ದೆಹಲಿಯ 8 ಮೆಟ್ರೋ ನಿಲ್ದಾಣಗಳಲ್ಲಿ ಖಲಿಸ್ತಾನಿವಾದಿಗಳು ಭಾರತ ವಿರೋಧಿ ಘೋಷಣೆಗಳ ಬರಹ !

‘ಸಿಖ್ ಫಾರ್ ಜಸ್ಟಿಸ್’ ಖಲಿಸ್ತಾನಿ ಸಂಘಟನೆಯ ಕೈವಾಡ !

ನವ ದೆಹಲಿ – ಖಲಿಸ್ತಾನ್ ಬೆಂಬಲಿಗರು ದೆಹಲಿಯ 8 ಮೆಟ್ರೋ ನಿಲ್ದಾಣಗಳಲ್ಲಿ ‘ದೆಹಲಿ ಬನೇಗಾ ಖಲಿಸ್ತಾನ್’, ‘ಖಲಿಸ್ತಾನ್ ಜಿಂದಾಬಾದ್’ ಮತ್ತು ‘ಪಂಜಾಬ್ ಈಸ್ ನಾಟ್ ಇಂಡಿಯಾ’ (ಪಂಜಾಬ್ ಭಾರತವಲ್ಲ) ಎಂಬ ಘೋಷಣೆಗಳನ್ನು ಆಗಸ್ಟ್ 27 ರಂದು ಬರೆದಿದ್ದಾರೆ. ತದ ನಂತರ ಪೊಲೀಸರು ಈ ಬರಹಗಳನ್ನು ಅಳಿಸಿದ್ದಾರೆ. ದೆಹಲಿಯಲ್ಲಿ ಮುಂದಿನ ತಿಂಗಳು ನಡೆಯಲಿರುವ ‘ಜಿ- 20’ ಶೃಂಗಸಭೆಗೆ ಮುನ್ನ ಭಾರತ ವಿರೋಧಿ ವಾತಾವರಣವನ್ನು ಸೃಷ್ಟಿಸುವ ಉದ್ದೇಶದಿಂದ ನಿಷೇಧಿತ ಖಲಿಸ್ತಾನಿ ಸಂಘಟನೆ ‘ಸಿಖ್ ಫಾರ್ ಜಸ್ಟಿಸ್’ ಈ ಘೋಷಣೆಗಳನ್ನು ಬರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಈ ಸಂಬಂಧ ದೂರು ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳ ಮೂಲಕ ತನಿಖೆ ನಡೆಸುತ್ತಿದ್ದಾರೆ.

ಖಲಿಸ್ತಾನ್ ಬೆಂಬಲಿಗರು ಶಿವಾಜಿ ಪಾರ್ಕ್, ಮಾದಿಪುರ, ಪಶ್ಚಿಮ ವಿಹಾರ್, ಇಂಡಸ್ಟ್ರಿ ಸಿಟಿ, ಮಹಾರಾಜ ಸೂರಜಮಲ್ ಸ್ಟೇಡಿಯಂ, ಸರಕಾರಿ ಸರ್ವೋದಯ ಬಾಲ ವಿದ್ಯಾಲಯ ನಾಂಗಲೋಯಿ, ಪಂಜಾಬಿ ಬಾಗ ಮತ್ತು ನಾಂಗಲೋಯಿ ಈ ಮೆಟ್ರೋ ನಿಲ್ದಾಣಗಳಲ್ಲಿ ಬರಹಗಳನ್ನು ಬರೆದಿದ್ದಾರೆ. ಘಟನೆಯ ಬಳಿಕ, ‘ಸಿಖ್ಸ್ ಫಾರ್ ಜಸ್ಟಿಸ್’ ನ ಪರಾರಿಯಾಗಿರುವ ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ್ ಸಿಂಗ್ ಪನ್ನು ಒಂದು ವಿಡಿಯೊ ಪ್ರಸಾರ ಮಾಡಿ ಅದರಲ್ಲಿ, ಆ ಮೆಟ್ರೋ ನಿಲ್ದಾಣಗಳ ಗೋಡೆಗಳ ಮೇಲೆ ಈ ಘೋಷಣೆಗಳನ್ನು ಬರೆದಿರುವ ಬರಹಗಳು ಕಾಣಿಸುತ್ತಿದೆ.

ಸಂಪಾದಕೀಯ ನಿಲುವು

ಖಲಿಸ್ತಾನಿ ಸಂಘಟನೆಯನ್ನು ನಿಷೇಧಿಸಿದ ನಂತರವೂ ಈ ಸಂಘಟನೆಯು ಈ ರೀತಿ ಚಟುವಟಿಕೆಗಳನ್ನು ಮಾಡುತ್ತಾ ದೇಶ-ವಿದೇಶಗಳಲ್ಲಿ ಭಾರತ ವಿರೋಧಿ ವಾತಾವರಣ ಸೃಷ್ಟಿಸುತ್ತಿದೆ. ಭದ್ರತಾ ಪಡೆಗಳು ಇಂತಹ ಸಂಘಟನೆಗಳನ್ನು ಬೇರು ಸಮೇತ ಕಿತ್ತೊಗೆದು ಅವುಗಳ ಅಸ್ತಿತ್ವವನ್ನು ನಾಶಗೊಳಿಸಬೇಕಾಗಿದೆ ! ಹೀಗೇಕೆ ಆಗುತ್ತಿಲ್ಲ ?, ಇದನ್ನು ಸರಕಾರ ಯೋಚಿಸುವ ಆವಶ್ಯಕತೆಯಿದೆ !