ಭೋಪಾಲ (ಮಧ್ಯಪ್ರದೇಶ) – ರಾಷ್ಟ್ರೀಯ ತನಿಖಾ ದಳದಿಂದ (ಎನ್.ಐ.ಎ. ಇಂದ) ಇತ್ತೀಚಿಗೆ ಬಂಧಿಸಿರುವ ಇಸ್ಲಾಮಿಕ್ ಸ್ಟೇಟ್ ನ ಜಿಹಾದಿ ಭಯೋತ್ಪಾದಕ ಸಂಘಟನೆಯ ಭಯೋತ್ಪಾದಕ ಕಾಸಿಫ ಖಾನ್ ಇವನು ಪೊಲೀಸ ತನಿಖೆಯಲ್ಲಿ ಅನೇಕ ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ್ದಾನೆ. ಕಾಸಿಫ ಖಾನ್ ಇವನು ಭೋಪಾಲದಲ್ಲಿ ಬಾಂಬ್ ಸ್ಫೋಟ ನಡೆಸುವ ಷಡ್ಯಂತ್ರ ರೂಪಿಸಿದ್ದ. ಹಾಗೂ ಸಂಪೂರ್ಣ ಮಧ್ಯಪ್ರದೇಶದಲ್ಲಿ ಇಸ್ಲಾಮಿಕ್ ಸ್ಟೇಟ್ ನ ಬಲೆ ಬೀಸುವ ಹೊಣೆಯನ್ನು ಇವನಿಗೆ ನೀಡಲಾಗಿತ್ತು. ಕಾಸಿಫ ಸಾಮಾಜಿಕ ಜಾಲತಾಣದಲ್ಲಿ ಭಯೋತ್ಪಾದನೆಯ ಪ್ರಚಾರ ಮಾಡುತ್ತಿದ್ದನು, ಹಾಗೂ ಅವನು ಕಾಡಿನಲ್ಲಿ ಶಸ್ತ್ರಾಸ್ತ್ರಗಳ ಪ್ರಶಿಕ್ಷಣ ಕೂಡ ನೀಡುತ್ತಿದ್ದನು.
ಒಂದು ವಾರ್ತಾ ಸಂಸ್ಥೆ ನೀಡಿರುವ ಮಾಹಿತಿಯ ಪ್ರಕಾರ, ಕಾಸಿಫನ ಗುರಿ ಭೋಪಾಲದ ರಾಣಿ ಕಮಲಪತಿ ರೈಲ ನಿಲ್ದಾಣವಾಗಿತ್ತು. ಅವನು ಭೋಪಾಲದಲ್ಲಿನ ಬೇರೆ ಜನಜಂಗುಳಿ ಸ್ಥಳಗಳನ್ನು ಗುರಿ ಮಾಡುವ ಯೋಜನೆ ಮಾಡುತ್ತಿದ್ದನು. ಕಾಸಿಫನು ಅವನ ಯೋಜನೆ ಪೂರ್ಣಗೊಳಿಸುವದಕ್ಕಾಗಿ ಭೋಪಾಲದಲ್ಲಿನ ಅನೇಕ ಜನಜಂಗುಳಿ ಇರುವ ಪ್ರದೇಶದ ಪರಿಶೀಲನೆ ಮಾಡುತ್ತಿದ್ದನು. ಈ ವರ್ಷದ ಮೇ ತಿಂಗಳಲ್ಲಿ ಎನ್.ಐ.ಎ.ಯು ಮಹಮ್ಮದ್ ಆದಿಲ್ ಖಾನ್, ಸೈಯದ್ ಮಮೂರ ಅಲಿ ಮತ್ತು ಮಹಮ್ಮದ್ ಶಾಹಿದ್ ರನ್ನು ಜಬಲಪುರದಿಂದ ಬಂಧಿಸಿದ್ದರು. ಇವರೆಲ್ಲರೂ ಇಸ್ಲಾಮಿಕ್ ಸ್ಟೇಟ್ ನ ಜೊತೆ ಸಂಬಂಧ ಹೊಂದಿರುವ ಆರೋಪಿಗಳಾಗಿದ್ದರು. ಎನ್.ಐ.ಎ. ಇಂದ ಮೂವರ ವಿಚಾರಣೆ ನಡೆಸಿದ ನಂತರ ಕಾಸಿಫನ ಶೋಧ ಮುಂದುವರೆಸಿದ್ದರು.
Madhya Pradesh: Arrested ISIS terrorist Kashif was plotting explosion at Rani Kamlapati station in Bhopal, trying to find a new training camp https://t.co/3BQrmU8dxt
— OpIndia.com (@OpIndia_com) August 24, 2023
ಸಂಪಾದಕರ ನಿಲುವು
|