ಆಗಸ್ಟ್ ೨೩ ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ ಪ್ರಧಾನಿ ಮೋದಿ ಘೋಷಣೆ

ಪ್ರಧಾನಮಂತ್ರಿ ಮೋದಿ ಇವರು ಇಸ್ರೋದ ವಿಜ್ಞಾನಿಗಳ ಜೊತೆಗೆ ಸಂವಾದ !

ಬೆಂಗಳೂರು – ‘ಚಂದ್ರಯಾನ 3’ ರ ‘ವಿಕ್ರಂ ಲ್ಯಾಂಡರ್’ ಚಂದ್ರನ ಮೇಲೆ ಇಳಿಯಿತು, ಅಂದು ಪ್ರಧಾನಮಂತ್ರಿ ಮೋದಿ ‘ಬ್ರಿಕ್ಸ್’ ಸಭೆಗಾಗಿ ದಕ್ಷಿಣ ಆಫ್ರಿಕಾದಲ್ಲಿದ್ದರು. ಅವರ ವಿದೇಶ ಪ್ರವಾಸ ಮುಗಿಸಿಕೊಂಡು ಅವರು ಭಾರತಕ್ಕೆ ಹಿಂತಿರುಗಿದ ನಂತರ, ಅವರು ‘ಇಸ್ರೋ’ದ ಬೆಂಗಳೂರಿನ ಕಚೇರಿಗೆ ಭೇಟಿ ನೀಡಿದರು. ಆ ಸಮಯದಲ್ಲಿ ಅವರು ಇಸ್ರೋದ ವಿಜ್ಞಾನಿಗಳ ಜೊತೆಗೆ ಸಂವಾದ ನಡೆಸುವಾಗ, ಆಗಸ್ಟ್ ೨೩ ರಂದು ‘ಚಂದ್ರಯಾನ-3’ ಅಭಿಯಾನ ಯಶಸ್ವಿ ಆಯಿತು. ನಮ್ಮ ಯುವ ಪೀಳಿಗೆಗೆ ಶಾಶ್ವತ ಪ್ರೇರಣೆ ದೊರೆಯಬೇಕು ಅದಕ್ಕಾಗಿ ಆಗಸ್ಟ್ ೨೩ ರಂದು ಭಾರತದ ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ ಎಂದು ಆಚರಿಸಲಾಗುವುದು ಎಂದು ಹೇಳಿದರು.

(ಸೌಜನ್ಯ – Asianet Suvarna News)

ಪ್ರಧಾನಮಂತ್ರಿ ಮೋದಿ ಇವರು ಮಾತು ಮುಂದುವರೆಸುತ್ತಾ, ಭಾರತದ ಯುವ ಪೀಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದಿಂದ ತುಂಬಿದ್ದಾರೆ. ಅದರ ಜೊತೆಗೆ ನಮ್ಮ ಬಾಹ್ಯಾಕಾಶ ಅಭಿಯಾನ ಯಶಸ್ವಿಯಾಗಿದೆ. ಮಂಗಳಯಾನ ಮತ್ತು ಚಂದ್ರಯಾನ ಈ ಅಭಿಯಾನಗಳ ಯಶಸ್ಸು ಹಾಗೂ ಮುಂಬರುವ ಗಗನಯಾನದಿಂದ ದೇಶದ ಯುವ ಪೀಳಿಗೆಗೆ ಹೊಸ ಉತ್ಸಾಹ ದೊರೆಯುತ್ತಿದೆ. ಭಾರತದಲ್ಲಿನ ಪ್ರತಿಯೊಂದು ಚಿಕ್ಕ ಮಗು ವಿಜ್ಞಾನಿಯ ರೂಪದಲ್ಲಿ ತನ್ನ ಭವಿಷ್ಯ ನೋಡುತ್ತಿದೆ. ಆದ್ದರಿಂದ ನೀವು (ವಿಜ್ಞಾನಿಗಳು) ಕೇವಲ ಚಂದ್ರನ ಮೇಲೆ ರಾಷ್ಟ್ರಧ್ವಜ ಹಾರಿಸಲಿಲ್ಲ, ಬದಲಾಗಿ ಒಂದು ದೊಡ್ಡ ಯಶಸ್ಸು ಗಳಿಸಿದ್ದೀರಿ. ಇದರಿಂದ ಭಾರತದ ಸಂಪೂರ್ಣ ಪೀಳಿಗೆ ಜಾಗೃತವಾಗಿದ್ದು ಅವರಿಗೆ ಹೊಸ ಶಕ್ತಿ ದೊರೆತಿದೆ. ಇಂದು ನೀವು ಭಾರತೀಯ ಮಕ್ಕಳಲ್ಲಿ ಆಕಾಂಕ್ಷೆಯ ಬೀಜ ಬಿತ್ತಿದ್ದೀರಿ, ಅದು ನಾಳೆ ಆಲದ ಮರವಾಗುವುದು, ಎಂದು ಈ ಸಮಯದಲ್ಲಿ ಮೋದಿಯವರು ವಿಶ್ವಾಸ ಕೂಡ ವ್ಯಕ್ತಪಡಿಸಿದರು.