ಇಸ್ರೋದ ವಿಜ್ಞಾನಿಗಳನ್ನು ಶ್ಲಾಘಿಸುವಾಗ ಪ್ರಧಾನ ಮಂತ್ರಿ ಮೋದಿಯವರ ಸಂತೋಷ ಉಕ್ಕಿ ಬಂದಿತು !
ಬೆಂಗಳೂರು – ಪ್ರಧಾನಿ ಮೋದಿ ಅವರು ಇಸ್ರೋದ ಯಶಸ್ಸಿನ ಬಗ್ಗೆ ಮಾತನಾಡುವಾಗ ಭಾವನಾತ್ಮಕರಾದರು. ಆ ಸಮಯದಲ್ಲಿ ಅವರು ಎಲ್ಲಾ ವಿಜ್ಞಾನಿಗಳನ್ನು ಅಭಿನಂದಿಸುತ್ತಾ, ಇಂತಹ ಪ್ರಸಂಗಗಳು ಬಹಳ ವಿರಳವಾಗಿರುತ್ತವೆ. ನಿಮ್ಮೆಲ್ಲರಲ್ಲಿ ಒಂದಾಗಿ ನನಗೆ ಬೇರೆಯೇ ಆನಂದ ಅನಿಸುತ್ತದೆ. ಇಂದು ಬೆಳಗ್ಗಿನ ಜಾವವೇ ನಾನು ಇಸ್ರೋದ ಕಚೆರಿಯಲ್ಲಿ ವಿಜ್ಞಾನಿಗಳನ್ನು ಭೇಟಿಗಾಗಿ ಬಂದಿರುವುದು ನಿಮ್ಮೆಲ್ಲರಿಗೂ ಅಡಚಣೆ ಆಗಿರಬಹುದು; ಆದರೆ ಭಾರತಕ್ಕೆ ಹಿಂತಿರುಗಿದ ನಂತರ ನನಗೆ ಆದಷ್ಟು ಬೇಗನೆ ನಿಮ್ಮ ದರ್ಶನಕ್ಕಾಗಿ ಬರುವುದಿತ್ತು. ಇದನ್ನು ಹೇಳುವಾಗ ಮೋದಿ ಅವರ ಭಾವನೆ ಉಕ್ಕಿ ಬಂದಿತು. ಪ್ರಧಾನಮಂತ್ರಿ ಮೋದಿಯವರು, ನಿಮ್ಮ ಶ್ರಮ, ಧೈರ್ಯ, ನಿಷ್ಠೆ ಮತ್ತು ಪರಾಕ್ರಮ ಇವುಗಳಿಗೆ ನನ್ನ ‘ಸಲಾಂ’ ಎಂದು ಹೇಳಿದರು.
India is on the moon!
We have our national pride placed on the moon! pic.twitter.com/lQXBybPMNo
— Narendra Modi (@narendramodi) August 26, 2023
ಪ್ರಧಾನಮಂತ್ರಿ ಮಾತು ಮುಂದುವರಿಸುತ್ತಾ, ನಿಮ್ಮ ಯಶಸ್ಸು ಸಾಮಾನ್ಯವಲ್ಲ. ಬಾಹ್ಯಾಕಾಶದಲ್ಲಿ ಭಾರತೀಯ ವಿಜ್ಞಾನಿಗಳ ಸಾಮರ್ಥ್ಯದ ಶಂಖನಾದವಾಗಿದೆ. ಭಾರತ ಚಂದ್ರನ ಮೇಲೆ ತಲುಪಿದೆ. ಎಲ್ಲಿ ಇಲ್ಲಿಯವರೆಗೆ ಯಾರು ತಲುಪಲು ಸಾಧ್ಯವಾಗಿರಲಿಲ್ಲ ಅಲ್ಲಿ ನಾವು ತಲುಪಿದ್ದೇವೆ, ನಾವು ಅದನ್ನು ಮಾಡಿದ್ದೇವೆ, ಯಾವುದು ಈ ಮೊದಲು ಯಾರು ಮಾಡಿರಲಿಲ್ಲ. ೨೧ ನೇ ಶತಮಾನದಲ್ಲಿ ಇದೆ ಭಾರತ ಜಗತ್ತಿನ ದೊಡ್ಡ ಸಮಸ್ಯೆಗಳನ್ನು ನಿವಾರಿಸುವುದು, ಎಂದು ಈ ಸಮಯದಲ್ಲಿ ಪ್ರಧಾನಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು.