ಸರಕಾರದಿಂದ ದುರ್ಗಾ ಪೂಜೆಯ ಮೇಲೆ ಹೇರಿದ್ದ ನಿಷೇಧವನ್ನು ಕೊಲಕಾತಾ ಉಚ್ಚ ನ್ಯಾಯಾಲಯದಿಂದ ರದ್ದು


ಕೋಲಕಾತಾ – ದುರ್ಗಾ ಪೂಜೆ ಇದು ಕೊಲಕಾತಾ ನಗರಕ್ಕಾಗಿ ಧಾರ್ಮಿಕ ಪ್ರತೀಕಗಿಂತಲೂ ಸಾಂಸ್ಕೃತಿಕ ಗುರುತು ಇರುವುದು ಎಂದು ಹೇಳುತ್ತಾ ಕೋಲಕಾತಾ ಉಚ್ಚ ನ್ಯಾಯಾಲಯವು ದುರ್ಗಾ ಪೂಜೆಯ ಮಂಟಪದ ಕುರಿತಾದ ಹೇರಿರುವ ನಿಷೇಧ ರದ್ದುಪಡಿಸಿದೆ. ಸರಕಾರಿ ಅಧಿಕಾರಿಗಳು ನ್ಯೂ ಟೌನ್ ಮೇಳ ಮೈದಾನದಲ್ಲಿ ಮಂಟಪ ಸಿದ್ದಗೊಳಿಸಲು ಅನುಮತಿ ನಿರಾಕರಿಸಿದ ನಂತರ ಅರ್ಜಿದಾರರು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಸಂವಿಧಾನದಲ್ಲಿ ಕಲಂ ೧೪ ರ ಅಡಿಯಲ್ಲಿ ಪ್ರಶ್ನಿಸಲಾಗಿತ್ತು.

ಇದರ ಬಗ್ಗೆ ತೀರ್ಪು ನೀಡುವಾಗ ನ್ಯಾಯಮೂರ್ತಿ ಭಟ್ಟಾಚಾರ್ಯ ಇವರು, ”ದುರ್ಗಾ ಪೂಜೆಯ ಉತ್ಸವವು ಅನೇಕ ಸಂಸ್ಕೃತಿಯ ಸಮ್ಮೇಳನದ ಹಾಗೆ ಇದೆ. ಇದು ಸ್ತ್ರೀ ಶಕ್ತಿಯ ಪ್ರತೀಕವಾಗಿದೆ. ಈ ಉತ್ಸವದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಅದರಲ್ಲಿ ಎಲ್ಲಾ ಸಮಾಜದ ಜನರು ಸಹಭಾಗಿ ಆಗುತ್ತಾರೆ.” ದುರ್ಗಾ ಪೂಜೆಗಾಗಿ ನಿಶ್ಚಯಿಸಿರುವ ಸ್ಥಳದಲ್ಲಿ ಮಂಡಪ ನಿರ್ಮಾಣಕ್ಕೆ ಅನುಮತಿ ನೀಡುವಂತೆ ಉಚ್ಚ ನ್ಯಾಯಾಲಯವು ಸರಕಾರಕ್ಕೆ ಆದೇಶ ನೀಡಿದೆ. (ಇದರಿಂದ ಸರಕಾರ ಕಾನೂನಿನ ರೀತಿಯಲ್ಲಿ ಅಲ್ಲ ಒತ್ತಡದಲ್ಲಿ ಕೆಲಸ ಮಾಡುತ್ತದೆ, ಎಂದು ನಾಗರೀಕರಿಗೆ ಅನಿಸಿದರೆ ತಪ್ಪೇನು ಇಲ್ಲ ? – ಸಂಪಾದಕರು)