ಪ್ರಿಗೋಝಿನ್ ಇವರಿಂದ ಕೆಲವು ತಪ್ಪುಗಳು ಆಗಿರಬಹುದು, ಆದರೂ ಅವರು ಓರ್ವ ಪ್ರತಿಭಾವಂತ ಉದ್ಯಮಿಯಾಗಿದ್ದರು !

ಮಾಸ್ಕೋ (ರಷ್ಯಾ) – ಪ್ರಿಗೋಝಿನ್ ಓರ್ವ ಪ್ರತಿಭಾವಂತ ಉದ್ಯಮಿಯಾಗಿದ್ದರು. ಅವರಿಂದ ಕೆಲವು ತಪ್ಪುಗಳು ಆಗಿರಬಹುದು, ಅದು ಸತ್ಯವಾಗಿದ್ದರು ವಿಮಾನ ಅಪಘಾತದಲ್ಲಿ ಅವರ ಮೃತ್ಯು ಆಗಿರುವುದಕ್ಕೆ ನನಗೆ ದುಃಖವಾಗಿದೆ, ಎಂದು ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತಿನ್ ಇವರು ‘ವ್ಯಾಗನರ್ ಆರ್ಮಿ’ಯ ಮುಖ್ಯಸ್ಥ ಯೇವಗೆನಿ ಪ್ರಿಗೋಝಿನ್ ಇವರ ವಿಮಾನ ಅಪಘಾತದಲ್ಲಿ ಆಗಿರುವ ನಿಧನದ ಬಗ್ಗೆ ದುಃಖ ವ್ಯಕ್ತಪಡಿಸಿದರು. ಜೂನ್ ೨೦೨೩ ರಲ್ಲಿ ಪ್ರಿಗೋಝಿನ್ ಇವರು ಪುತಿನ ವಿರುದ್ಧ ಬಂಡಾಯ ಎದ್ದಿದ್ದರು. ಪ್ರಿಗೋಝಿನ್ ಇವರ ಜೊತೆಗೆ ೧೦ ಜನರು ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಪುತಿನ್ ಮಾತು ಮುಂದುವರಿಸಿ, ಪ್ರಿಗೋಝಿನ್ ಇವರನ್ನು ನಾನು ಅನೇಕ ವರ್ಷಗಳಿಂದ ನೋಡಿದ್ದೇನೆ. ೧೯೯೦ ರ ಸುಮಾರಿಗೆ ನಾನು ಮೊದಲ ಬಾರಿ ಭೇಟಿ ಮಾಡಿದ್ದೆ. ಅವರ ಬಗ್ಗೆ ಕೆಲವು ಸಮಸ್ಯೆಗಳು ಖಚಿತವಾಗಿ ಇದ್ದವು. ಪ್ರಿಗೋಝಿನ್ ಇವರು ಜೀವನದಲ್ಲಿ ಕೆಲವು ಗಂಭೀರ ಮತ್ತು ದೊಡ್ಡ ತಪ್ಪುಗಳನ್ನು ಮಾಡಿದ್ದರು; ಆದರೆ ಅನೇಕ ಒಳ್ಳೆಯ ಕಾರ್ಯಗಳು ಕೂಡ ಮಾಡಿದ್ದರು. ಅನೇಕ ಸಾರಿ ನಾನು ಅವರಿಗೆ ಕೆಲವು ಕೆಲಸಗಳು ಹೇಳಿದ್ದೇನೆ. ವ್ಯಾಗನಾರ್ ಯುಕ್ರೇನಿನಲ್ಲಿ ಏನೆಲ್ಲಾ ಮಾಡಿದ್ದಾರೆ ಅದು ನಾವು ಮರೆಯಲು ಸಾಧ್ಯವಿಲ್ಲ.
ಪ್ರಿಗೋಝಿನ್ ಇವರ ವಿಮಾನಿನ ಮೇಲೆ ರಷ್ಯಾದಿಂದ ಕ್ಷಿಪಣಿ ಹಾರಿಸಲಾಗಿದೆ ಎಂದು ಅಮೇರಿಕಾದ ಸಂದೇಹ ಪ್ರಿಗೋಝಿನ್ ಇವರ ವಿಮಾನಿನ ಮೇಲೆ ಕ್ಷಿಪಣಿ ಹಾರಿಸಿರುವ ಅನುಮಾನ ನಮಗಿದೆ ಎಂದು ಅಮೇರಿಕಾದ ಓರ್ವ ಅಧಿಕಾರಿ ಹೆಸರು ಬಹಿರಂಗಪಡಿಸದೇ ಇರುವ ಶರತ್ತಿನಲ್ಲಿ ರೈಟರ್ಸ್ ಈ ವಾರ್ತಾ ಸಂಸ್ಥೆಗೆ ಹೇಳಿದೆ. ಇದು ಭೂಮಿಯಿಂದ ಗಾಳಿಯಲ್ಲಿ ಹಾರಿಸುವ ಕ್ಷಿಪಣಿಯಾಗಿದೆ ಮತ್ತು ಅದು ರಾಷ್ಯಾದ ಸೈನ್ಯ ಸ್ಥಳದಿಂದ ಹಾರಿಸಲಾಗಿದೆ. ಅಮೇರಿಕಾ ಅಲ್ಲದೆ ಜಗತ್ತಿನಲ್ಲಿ ಬೇರೆ ಕೆಲವು ತನಿಖಾ ವ್ಯವಸ್ಥೆ ಈ ಪ್ರಕರಣದ ಬಗ್ಗೆ ಸೂಕ್ಷ್ಮ ಗಮನ ಇರಿಸಿದೆ ಮತ್ತು ಆದಷ್ಟು ಬೇಗನೆ ಈ ಪ್ರಕರಣದಲ್ಲಿನ ಇನ್ನೂ ಕೆಲವು ಅಂಶಗಳು ಬಹಿರಂಗವಾಗುವ ಸಾಧ್ಯತೆ ಇದೆ.
Putin offers ‘condolences’ after presumed death of Yevgeny Prigozhin https://t.co/Z1xLhAg4IR
— Travis Jarmon (@venture_travel1) August 25, 2023
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers