿರುಗಾಡುತ್ತಿದ್ದನು. ಪೊಲೀಸರನ್ನು ನೋಡಿ ಅವನು ಓಡಿ ಹೋದನು.
ಸಂಪಾದಕರ ನಿಲುವು* ಉದ್ಧಟ ಮತಾಂಧರು | ಗೋರಕ್ಷಕರ ಮೇಲೆ ಹಲ್ಲೆ ನಡೆಸುವ ಮತಾಂಧ ಗೋಕಳ್ಳಸಾಗಾಣಿಕೆದಾರರು ಇದೀಗ ಪೊಲೀಸರ ಮೇಲೂ ದಾಳಿ ಮಾಡುವ ಮಟ್ಟಕ್ಕೆ ಹೋಗಿರುವುದು ಗಂಭೀರ ಹಾಗೂ ಚಿಂತಾಜನಕ ಸಂಗತಿಯಾಗಿದೆ ! * ಪೊಲೀಸರು ಈಗಲಾದರೂ ಮತಾಂಧರನ್ನು ಹತ್ತಿಕ್ಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಪೊಲೀಸರ ಅಸ್ತಿತ್ವ ಅಪಾಯಕ್ಕೆ ಸಿಲುಕಬಹುದು ! * ಸಕಾಲದಲ್ಲಿ ಗೋಹತ್ಯೆ ನಿಷೇಧ ಕಾನೂನಿನ ಬಗ್ಗೆ ಕಠಿಣ ಕ್ರಮ ಕೈಗೊಳ್ಳದ ಪರಿಣಾಮ ! |