ಚಂದ್ರ, ಮಂಗಳ ಮತ್ತು ಶುಕ್ರ ಈ ಗ್ರಹಗಳವರೆಗೆ ಹೋಗುವ ಕ್ಷಮತೆ: ಆದರೆ ಆತ್ಮವಿಶ್ವಾಸ ಹೆಚ್ಚಿಸುವುದು ಆವಶ್ಯಕ ! – ಇಸ್ರೋದ ಮುಖ್ಯಸ್ಥ ಶ್ರೀಧರ ಸೋಮನಾಥ

ಇಸ್ರೋದ ಮುಖ್ಯಸ್ಥ ಶ್ರೀಧರ ಸೋಮನಾಥ ಇವರು ಕೇರಳದ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ನೀಡಿದ ಹೇಳಿಕೆ !

ತಿರುವನಂತಪುರಂ (ಕೇರಳ) – ಇಸ್ರೋದ ಮುಖ್ಯಸ್ಥ ಶ್ರೀಧರ ಸೋಮನಾಥ ಇವರು ಚಂದ್ರಯಾನ 3 ರ ಅಭಿಯಾನ ಯಶಸ್ವಿ ಆದ ನಂತರ ತಿರುವನಂತಪುರಂದಲ್ಲಿನ ಪೂರ್ಣಮಿಕೌ ಭದ್ರಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಆ ಸಮಯದಲ್ಲಿ ಪತ್ರಕರ್ತರ ಜೊತೆಗೆ ಮಾತನಾಡುವಾಗ ಶ್ರೀಧರ ಸೋಮನಾಥ ಇವರು, ಭಾರತದ ಬಳಿ ಚಂದ್ರ, ಮಂಗಳ ಮತ್ತು ಶುಕ್ರ ಈ ಗ್ರಹಗಳವರೆಗೆ ಯಾನ ಕಳಿಸುವ ಕ್ಷಮತೆ ಇದೆ; ಆದರೆ ಅದಕ್ಕಾಗಿ ಆತ್ಮವಿಶ್ವಾಸ ಹೆಚ್ಚಿಸುವ ಅವಶ್ಯಕತೆ ಇದೆ. ಆತ್ಮವಿಶ್ವಾಸ ಹೆಚ್ಚಾದರೆ, ನಾವು ಪ್ರತಿಯೊಂದು ಗ್ರಹದ ಮೇಲೆ ತಲುಪಬಹುದು ಎಂದು ಹೇಳಿದರು.

ಶ್ರೀಧರ ಸೋಮನಾಥ ಇವರು ಮಾತು ಮುಂದುವರೆಸುತ್ತಾ, ಬಾಹ್ಯಾಕಾಶ ಕ್ಷೇತ್ರದ ವಿಕಾಸಕ್ಕಾಗಿ ಇನ್ನೂ ಆರ್ಥಿಕ ಹೂಡಿಕೆ ಆಗುವುದು ಅವಶ್ಯಕವಾಗಿದೆ. ನಮ್ಮ ಉದ್ದೇಶ ದೇಶದ ವಿಕಾಸ ಆಗಬೇಕು.

ವಿಜ್ಞಾನ ಮತ್ತು ಆಧ್ಯಾತ್ಮ ಇದರ ಸಂಶೋಧನೆ ಮಾಡುವುದು, ಇದು ನನ್ನ ಜೀವನದ ಭಾಗ !

ಶ್ರೀಧರ ಸೋಮನಾಥ ಇವರು, ನಾನು ಒಬ್ಬ ಸಂಶೋಧಕನಾಗಿದ್ದೇನೆ. ಚಂದ್ರನ ಸಂಶೋಧನೆ ಮಾಡುತ್ತಿದ್ದೇನೆ. ವಿಜ್ಞಾನ ಮತ್ತು ಆಧ್ಯಾತ್ಮ ಇದರ ಸಂಶೋಧನೆ ಮಾಡುವುದು, ನನ್ನ ಜೀವನ ಯಾತ್ರೆಯ ಒಂದು ಭಾಗವಾಗಿದೆ. ನಾನು ಅನೇಕ ದೇವಸ್ಥಾನಗಳಿಗೆ ಹೋಗುತ್ತೇನೆ ಹಾಗೂ ಅನೇಕ ಧರ್ಮ ಗ್ರಂಥಗಳನ್ನು ಓದುತ್ತೇನೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ತಮ್ಮನ್ನು ದೊಡ್ಡ ವಿಜ್ಞಾನಿ ಅನಿಸಿಕೊಳ್ಳುವ ಜಾತ್ಯತೀತರು, ಪ್ರಗತಿ (ಅಧೋಗತಿ) ಪರರಿಗೆ ತಪರಾಕಿ ! ಇಸ್ರೋದ ಮುಖ್ಯಸ್ಥ ಸೋಮನಾಥ ಇವರಿಂದ ಈ ಪ್ರಗತಿ(ಆಧೋಗತಿ) ಪರರು ಏನಾದರೂ ಕಲಿಯುವ ಸಾಧ್ಯತೆ ಇಲ್ಲ; ಕಾರಣ ಅವರಿಗೆ ಅವರ ಬುದ್ಧಿವಂತಿಕೆಯ ಅಹಂಕಾರ ಇದೆ.