ಬಾಗಲಕೋಟ – ದಿನಾಂಕ: ಆಗಸ್ಟ್ ೨೨ ರಂದು ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ಶ್ರೀ ದಾನಮ್ಮ ದೇವಿ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿಗೆ ತರಬೇಕೆಂದು ಸ್ಥಳೀಯ ಹಿಂದೂ ಧರ್ಮಪ್ರೇಮಿಗಳು, ಮಹಿಳಾ ಸಂಘಟನೆಗಳು ಮತ್ತು ಹಿಂದೂ ಜನಜಾಗೃತಿ ಸಮಿತಿ ಸೇರಿ ದೇವಸ್ಥಾನದ ಅಧ್ಯಕ್ಷರಾದ ಶ್ರೀ. ರಾಚಪ್ಪ ಕರೆವನ ಇವರಿಗೆ ಮನವಿಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಡಾ|| ವೀರಭದ್ರ ಹೊಸಪೇಟೆ, ಶ್ರೀಕುಮಾರ್ ಮಠದ, ಲಿಂಗಪ್ಪ ಹಿರೇಸೋಮಣ್ಣನವರ ಮತ್ತು ಮಹಿಳಾ ಸಂಘಟನೆಯಿಂದ ದಾನಮ್ಮ ಚನ್ನಯ್ಯಗೋಳ, ವೀಣಾ ಮಠದ, ಆಶಾ ಶೆಟ್ಟಿ, ಸುರೇಖಾ ಜೈನ, ವಿಜಯ ಹಂಗರಗಿ ಡಾ|| ಸುಮೇದಾ ಮಾನೆ ಹೀಗೆ ಸುಮಾರು ೩೦ ಜನ ಉಪಸ್ಥಿತಿ ಇದ್ದರು. ಈ ಸಂದರ್ಭದಲ್ಲಿ ಸೌ. ವೀಣಾ ಮಠದ ಇವರು ವಸ್ತ್ರಸಂಹಿತೆ ಬಗ್ಗೆ ಮಾತನಾಡಿದರು ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ವೆಂಕಟರಮಣ ನಾಯಕರವರು ವಸ್ತ್ರಸಂಹಿತೆಯ ಮಹತ್ವ, ಪಾಶ್ಚಾತ್ಯ ಸಂಸ್ಕ್ರತಿ ವಿಕೃತಿ ಹಾಗೂ ಸನಾತನ ಸಂಸ್ಕ್ರತಿ ಶ್ರೇಷ್ಟತೆ ಬಗ್ಗೆ ಸವಿಸ್ತಾರವಾಗಿ ಹೇಳಿದರು. ತದನಂತರ ದೇವಸ್ಥಾನದಲ್ಲಿ ಬರುವವರಿಗಾಗಿ ಕುಂಕುಮ ಹಚ್ಚಿಕೊಳ್ಳಲು ವ್ಯವಸ್ಥೆಯನ್ನು ಮಾಡಬೇಕೆಂದು ಹಾಗೂ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಅಳವಡಿಸಲಾಗಿದೆ ಎಂದು ದೇವಸ್ಥಾನದ ದ್ವಾರದ ಬಳಿ ಫಲಕ ಹಾಕಬೇಕೆಂದು ಹೇಳಲಾಯಿತು. ನಂತರ ದೇವಸ್ಥಾನದ ಟ್ರಸ್ಟಿಯವರು ನೀವು ಹೇಳಿದ ಹಾಗೆ ಫಲಕ ಹಾಕುತ್ತೇವೆ. ದೇವಸ್ಥಾನದ ಪಾವಿತ್ರ್ಯ ಕಾಪಾಡಲು ನಾವು ವ್ಯವಸ್ಥೆ ಮಾಡುತ್ತೇವೆ. ನಾವು ಜನರನ್ನು ಸೇರಿಸುತ್ತೇವೆ ನೀವು ಇನ್ನೊಮ್ಮೆ ಬಂದು ನಮ್ಮ ಹಿಂದೂ ಧರ್ಮ ಮತ್ತು ಸಂಸ್ಕ್ರತಿಯ ಮಹತ್ವವನ್ನು ಹೇಳಬೇಕೆಂದು ಹಿಂದೂ ಜನಜಾಗೃತಿ ಸಮಿತಿಯವರಿಗೆ ವಿನಂತಿ ಮಾಡಿಕೊಂಡರು.
ಗಮನಾರ್ಹ ವಿಷಯಗಳು :
ದೇವಸ್ಥಾನದ ಟ್ರಸ್ಟಿಯವರು ಧರ್ಮಶಿಕ್ಷಣ ವರ್ಗದ ಮಹಿಳಾ ಸಾಧಕರನ್ನ ಉದ್ದೇಶಿಸಿ, ‘ನೀವು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಇಷ್ಟು ಜನ ಮಹಿಳೆಯರು ಸೇರಿ ನಮ್ಮ ಇಡೀ ಮುಧೋಳ ತಾಲೂಕನ್ನು ಸುಸಂಸ್ಕ್ರತರನ್ನಾಗಿ ಮಾಡಬಹುದು’ ಎಂದು ಹೇಳಿದರು.
ರನ್ನ ಟಿವಿ ಚಾನಲನವರು ಸ್ವತಃ ಬಂದು ವಿಡಿಯೋ ಮಾಡಿಕೊಂಡು ಹೋದರು.
ಸೇರಿದಂತ ಎಲ್ಲ ಮಹಿಳೆಯರು ನಾವು ನಮ್ಮ ತಾಲೂಕಿನ ಎಲ್ಲಾ ದೇವಸ್ಥಾನಗಳಲ್ಲಿ ಈ ರೀತಿ ವಸ್ತ್ರಸಂಹಿತೆ ಕಾರ್ಯಕ್ರಮ ಮಾಡೋಣವೆಂದು ಹೇಳಿದರು.