ಬಂಗಾಲದಲ್ಲಿ ಪಟಾಕಿ ಅನಧಿಕೃತ ಕಾರ್ಖಾನೆಯ ಸಂಭವಿಸಿದ ಸ್ಫೋಟದಲ್ಲಿ 8 ಸಾವು

  • ಪೊಲೀಸರಿಗೆ ಮೊದಲೇ ಮಾಹಿತಿ ನೀಡಲಾಗಿತ್ತು !

  • ಮೇ ತಿಂಗಳಲ್ಲಿ ಅನಧಿಕೃತ ಪಟಾಕಿ ಕಾರ್ಖಾನೆಯೊಂದರಲ್ಲಿ ಸ್ಫೋಟ ನಡೆದಿತ್ತು !

ಕೋಲಕಾತಾ (ಬಂಗಾಲ) – ಬಂಗಾಲದ ಉತ್ತರ 24 ಪರಗಣ ಜಿಲ್ಲೆಯ ನೀಲ್ಗಂಜ್ ನಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ 8 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಸ್ಫೋಟದ ಸಮಯದಲ್ಲಿ ಕಾರ್ಖಾನೆಯಲ್ಲಿ ಹಲವರು ಕೆಲಸ ಮಾಡುತ್ತಿದ್ದರು.

ಈ ಹಿಂದೆ ಮೇ ತಿಂಗಳಲ್ಲಿ ರಾಜ್ಯದಲ್ಲಿ 7 ದಿನಗಳಲ್ಲಿ 3 ಸ್ಫೋಟಗಳು ಸಂಭವಿಸಿದ್ದವು. ಅವುಗಳಲ್ಲಿ ಒಂದು ತೃಣಮೂಲ ಕಾಂಗ್ರೆಸ್ ಮುಖಂಡರೊಬ್ಬರ ಬಿರಭೂಮ್ ಜಿಲ್ಲೆಯ ಮನೆಯಲ್ಲಿ ನಡೆದಿತ್ತು, ಇದರಲ್ಲಿ ಜೀವಹಾನಿಯಾಗಿರಲಿಲ್ಲ. ಅದಕ್ಕೂ ಮೊದಲು ದಕ್ಷಿಣ 24 ಪರಗಣಾದಲ್ಲಿ ಸಂಭವಿಸಿದ ಸ್ಫೋಟದಲ್ಲಿ 3 ಜನರು ಸಾವನ್ನಪ್ಪಿದ್ದರು. ಪೂರ್ವ ಮೇದಿನಿಪುರದಲ್ಲೂ ಮೇ 16 ರಂದು ಅನಧಿಕೃತ ಪಟಾಕಿ ಕಾರ್ಖಾನೆಯಲ್ಲಿ ಇದೇ ರೀತಿ ಘಟನೆ ನಡೆದಿತ್ತು. ಅದರಲ್ಲಿ 12 ಮಂದಿ ಪ್ರಾಣ ಕಳೆದುಕೊಂಡಿದ್ದರು.

ಸಂಪಾದಕೀಯ ನಿಲುವು

ರಾಜ್ಯದಲ್ಲಿ ಪಟಾಕಿಗಳ ಅನಧಿಕೃತ ಕಾರ್ಖಾನೆ ನಡೆಯುತ್ತಿರುವಾಗ ಹಾಗೂ ಅದರ ಬಗ್ಗೆ ಮೊದಲೇ ಮಾಹಿತಿ ನೀಡಿದರೂ ಪೊಲೀಸರು ನಿರ್ಲಕ್ಷ ಮಾಡುತ್ತಾರೆ, ಇದರಿಂದ ಅವರಿಗೆ ಲಂಚ ನೀಡಲಾಗಿತ್ತು ಎಂದು ತಿಳಿದುಕೊಳ್ಳಬೇಕೆ ? ಎಂದು ಪೊಲೀಸ್ ಮತ್ತು ರಾಜ್ಯದ ನಿಷ್ಕ್ರೀಯ ತೃಣಮೂಲ ಕಾಂಗ್ರಸ್ ಸರಕಾರ ಹಿಂದೂ ರಾಷ್ಟ್ರಕ್ಕೆ ಅನಿವಾರ್ಯಗೊಳಿಸುತ್ತದೆ !